3 ಸಾವಿರಕ್ಕೂ ಅಧಿಕ ಹ್ಯಾಪಿ ಕಸ್ಟಮರ್ಸ್ | ಸಾವಿರಕ್ಕೂ ಮಿಕ್ಕಿ ಪ್ರಾಜೆಕ್ಟ್ ….

0

ಪುತ್ತೂರು : ಸುಮಾರು 18 ವರ್ಷಗಳ ಅನುಭವದ ಜೊತೆಗೆ , ಕಳೆದ ಹದಿನೈದು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಮಾಡ್ಯುಲರ್ ಕಿಚನ್ , ಹೋಮ್ ಇಂಟೀರಿಯರ್ಸ್ ಮತ್ತು ಅಪ್ಲೈಯನ್ಸಸ್ ಸೇವೆಯನ್ನೊಳಗೊಂಡ ಶೈಲೇಶ್ ಕುಲಾಲ್ ಮತ್ತು ಪುರನ್ ಚಂದ್ ಅತ್ತಾವರ ಇವರ ಪಾಲುದಾರಿಕೆಯ ಸಂಸ್ಥೆ ಮಂಗಳೂರು ಚಿಲಿಂಬಿಯಲ್ಲಿ ವ್ಯವಹರಿಸುತ್ತಿರುವ ಕಿಚನ್ ವೈಸ್ ಇದರ ಪ್ರಥಮ ಶಾಖೆ ನೆಹರುನಗರ ಸುಲೈಮನ್ ಟವರ್ ಇಲ್ಲಿ ಮಾ. 31ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಭಾರಂಭಗೊಂಡಿತು.


ವಿವೇಕಾನಂದ ಪಿಯು ಕಾಲೇಜ್ ಇದರ ಅಧ್ಯಕ್ಷರಾದ ರವೀಂದ್ರ ಇವರು ಉದ್ಘಾಟಿಸಿ , ಶ್ರೇಯೊಭಿವೃದ್ಧಿಗೆ ಹಾರೈಸಿದರು. ಪುತ್ತೂರು ಅಸೋಸಿಯೇಷನ್ ಆಫ್ ಸಿವಿಲ್ ಎಂಜಿನಿಯರ್ಸ್ ಇದರ ಅಧ್ಯಕ್ಷ ಸತ್ಯ ಗಣೇಶ್ , ಸಂಸ್ಥೆಯ ಗ್ರಾಹಕ ಮತ್ತು ಮೈತ್ರಿ ಎಲೆಕ್ಟ್ರಿಕಲ್ಸ್ ಮಾಲೀಕರಾದ ರವಿನಾರಾಯಣ , ಸಂಸ್ಥೆಯ ಇನ್ನೋರ್ವ ಗ್ರಾಹಕ ಶ್ಯಾಮ್ ಭಟ್ ಮಿತ್ತೂರು ,ನಿವೃತ್ತ ಫಾರೆಸ್ಟ್ ಆಫೀಸರ್ ಕೃಷ್ಣಪ್ಪ , ಶ್ಯಾಮ್ ಭಟ್ ದರ್ಬೆ , ಆರ್ಕಿಟೆಕ್ಟ್ ಸಚ್ಚಿದಾನಂದ ಸಹಿತ ಹಲವರು ಅತಿಥಿಗಳು ಉಪಸ್ಥಿತರಿದ್ದರು.

ನಿವೃತ್ತ ಪೋಸ್ಟ್ ಮಾಸ್ಟರ್ ಸುಂದರ ಶೆಟ್ಟಿ ನಿರೂಪಿಸಿದರು. ಪಾಲುದಾರರಾದ ಶೈಲೇಶ್ ಕುಲಾಲ್ ಮತ್ತು ಪುರನ್ ಚಂದ್ ಅತ್ತಾವರ್ ಸ್ವಾಗತಿಸಿದರು. ಮ್ಯಾನೇಜರ್ ಸುನಿಲ್ ರೈ ಸಹಕರಿಸಿದರು.


ಬಳಿಕ ಮಾತನಾಡಿದ ಪಾಲುದಾರರಾದ ಶೈಲೇಶ್ ಕುಲಾಲ್ ಅಡುಗೆ ಮನೆ , ಕಛೇರಿ ಅಥವಾ ವಾಣಿಜ್ಯ ಸಂಕೀರ್ಣ ಇವುಗಳ ಒಳಾಂಗಣ ವಿನ್ಯಾಸವನ್ನು ನಾವು ಉತ್ಕೃಷ್ಟ ಗುಣಮಟ್ಟದ , ಎಂದಿಗೂ ಸರಿಸಾಟಿಯಿಲ್ಲದ ಸಲಕರಣೆಗಳನ್ನು ಬಳಸಿಕೊಂಡು , ಅತ್ಯುತ್ತಮ ಬೆಲೆಯಲ್ಲಿ ಎಲ್ಲಾ ರೀತಿಯ ವಿನ್ಯಾಸಗಳನ್ನು ಯೋಗ್ಯ ವೇಳೆಗೆ ಸಿದ್ಧಪಡಿಸಿ ಕೊಡುವೆವು. ಕರಾವಳಿ ವಾತಾವರಣಕ್ಕೆ ಅನುಗುಣವಾಗಿ , ಗುಣಮಟ್ಟದ ಜೊತೆಗೆ ದೀರ್ಘಾವಧಿ ಬಾಳ್ವಿಕೆ ಹೊಂದಿರುವ ಸ್ಟೋನ್ ಕ್ಯಾಬಿನೆಟ್ ಕಿಚನ್ ಇಂಟೀರಿಯರ್ ಕಾರ್ಯವನ್ನು ಕಿಚನ್ ವೈಸ್ ಗ್ರಾಹಕ ವರ್ಗಕ್ಕೆ ಪರಿಚಯಿಸಿದ್ದು , ಯಾವುದೇ ಕಾರಣಕ್ಕೂ ಚಿಂತಿಸೋ ಅಗತ್ಯವಿರಲ್ಲ. ಇದರಿಂದ ಕ್ಲೀನಿಂಗ್ , ಡ್ಯಾಮೇಜ್ , ಅಥವಾ ಗೆದ್ದಲು ಹಿಡಿಯುವಂಥ ಸಮಸ್ಯೆಯೂ ಎಂದಿಗೂ ಬಾರದು ಎಂದು ಹೇಳಿ ಸಹಕಾರ ಕೋರಿದರು.


ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 6364464804 ಅಥವಾ ಕಿಚನ್ ವೈಸ್ ಇಂಟೀರಿಯರ್ಸ್ ಡಾಟ್ ಕಾಮ್ ವೆಬ್ ಸೈಟ್ ಮೂಲಕ ಮಾಹಿತಿ ಪಡೆಯುವಂತೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here