ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಶತಮಾನೋತ್ಸವದ ಶತಶೃಂಗ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಇಡ್ಕಿದು ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜರಗಿತು.
ಸಂಸ್ಮರಣ ಸಂಚಿಕೆಯನ್ನು ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲುರವರು ಬಿಡುಗಡೆಗೊಳಿಸಿದರು. ಸಂಪಾದಕೀಯ ಮಂಡಳಿ ಪರವಾಗಿ ಗಣೇಶ ಪ್ರಸಾದ ಪಾಂಡೇಲು ಮತ್ತು ಗೀತಾ ಕೋಂಕೋಡಿ ಅನಿಸಿಕೆ ವ್ಯಕ್ತಪಡಿಸಿದರು.
ಉಪಾಧ್ಯಕ್ಷರಾದ ರಾಮ ಭಟ್ ನೀರಪಳಿಕೆ, ನಿರ್ದೇಶಕರಾದ ಚಂದ್ರಹಾಸ ಕೆಂರ್ದೇಲು, ಜಯಂತ ಕಂಪ, ನವೀನ್ ಕೆ. ಪಿ. ಪಾಂಡೇಲು, ಉಮೇಶ್ ವಡ್ಯರ್ಪೆ, ಆನಂದ ಕೆ. ಅಡ್ಯಾಲು,ಸತೀಶ್ ಅಳಿಕೆಮಜಲು, ಲೋಹಿತಾಶ್ವ ಎಂ. ಮುಂಡ್ರಬೈಲು, ಹೃಷಿಕೇಶ್ ಕೆ. ಎನ್. ಮುಕ್ಕುಡ, ವಿದ್ಯಾ ವಿ. ಮುದಳೆಗುಂಡಿ, ಪದ್ಮಾವತಿ ಕೂವೆತ್ತಿಲ ಮೊದಲಾದವರು ಉಪಸ್ಥಿತರಿದ್ದರು
ಸಂಪಾದಕ ಮಂಡಳಿಯ ಗೀತಾ ಕೋಂಕೋಡಿ, ವಿಶ್ವನಾಥ ಕುಲಾಲ್ ಮಿತ್ತೂರು ಮತ್ತು ಗಣೇಶ ಪ್ರಸಾದ ಪಾಂಡೇಲು ರವರನ್ನು ಗೌರವಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ .ಈಶ್ವರ ನಾಯ್ಕ ಸ್ವಾಗತಿಸಿ, ವಂದಿಸಿದರು. ಸ್ಮರಣ ಸಂಚಿಕೆ ಸಂಯೋಜಕ ಈಶ್ವರ ಕುಲಾಲ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.