ಪುತ್ತೂರು: ಪುತ್ತೂರು ಸೇರಿದಂತೆ ಸುತ್ತ ಮುತ್ತಲಿನ ಡೆಸೆರ್ಟ್ ಪ್ರಿಯರನ್ನು ಸಮುದ್ರದ ಬೋಟಿನ ಕಲ್ಪನೆಯಲ್ಲಿ ವಿವಿಧ ಫ್ಲೇವರ್‌ಗಳ ವೈವಿಧ್ಯಮಯ, ನೈಸರ್ಗಿಕ ಸವಿ ಉಣಿಸುವ ಮಳಿಗೆ ಮರಿಕೆ ನ್ಯಾಚುರಲ್ ಐಸ್‌ಕ್ರೀಂನವರ ‘ದಿ ಬೋಟ್ ಹೌಸ್’ ಮಾ.30ರಂದು ಎಪಿಎಂಸಿ ರಸ್ತೆಯ ತ್ರಿನೇತ್ರ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ್ವಾರಕಾ ಕಾರ್ಪೋರೇಷನ್‌ನ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಮಾತನಾಡಿ, ಶುದ್ಧ ಆಹಾರ ಉತ್ಪನ್ನಗಳನ್ನು ಪುತ್ತೂರಿನ ಮಟ್ಟಿಗೆ ಮರಿಕೆಯಲ್ಲಿ ಕಾಣಲು ಸಾಧ್ಯ. ಸುಲಭ ಸಾಧ್ಯವಾಗಿ ಸಿಗಲು ಸುಹಾಸ್ ಕಾರಣರು. ಸಾವಯವ ಕೃಷಿಯಲ್ಲಿ ಸದಾಶಿವ ಮರಿಕೆ ಅವರ ಕೆಲಸ ಇಲ್ಲಿಗೆ ಪೂರಕ. ಇದೀಗ ಕೂತು ತಿನ್ನುವ ಪ್ರಯತ್ನ. ರಾಸಾಯನಿಕ ಪ್ರೇರಿತ ಹಾಗೂ ಪೂರಿತ ಕಾಲಘಟ್ಟದಲ್ಲಿ ರಾಸಾಯನಿಕ ರಹಿತ ಉತ್ಪನ್ನ ತಯಾರಿಸಿ, ಸಮಾಜಕ್ಕೆ ನೀಡಬೇಕು, ಜನರ ಆರೋಗ್ಯ ವೃದ್ಧಿಸಬೇಕು ಎನ್ನುವ ಆಲೋಚನೆ ಅವರದ್ದು. ಬೋಟ್ ಹೌಸ್ ಶಿಪ್ ಹೌಸ್‌ನಷ್ಟು ಬೆಳೆಯಲಿ. ಇಲ್ಲಿನ ಉತ್ಪನ್ನ ಬೆಳೆಯಲಿ ಎಂದು ಹಾರೈಸಿದರು.
ತ್ರಿನೇತ್ರ ಕಾಂಪ್ಲೆಕ್ಸ್ ಪಾಲುದಾರ ವೆಂಕಟೇಶ್ ಭಟ್ ಮಾತನಾಡಿ, ಯುಗಾದಿಯ ಶುಭದಿನ ದ ಬೋಟ್ ಹೌಸ್ ಆರಂಭಗೊಂಡಿದೆ. ಪುತ್ತೂರಿಗೆ ಇದರಿಂದ ಒಳ್ಳೆಯದಾಗಲಿ. ಜನರು ಅಚ್ಚುಕಟ್ಟಾದ ಆಹಾರ ಸವಿಯುವಂತಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಮ್ಹಾಲಕ ಕೃಷ್ಣ ಕುಮಾರ್ ಈಂದುಗುಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಐಟಿ ಉದ್ಯೋಗಿಯಾಗಿದ್ದ ನಾನು, ಆಹಾರ ಪದ್ಧತಿಯಿಂದ ಆರೋಗ್ಯ ಕೆಡಿಸಿಕೊಂಡೆ. ಸೈಕ್ಲಿಂಗ್ ನನ್ನ ಹವ್ಯಾಸವಾಗಿದ್ದು, ಒಮ್ಮೆ ಸೈಕ್ಲಿಂಗ್ ಹೋಗುತ್ತಿದ್ದಾಗ ಸಾವಯವ ಆಹಾರದ ಬಗ್ಗೆ ಆಲೋಚಿಸಿದೆ. ಆಗ ಹುಟ್ಟಿಕೊಂಡಿದ್ದೇ ದ ಬೋಟ್ ಹೌಸ್ ಕಲ್ಪನೆ. ಮೈದಾ ಬಳಕೆಗೆ ಗುಡ್ ಬಾಯ್ ಹೇಳಿ ಅದರ ಬದಲಾಗಿ ಗೋಧಿ ಉಪಯೋಗಿಸಲಾಗಿದೆ. ಸಾವಯವ ವಸ್ತುಗಳನ್ನೇ ಬಳಸಿ ಆಹಾರ ತಯಾರಿಸಿರುವುದು ಇಲ್ಲಿನ ವಿಶೇಷತೆಯಾಗಿದೆ ಎಂದರು.
ತ್ರಿನೇತ್ರ ಕಾಂಪ್ಲೆಕ್ಸ್ ಪಾಲುದಾರ ಗಿರಿಧರ್ ಹೆಗ್ಡೆ ಉಪಸ್ಥಿತರಿದ್ದರು. ಮರಿಕೆ ಸಾವಯವ ಮಳಿಗೆಯ ಸುಹಾಸ್ ಮರಿಕೆ ಸ್ವಾಗತಿಸಿ, ವಂದಿಸಿದರು. ಪಶುಪತಿ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ಅಪ್ಪಟ ಸಾವಯವ ಆಹಾರಗಳ ಕೆಫೆಯಾಗಿರುವ ದ. ಬೋಟ್ ಹೌಸ್‌ನಲ್ಲಿ ಫಿಜ್ಜಾ, ಜ್ಯೂಸ್, ಮಿಲ್ಕ್ ಶೇಕ್, ಫಲೂದಾ, ಮೋಮೊಸ್, ಸ್ಯಾಂಡ್ ವಿಚ್, ಐಸ್‌ಕ್ರೀಮ್‌ಗಳು ಸೇರಿದಂತೆ ಹಲವು ಸಾವಯವ ಆಹಾರಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.