ವಾಹನ ಚಾಲಕರಿಗೆ ಅನಗತ್ಯ ತೊಂದರೆ ನೀಡದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರಿಂದ ಪೊಲೀಸರಿಗೆ ಮನವಿ

0

ಪುತ್ತೂರು: ಯುಗಾದಿ, ರಂಜಾನ್, ಗುಡ್ ಫ್ರೈಡೆ, ಮಹಾವೀರ ಜಯಂತಿ ಮತ್ತು ಪುತ್ತೂರು ಜಾತ್ರೆಯ ಸಂದರ್ಭದಲ್ಲಿ ವಾಹನ ಚಾಲಕರಿಗೆ ಅನಗತ್ಯ ತೊಂದರೆಗಳನ್ನು ನೀಡದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ಮಾ.28ರಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.


ಯುಗಾದಿ,ರಂಜಾನ್, ಗುಡ್ ಫ್ರೈಡೆ, ಮಹಾವೀರ ಜಯಂತಿ ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವನ್ನು ಬಹಳಷ್ಟು ಸಂಭ್ರಮದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ವಾಹನ ಚಾಲಕರಿಗೆ ಅನಗತ್ಯ ತೊಂದರೆ ನೀಡುತ್ತಿರುವ ಬಗ್ಗೆ ದೂರು ಮತ್ತು ತೊಂದರೆ ನೀಡದಂತೆ ಅನೇಕ ಮನವಿಗಳು ಸಾರ್ವಜನಿಕರಿಂದ ಬಂದಿರುತ್ತದೆ. ಹೀಗಾಗಿ ವಿಶೇಷ ಮುತುವರ್ಜಿ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷ್ಣಪ್ರಸಾದ್ ಆಳ್ವ ರವರು ಆಗ್ರಹಿಸಿದ್ದು, ನಗರ ಠಾಣಾ ಇನ್ಸ್‌ಪೆಕ್ಟರ್ ಜಾನ್ಸನ್ ಡಿ ಸೋಜ ಹಾಗೂ ಸಂಚಾರಿ ಠಾಣಾ ಎಸ್‌ಐ ಉದಯ ರವಿಯವರು ಮನವಿಗೆ ಪೂರಕ ಸ್ಪಂಧನೆ ನೀಡಿರುವುದಾಗಿ ಕೃಷ್ಣ ಪ್ರಸಾದ್ ಅಳ್ವ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here