





ಕಾಣಿಯೂರು: ಪಳ್ಳತ್ತಾರು ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ ನಡೆಯಿತು. ಪವಿತ್ರ ತಿಂಗಳಾದ ರಂಝಾನಿನಲ್ಲಿ ನಾವು ಅಲ್ಲಾಹನ ಸ್ಮರಣೆಯೊಂದಿಗೆ ಆಧ್ಯಾತ್ಮಿಕತೆ ಮೈಗೂಡಿಸಿದಂತೆ ರಂಝಾನಿನ ಬಳಿಕವೂ ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಬೇಕು.ಎಲ್ಲರಿಗೂ ಒಳ್ಳೆಯದನ್ನು ಬಯಸುವ ಹೃದಯ ವೈಶಾಲ್ಯತೆ ನಮಗಿರಬೇಕು.ಯುವ ಸಮೂಹವು ಯಾವುದೇ ಕಾರಣಕ್ಕೂ ಲಹರಿ ಪದಾರ್ಥಗಳ ವ್ಯಸನಿಗಳಾಗಬಾರದು ಎಂದು ಪಳ್ಳತ್ತಾರು ಖತೀಬ್ ಮುಶ್ತಾಕ್ ಕಾಮಿಲ್ ಸಖಾಫಿ ಈದ್ ಸಂದೇಶ ನೀಡಿದರು.



ಬಳಿಕ ಖುತ್ಬಾ ಪಾರಾಯಣ ನಡೆಸಿ ಈದ್ ನಮಾಝಿಗೆ ನೇತೃತ್ವ ನೀಡಿದರು. ಈ ಸಂದರ್ಭದಲ್ಲಿ ಜಮಾಅತಿನ ಪದಾಧಿಕಾರಿಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು.











