ಕೆಪಿಟಿಸಿಎಲ್‌ನ ಕಿರಿಯ ಇಂಜಿನಿಯರ್ ವಿಲಿಯಂ ಫ್ರಾನ್ಸಿಸ್ ಲೋಬೋ ನಿವೃತ್ತಿ

0

ಪುತ್ತೂರು: ಕೆಪಿಟಿಸಿಎಲ್‌ನ ಪುತ್ತೂರು 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಿರಿಯ ಇಂಜಿನಿಯರ್ ಆಗಿದ್ದ ವಿಲಿಯಂ ಫ್ರಾನ್ಸಿಸ್ ಲೋಬೋ ಮಾ.31ರಂದು ವಯೋ ನಿವೃತ್ತಿ ಹೊಂದಿರುತ್ತಾರೆ.


1996ರಲ್ಲಿ ಅಂದಿನ ಕೆಇಬಿಯ ಪುತ್ತೂರು ನಗರ ಉಪ ವಿಭಾಗಗಕ್ಕೆ ನೇಮಕಗೊಂಡಿದ್ದರು. 2002ರಲ್ಲಿ ಪುತ್ತೂರು ಸರ್ವೀಸ್ ಸ್ಟೇಷನ್‌ನಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಕಡಬದಲ್ಲಿ ಒUSS ನಲ್ಲಿ ಆಪರೇಟರ್ ಆಗಿ, ನಂತರ 2015ರಲ್ಲಿ ಕಿರಿಯ ಇಂಜಿನಿಯರ್ ಆಗಿ ಪದೋನ್ನತಿ ಪಡೆದು ಕೆಪಿಟಿಸಿಎಲ್‌ನ ಪುತ್ತೂರು ವಿತರಣಾ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದರು. ಮೆಸ್ಕಾಂನಲ್ಲಿ 20 ವರ್ಷ ಹಾಗೂ ಕೆಪಿಟಿಸಿಎಲ್‌ನಲ್ಲಿ 9 ವರ್ಷ ಸೇರಿದಂತೆ ಇಲಾಖೆಯಲ್ಲಿ ಒಟ್ಟು 29 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ನಿವೃತ್ತಿಗೊಂಡಿರುತ್ತಾರೆ.


ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಇಲ್ಲಿನ ಶಿಕ್ಷಕಿ ಮರ್ಸಿ ಮಮತಾ ಮೋನಿಸ್, ಪುತ್ರಿ ಮೆಲಿಟಾ ಲೋಬೋ ಹಾಗೂ ಪುತ್ರ ಮೆಲ್ಟನ್ ಲೋಬೋರವರೊಂದಿಗೆ ನೆಲ್ಲಿಕಟ್ಟೆಯಲ್ಲಿ ವಾಸವಿದ್ದಾರೆ.

LEAVE A REPLY

Please enter your comment!
Please enter your name here