ಪುತ್ತೂರು: ವರ್ಷದ ಹಿಂದೆ ಪುತ್ತೂರಿನ ಬೊಳ್ವಾರಿನಲ್ಲಿ ಆರಂಭಗೊಂಡ ಫೀನಿಕ್ಸ್ ಕ್ಲಿನಿಕ್ ಇದರ ಎರಡನೇ ಶಾಖೆಯು ಕೋಡಿಂಬಾಡಿ ಶಿವ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಮಾ.31 ರಂದು ಉದ್ಘಾಟನೆಗೊಂಡಿತು.
ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು ಪವಿತ್ರ ಜಲ ಸಿಂಪಡಿಸಿ ಮಾತನಾಡಿ, ಪ್ರತಿಯೋರ್ವ ಮನುಷ್ಯ ಸಮಾಜದಲ್ಲಿ ತನ್ನ ಜೀವನ ಕಂಡುಕೊಳ್ಳಲು ಯಾವುದಾದರೂ ಉದ್ಯೋಗವನ್ನು ಆರಿಸಿಕೊಳ್ಳುತ್ತಾನೆ. ನಾವು ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಾಜದಲ್ಲಿ ಸೇವೆಯನ್ನು ಮಾಡಬೇಕಾಗುತ್ತದೆ. ಕಳೆದ ವರ್ಷ ಆರಂಭಗೊಂಡ ಈ ಕ್ಲಿನಿಕ್ ಇದೀಗ ಎರಡನೇ ಶಾಖೆಯನ್ನು ಈ ಭಾಗದಲ್ಲಿ ಆರಂಭಿಸಿ ಜನರ ಆರೋಗ್ಯದತ್ತ ಚಿತ್ತ ಹರಿಸಿರಿಸಿರುವುದು ಶ್ಲಾಘನೀಯ ಎಂದು ಹೇಳಿ ಆಶೀರ್ವಚಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಸದಸ್ಯ ಹೆರಾಲ್ಡ್ ಮಾಡ್ತಾ, ಕೋಡಿಂಬಾಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಡಳಿತ ಮೊಕ್ತೇಸರ ನಿರಂಜನ್ ರೈ ಮಠಂತಬೆಟ್ಟು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರೈ ಮಠಂತಬೆಟ್ಟು, ಸೇಡಿಯಾಪು ಕೋಸ್ಟಲ್ ಕೋಕನೆಟ್ ಇಂಡಸ್ಟ್ರಿ ಮಾಲಕ ಡೆನ್ನಿಸ್ ಮಸ್ಕರೇನ್ಹಸ್, ವಿಕ್ರಂ ಶೆಟ್ಟಿ ಅಂತರ, ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ಹೆರಿ ಡಾಯಸ್ ಕಲ್ಲಿಮಾರು, ಗೊನ್ಸಾಲ್ವಿಸ್ ಅರ್ಥ್ ಮೂವರ್ಸ್ ಇದರ ಮಾಲಕ ಲಾರೆನ್ಸ್ ಗೊನ್ಸಾಲ್ವಿಸ್, ಜೋಕಿಂ ಮಿನೇಜಸ್ ಸೇಡಿಯಾಪು, ಶಿವ ಕಾಂಪ್ಲೆಕ್ಸ್ ಮಾಲಕ ರಮೇಶ್ ಗೌಡ, ಕ್ಲಿನಿಕ್ ವೈದ್ಯ ಫಿಶಿಸಿಯನ್ ಡಾ.ಅವಿನ್ ಲೆನ್ ಗೊನ್ಸಾಲ್ವಿಸ್ ರವರ ತಂದೆ ಆಲ್ವಿನ್ ಗೊನ್ಸಾಲ್ವಿಸ್, ತಾಯಿ ಲೋನಾ ಡೈನಾ ಮಾರ್ಟಿಸ್ ಹಾಗೂ ಅವರ ಕುಟುಂಬಿಕರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಕ್ಲಿನಿಕ್ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆ ಅವಧಿಗೆ ವೈದ್ಯರು ಲಭ್ಯರಿರುತ್ತಾರೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9448474421 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಫಿಶಿಸಿಯನ್ ಡಾ.ಅವಿಲ್ ಲೆನ್ ಗೊನ್ಸಾಲ್ವಿಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕ ಅಶೋಕ್ ರೈ ಶುಭ ಹಾರೈಕೆ

ಈ ಸಂದರ್ಭದಲ್ಲಿ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈರವರು ಕ್ಲಿನಿಕ್ ಗೆ ಬಂದವರನ್ನು ನಗುಮುಖದಿಂದ ಮಾತನಾಡಿ ಜನರನ್ನು ಆರೋಗ್ಯವಂತರನ್ನಾಗಿ ಮಾಡುವಂತಾಗಲಿ. ಜನರ ಸೇವೆ ಮಾಡಲು ಡಾ.ಅವಿಲ್ ರವರಿಗೆ ಮತ್ತಷ್ಟು ಆಧಾರ ಹಾಗೂ ಆಶೀರ್ವಾದ ಕರುಣಿಸಲೆಂದು ಹಾರೈಸಿದರು.