ಯದ್ಯದಾಚರತಿ ಶ್ರೇಷ್ಠ: ತತ್ತದೇವೇತರೋ ಜನಾ:|
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||
ಶ್ರೇಷ್ಠರು ನಡೆದ ದಾರಿಯಲ್ಲಿ ಹೋಗುವುದಕ್ಕೆ ಬೇರಾವುದೇ ಪ್ರಮಾಣ ಬೇಕಿಲ್ಲ. ಆ ದಾರಿ ನಮ್ಮನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯ್ಯುವಲ್ಲಿ ಸಂಶಯವಿಲ್ಲ – ಎಂಬುದು ಈ ಮೇಲಿನ ಗೀತೆಯ ಸಾಲುಗಳ ಅರ್ಥ.

ಅಂತಹ ಶ್ರೇಷ್ಠ, ದಾರ್ಶನಿಕ, ಧೀರೋದಾತ್ತ, ವಿಶ್ವವಿಖ್ಯಾತ, ವೀರಸನ್ಯಾಸಿಯಾದ ವಿವೇಕಾನಂದರ ನಾಮಧೇಯವನ್ನಿಟ್ಟುಕೊಂಡು, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮಹದಾಶೆಯಿಂದ ಸುಮಾರು 6 ದಶಕಗಳಿಂದ ಪುತ್ತೂರಿನ ವಿದ್ಯಾಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಈ ವಿವೇಕಾನಂದ ಸೆಂಟ್ರಲ್ ಸ್ಕೂಲ್ 2020ನೇ ಇಸವಿಯಲ್ಲಿ ಸ್ಥಾಪನೆಯಾಯಿತು.
ಕೇಂದ್ರೀಯ ಶಿಕ್ಷಣ ವ್ಯವಸ್ಥೆಯ ಅಡಿಯಲ್ಲಿ, ತನ್ನ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಉತ್ತಮ ಸಾಧನೆಗಾಗಿ ರಾಷ್ಟ್ರೋತ್ಥಾನ ಪರಿಷತ್ತಿನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ತನ್ನ ಶಾಲಾಶಿಕ್ಷಣದ ಜೊತೆಗೆ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಗುರುಕುಲ ಆಧಾರಿತ ಪಂಚಮುಖಿ ಶಿಕ್ಷಣ ಯೋಜನೆಯ ಅಡಿಯಲ್ಲಿ ಮಕ್ಕಳ ಬೌದ್ಧಿಕ, ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ, ಸಮಗ್ರ ಶಿಕ್ಷಣದ ಜೊತೆಗೆ, ರಾಷ್ಟ್ರ ಚಿಂತನೆ, ದೇಶಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧನೆಯ ಮುಖ್ಯ ಅಂಶಗಳನ್ನಾಗಿ ಮಾಡಿಕೊಂಡಿದೆ. ಈ ವಿಶೇಷ ಯೋಜನೆಯಲ್ಲಿ, ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದ ವರೆಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ, ಯೋಗ ಶಿಕ್ಷಣ ಹಾಗೂ ಭಾರತೀಯ ಸಂಸ್ಕಾರದ ಬಗ್ಗೆ ಪ್ರತ್ಯೇಕ ಪಠ್ಯದ ಮೂಲಕ ಶಿಕ್ಷಣ ನೀಡಲಾಗುವುದು.
ನೆಹರುನಗರದ ವಿವೇಕಾನಂದ ಶಿಕ್ಷಣ ಸಮೂಹ ಸಂಸ್ಥೆಗಳ ಆವರಣದಲ್ಲಿ ಕೇವಲ 47 ವಿದ್ಯಾರ್ಥಿಗಳು ಹಾಗೂ ಮೂರು ಮಂದಿ ಬೋಧಕ ವರ್ಗದೊಂದಿಗೆ ಪುಟ್ಟ ಹೆಜ್ಜೆಯನ್ನಿಟ್ಟ ವಿದ್ಯಾಕೇಂದ್ರವು ಇಂದು; 35 ಬೋಧಕ ವರ್ಗ, 17 ಮಂದಿ ಬೋಧಕೇತರ ವರ್ಗದೊಂದಿಗೆ 576 ವಿದ್ಯಾರ್ಥಿಗಳನ್ನು ಒಳಗೊಂಡು ತನ್ನ ದಿಟ್ಟ ಹೆಜ್ಜೆಗಳನ್ನಿಡುತ್ತಾ, ಭಾರತೀಯ ಸಂಸ್ಕೃತಿಯ ಉದಾತ್ತ ಗುಣಗಳನ್ನು, ಸತ್ಪಥವನ್ನೂ ಮೈಗೂಡಿಸಿಕೊಳ್ಳುತ್ತಾ, ಸಮಾಜ ಬಾಂಧವರ ಪ್ರೀತಿ ಸಹಕಾರಗಳೊಂದಿಗೆ ತೀವ್ರಗತಿಯ ಏಳಿಗೆಯನ್ನು ಸಾಧಿಸುತ್ತಾ ಮುನ್ನಡೆಯುತ್ತಿದೆ.
