ಬೆಟ್ಟಂಪಾಡಿ: ಇಲ್ಲಿನ ಬಿಲ್ವಗಿರಿ – ದೇವಮಣಿ – ಕೋನಡ್ಕ ಹಾಗೂ ಬಿಲ್ವಗಿರಿ – ಎಂಪೆಕಲ್ಲು ಸಂಪರ್ಕ ರಸ್ತೆ ಅಭಿವೃದ್ಧಿ ಗೆ ಶಾಸಕರ ವಿಶೇಷ ಅನುದಾನದ ಭೂಮಿ ಪೂಜೆಯನ್ನು ಶಾಸಕ ಅಶೋಕ್ ಕುಮಾರ್ ರೈ ಮಾ. 30 ರಂದು ನೆರವೇರಿಸಿದರು. ಉಭಯ ರಸ್ತೆಗಳಿಗೆ ತಲಾ ರೂ. 50 ಲಕ್ಷ ಅನುದಾನವನ್ನು ಶಾಸಕರ ವಿಶೇಷ ಅನುದಾನದಲ್ಲಿ ಇಡಲಾಗಿದೆ.

ಭೂಮಿ ಪೂಜೆ ವೇಳೆ ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಸದಸ್ಯರಾದ ಅವಿನಾಶ್ ಕುಡ್ಚಿಲ, ಗ್ರೆಟ್ಟಾ ಡಿ’ಸೋಜ, ರಾಮಕೃಷ್ಣ ಭಟ್ ದೇವಮಣಿ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯರಾದ ನವೀನ್ ರೈ ಚೆಲ್ಯಡ್ಕ, ಮೊಯಿದು ಕುಂಞಿ ಕೋನಡ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಅಬೂಬಕ್ಕರ್ ಕೊರಿಂಗಿಲ, ಹರೀಶ್ ಪೂಜಾರಿ ನಿಡ್ಪಳ್ಳಿ, ಮಾಧವ ಪೂಜಾರಿ ರೆಂಜ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಸ್ತೆಯ ಫಲಾನುಭವಿ ನಾಗರಿಕರು ಪಾಲ್ಗೊಂಡರು. ನವೀನ್ ರೈ ಚೆಲ್ಯಡ್ಕ ಸ್ವಾಗತಿಸಿ, ವಂದಿಸಿದರು.