ಪುತ್ತೂರು: ಸರ್ಗಮ್ ಕೀಬೋರ್ಡ್ ಅಕಾಡಮಿ ಶುಭಾರಂಭ

0

ಉಪ್ಪಿನಂಗಡಿ: ಪುತ್ತೂರಿನ ಭವಾನಿ ಶಂಕರ ದೇವಸ್ಥಾನ ರಸ್ತೆಯ ಚೇತನಾ ಆಸ್ಪತ್ರೆಯ ಪಕ್ಕದ ಕಟ್ಟಡದ ಒಂದನೇ ಮಹಡಿಯಲ್ಲಿ ಸರ್ಗಮ್ ಕೀಬೋರ್ಡ್ ಅಕಾಡಮಿ ಮಾ.30ರಂದು ಶುಭಾರಂಭಗೊಂಡಿತು.


ಅರ್ಚಕರಾದ ತ್ರಿವಿಕ್ರಮ್ ಭಟ್ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿದರು. ಪಾಂಡುರಂಗ ನಾಯಕ್ ಹಾಗೂ ಯು.ಜಿ.ರಾಧಾ ದೀಪ ಪ್ರಜ್ವಲಿಸಿದರು. ಈ ಸಂದರ್ಭ ಕಟ್ಟಡದ ಮಾಲಕರಾದ ಬಾಲಕೃಷ್ಣ ನಾಯಕ್, ಸಿ. ಶೈಲೇಶ್ ನಾಯಕ್, ಸಂಸ್ಥೆಯ ಮಾಲಕ ಕೆ. ಸಾತ್ವಿಕ್ ಪಡಿಯಾರ್, ತಾಯಿ ಜಯಶ್ರೀ ಪಡಿಯಾರ್, ತಂದೆ ಶ್ರೀನಿವಾಸ್ ಪಡಿಯಾರ್, ಪ್ರಮುಖರಾದ ಪ್ರತೀಕ್ ಪಡಿಯಾರ್, ಕೆ ಕೃಷ್ಣ ಪಡಿಯಾರ್, ರಾಧಿಕಾ ಪಡಿಯಾರ್, ಕಾರ್ತಿಕ್ ಪಡಿಯಾರ್, ಗಿರಿಧರ್ ನಾಯಕ್, ಗೌತಮ್ ನಾಯಕ್, ಗಿರೀಶ್ ನಾಯಕ್, ಪ್ರತಿಕ್ಷ ನಾಯಕ್, ಅಚಲ್ ಉಬರಡ್ಕ, ಅನೀಶ್ ಪೈ, ಜಯಂತ್ ಸುಧನ್ವ, ಅಕ್ಷಯ್ ನಾಯಕ್, ಸಂತೋಷ್ ಕಾಮತ, ಶ್ರವಣ್, ದಾಮೋದರ್ ಭಂಡಾರ್ಕರ್,ರವೀಂದ್ರ ದರ್ಬೆ, ವಿಗ್ನೇಶ್, ರಾಮ್ ಭಟ್, ವಸುಧಾ ಕಾಮತ್ ಉಪಸ್ಥಿತರಿದ್ದರು.


ಚೆನ್ನೈಯಲ್ಲಿರುವ ಎ.ಆರ್. ರಹ್ಮಾನ್ ರವರ ಕೆ.ಎಂ. ಕಾಲೇಜ್ ಆಫ್ ಮ್ಯೂಸಿಕ್ ಆಂಡ್ ಟೆಕ್ನಾಲಜಿಯಲ್ಲಿ ಆಡಿಯೋ ಎಂಜಿನಿಯರಿಂಗ್ ಮತ್ತು ವೆಸ್ಟ್‌ರ್ನ್ ಪಿಯಾನೋ ಕಲಿತಿರುವ ಕೆ. ಸಾತ್ವಿಕ್ ಪಡಿಯಾರ್ ಅವರು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯ, ಸೈಂಟ್ ಮೇರಿಸ್, ಮಾಣಿ ಬಾಲವಿಕಾಸ ಶಾಲೆಗಳಲ್ಲಿ ಎರಡು ವರ್ಷಗಳಿಂದ ಕೀಬೋರ್ಡ್ ತರಬೇತಿಯನ್ನು ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here