ಪಠ್ಯದ ಜೊತೆ ಜೊತೆಗೆ, ಪಠ್ಯೇತರ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ವಿದ್ಯಾಸಂಸ್ಥೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ. ಈ ಶಾಲೆಯು ಪ್ರಾರಂಭವಾದಂದಿನಿಂದ, ಇಲ್ಲಿಯ ಮಕ್ಕಳು ವರ್ಷ ಪೂರ್ತಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಹಲವಾರು ಪ್ರಶಸ್ತಿ ಹಾಗೂ ಬಹುಮಾನಗಳನ್ನು ತಮ್ಮದಾಗಿಸಿಕೊಂಡು, ಶಾಲೆಯ ಹಾಗೂ ಸಂಸ್ಥೆಯ ಕೀರ್ತಿ ಪತಾಕೆಯನ್ನು ಆಗಸದೆತ್ತರ ಹಾರಿಸಿರುವುದು, ನಮ್ಮ ವಿದ್ಯಾಕೇಂದ್ರದ ಸಾಧನೆಯಾಗಿದೆ.
ವ್ಯಕ್ತಿತ್ವ ನಿರ್ಮಾಣ ಹಾಗೂ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿ ವಿದ್ಯಾಸಂಸ್ಥೆ ರೂಪುಗೊಳ್ಳಬೇಕು ಎಂಬ ಆಶಯವನ್ನು ಇಟ್ಟುಕೊಂಡು, ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿರುವ ಈ ಸಂಸ್ಥೆಯು, ತಮ್ಮ ಧ್ಯೇಯ ಸಾಧನೆಗಾಗಿ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ಇದರ ಒಂದು ಪಕ್ಷಿ ನೋಟ ಇಲ್ಲಿದೆ.
- ವರ್ಷದ ಆರಂಭದಲ್ಲಿ ಆಧ್ಯಾತ್ಮಿಕ ಅಡಿಪಾಯದ ಉದ್ದೇಶದೊಂದಿಗೆ ಗಣಹೋಮ ಹಾಗೂ ಭಾರತೀಯ ಸಂಸ್ಕೃತಿಯ ಪದ್ಧತಿಯನ್ನು ಒಳಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ.
- ವರ್ಷದ ಆರಂಭದಲ್ಲಿ ಆಧ್ಯಾತ್ಮಿಕ ಅಡಿಪಾಯದ ಉದ್ದೇಶದೊಂದಿಗೆ ಗಣಹೋಮ ಹಾಗೂ ಭಾರತೀಯ ಸಂಸ್ಕೃತಿಯ ಪದ್ಧತಿಯನ್ನು ಒಳಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ.
- ಬೆಳಗ್ಗಿನ ಪ್ರಾರ್ಥನೆ – ಸರಸ್ವತಿ ವಂದನೆಯೊಂದಿಗೆ, ಆಯಾ ದಿನದ ವಿಶೇಷಕ್ಕೆ ಸಂಬಂಧಿಸಿದಂತೆ ಪ್ರಹಸನ, ಭಾಷಣ, ರಸಪ್ರಶ್ನೆ, ನೃತ್ಯ, ಹಾಡು ಮುಂತಾದ ಚಟುವಟಿಕೆಗಳು.
- ಶಾರೀರಿಕ ಹಾಗೂ ಮಾನಸಿಕ ದೃಢತೆಗಾಗಿ ಪೂರ್ವ ಪ್ರಾಥಮಿಕ ತರಗತಿಯಿಂದಲೇ ಯೋಗ ತರಬೇತಿ.
- ಆಧುನಿಕ ಸವಾಲುಗಳನ್ನೆದುರಿಸಲು ಕಂಪ್ಯೂಟರ್ ಶಿಕ್ಷಣ ಹಾಗೂ ಪರಿಣಾಮಕಾರಿ ಬೋಧನೆಗಾಗಿ ಸ್ಮಾರ್ಟ್ ಕ್ಲಾಸ್.
- ಪಠ್ಯೇತರ ಚಟುವಟಿಕೆಗಳಾದ ತಬಲಾ, ಕೀಬೋರ್ಡ್, ಭರತನಾಟ್ಯ, ಸಂಗೀತ, ಚೆಸ್, ಕರಾಟೆ, ಹೊಲಿಗೆ , ಕರಕುಶಲ ಕಲೆ, ಮುಂತಾದ ತರಗತಿಗಳು
- ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕಬ್ ಮತ್ತು ಬುಲ್ ಬುಲ್ ತರಗತಿಗಳು ಹಾಗೂ ಘೋಷ್ ಅಭ್ಯಾಸ.
- ಪರಿಸರ ದಿನಾಚರಣೆ, ವೃಕ್ಷಾರೋಹಣ ಮತ್ತು ಸ್ವಚ್ಛತಾ ಅಭಿಯಾನ
- ಕ್ರೀಡಾ ತರಬೇತಿ ಒಳಾಂಗಣ ಮತ್ತು ಹೊರಾಂಗಣ
- ಧಾರ್ಮಿಕ ಶಿಕ್ಷಣ ಹಾಗೂ ಗೀತಾಮೃತಂ ಎಂಬ ಭಗವದ್ಗೀತಾ ಅಭಿಯಾನ
- ಗ್ರಾಮ ವಿಕಾಸ ಸಮಿತಿ ಹಾಗೂ ಇಂಟರೇಕ್ಟ್ ಕ್ಲಬ್
- ಸುಸಜ್ಜಿತ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಹಾಗೂ 3D ಸೈನ್ಸ್ ಪಾರ್ಕ್
- ಶಾಲಾ ವಾಹನದ ವ್ಯವಸ್ಥೆ , ಮಧ್ಯಾಹ್ನದ ಬಿಸಿಯೂಟ. ಹಾಗೂ ವಸತಿ ವ್ಯವಸ್ಥೆ (ಹುಡುಗ ಹುಡುಗಿಯರಿಗೆ ಪ್ರತ್ಯೇಕ)
- ಸಂಸ್ಕೃತಿ ಜ್ಞಾನ ಪರೀಕ್ಷೆ ಮತ್ತು ರಾಮಾಯಣ, ಮಹಾಭಾರತ ಪರೀಕ್ಷೆ
- ಪೋಷಕರ ಸಮಾವೇಶ
- ಗುರು ಪೂರ್ಣಿಮಾ ಸಂಸ್ಕೃತೋತ್ಸವ, ರಕ್ಷಾಬಂಧನ ಮತ್ತು ಶ್ರೀ ಕೃಷ್ಣಲೋಕ ಆಚರಣೆಗಳು.
- NEET, JEE, ಮುಂತಾದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಕಾರ್ಯಕ್ರಮ.
- ಹೊರ ಸಂಚಾರ ಮತ್ತು ಶೈಕ್ಷಣಿಕ ಪ್ರವಾಸ
- ವ್ಯಕ್ತಿತ್ವ ವಿಕಸನ ತರಬೇತಿ – ಚೇತನಾ ಕಾರ್ಯಕ್ರಮ, ಸಾಧನಾ ಸಮ್ಮಾನ್, ಕಾನೂನು ಮಾಹಿತಿ ಕಾರ್ಯಾಗಾರ
- ಆವಿಷ್ಕಾರ ಸಂಘ – Innovation Club, “Technovation for Girls” ಸಮಾವೇಶಕ್ಕೆ ಸಂಪನ್ಮೂಲ ವ್ಯಕ್ತಿಗಳಿಂದ. ಉಚಿತ ತರಬೇತಿ
- ಸರಸ್ವತಿ ಪೂಜೆ ,ಅಕ್ಷರಭ್ಯಾಸ, ಭಜನ್ ಸಂಧ್ಯಾ,, ಭಾರತ ಮಾತಾ ಪೂಜನ
- ರಥಸಪ್ತಮಿಯಂದು ಸೂರ್ಯ ನಮಸ್ಕಾರ ಯಜ್ಞ
- ನಕ್ಷತ್ರ ವೀಕ್ಷಣೆ ಮತ್ತು ಅಗ್ನಿಶಾಮಕ ದಳದವರಿಂದ ಅಗ್ನಿ ಮತ್ತು ಸುರಕ್ಷತೆಯ ಪ್ರಾತ್ಯಕ್ಷಿಕೆ
- ಪ್ರೇರಣಾ – ವಾರ್ಷಿಕ ಪತ್ರಿಕೆ, ಪ್ರತಿಭಾ ದಿನೋತ್ಸವ
- ಪ್ರಣತಿ ಪ್ರಸರಣ ಕಾರ್ಯಕ್ರಮದೊಂದಿಗೆ ಹತ್ತನೇ ತರಗತಿಯವರಿಗೆ ಬೀಳ್ಕೊಡುಗೆ.
- ಚಿಣ್ಣರ ಚಿತ್ತಾರ, ಬೇಸಿಗೆ ಶಿಬಿರ – ವರ್ಣಿಕಾ
ಕೇವಲ 5ವರ್ಷಗಳ ಸಾಧನೆಗಳು: - ಟುನೇಷಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಮೇಳ I- FEST ನಲ್ಲಿ ಭಾರತವನ್ನು ಪ್ರತಿನಿಧಿಸಿ GRAND GOLD AWARD ಪಡೆದ ಪುತ್ತೂರಿನ ಪ್ರಪ್ರಥಮ ವಿದ್ಯಾಸಂಸ್ಥೆ.
- OLYMPIAD ನ ವಿವಿಧ ಪರೀಕ್ಷೆಗಳಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿ, ಅತಿ ಹೆಚ್ಚಿನ Award of Excellence ಪಡೆದ ಕೀರ್ತಿ ಈ ಸಂಸ್ಥೆಯದು .
- ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್(ರಿ.) ಇವರು ಬೆಂಗಳೂರಿನಲ್ಲಿ ನಡೆಸಿದ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ- 2024 ರಲ್ಲಿ 8 ವಿದ್ಯಾರ್ಥಿಗಳ ಭಾಗವಹಿಸುವಿಕೆ.
- ಸಿಬಿಎಸ್ಸಿಯ Art Integration ಯೋಜನೆಯ ಅಂಗವಾಗಿ ಕರ್ನಾಟಕ – ