ಮಾರ್ಪು ತರವಾಡು ಮನೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

0

ಏ.22-25: ನೂತನ ಮನೆಯ ಗೃಹಪ್ರವೇಶ, ಧರ್ಮದೈವ ಸಹಿತ ಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

ವಿಟ್ಲ: ಬಂಟ್ವಾಳ ತಾಲೂಕು ಕುಳ ಗ್ರಾಮದ ಕುಂಡಡ್ಕ ಮಾರ್ಪು ತರವಾಡು ಮನೆಯ ಗೃಹಪ್ರವೇಶ ಮತ್ತು ಧರ್ಮದೈವ ಸಹಿತ ಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಎ.22ರಿಂದ ಎ.25ರವರೆಗೆ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಅದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮಾ.30ರಂದು ತರವಾಡು ಮನೆಯಲ್ಲಿ ನಡೆಯಿತು.

ಎ.22ರಂದು ಬೆಳಿಗ್ಗೆ ಶ್ರೀ ದೈವಗಳ ಆಯುಧ, ಮಣೆಮಂಚ ಹಾಗೂ ಹಸಿರು ಹೊರಕಾಣಿಕೆಯನ್ನು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಮಾರ್ಪು ತರವಾಡು ಮನೆಗೆ ತರುವುದು. ಸಾಯಂಕಾಲ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ. ರಾತ್ರಿ ನೂತನ ತರವಾಡು ಮನೆ ಮತ್ತು ದೈವದ ಭಂಡಾರಗಳನ್ನು ಶಿಲ್ಪಿಗಳಿಂದ ಮೇಸ್ತ್ರಿಗಳಿಂದ ಪರಿಗ್ರಹ, ಜನನಾದಿ ಸ್ಥಳಶುದ್ದಿ, ನೂತನ ಬಿಂಬಗಳ ಜಲಾಧಿವಾಸ ಧಾನ್ಯಾದಿವಾಸ ಕ್ರಿಯೆಗಳು, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಕಾರ ಬಲಿ, ಅಸ್ತಕಲಶ, ಅಧಿವಾಸ ಕ್ರಿಯೆಗಳು ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.

ಎ.23ರಂದು ಬೆಳಿಗ್ಗೆ ಮಹಾಗಣಪತಿ ಹವನ ನಡೆದು, ಬೆಳಿಗ್ಗೆ ಗಂಟೆ 7.24 ರಿಂದ ಗಂಟೆ 8.24ರ ಒಳಗಿನ ವ್ಯಷಭ ಲಗ್ನ ಸುಮುಹೂರ್ತದಲ್ಲಿ ಮಾರ್ಪು ತರವಾಡು ಮನೆಯ ಗೃಹಪ್ರವೇಶ ಮತ್ತು ಧರ್ಮದೈವ ಶ್ರೀ ರುದ್ರಾಂಡಿ ಸಹಿತ ಪರಿವಾರ ದೈವಗಳ ಪ್ರತಿಷ್ಠೆ, ಪೂಜಾ ತಂಬಿಲಗಳು ನಡೆಯಲಿದೆ. ಶ್ರೀ ವೆಂಕಟರಮಣ ದೇವರ ಹರಿಸೇವೆ. ಬಳಿಕ ತರವಾಡು ಮನೆ ನಿರ್ಮಾಣದಲ್ಲಿ ವಿಶೇಷವಾಗಿ ಸಹಕರಿಸಿದ ಗಣ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿರವರು ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ. ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ಜರುಗಲಿದೆ.


ಸಾಯಂಕಾಲ ದೈವಗಳ ಭಂಡಾರ ತೆಗೆಯುವುದು, ಬಳಿಕ ಶ್ರೀ ರಕ್ತೇಶ್ವರಿ ದೈವದ ನೇಮ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಜಾವದೆ, ಕಲ್ಲುರ್ಟಿ, ಕೊರತ್ತಿ ಮತ್ತು ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ.

ಏ.24ರಂದು ಸಾಯಂಕಾಲ ದೈವಗಳ ಭಂಡಾರ ತೆಗೆದು ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಪಿಲಿಚಾಮುಂಡಿ, ಶಿರಾಡಿ, ಧರ್ಮದೈವ ರುದ್ರಾಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ಏ.25ರಂದು ಬೆಳಗ್ಗೆ ಶ್ರೀ ಧರ್ಮದೈವದ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಆಮಂತ್ರಣ ಪತ್ರ ಬಿಡುಗಡೆ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರಾಮಣ್ಣ ಗೌಡ ವಕೀಲರು ಪೂರ್ಲಪ್ಪಾಡಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಬಟ್ಯಪ್ಪ ಗೌಡ ಮಾರ್ಪು ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here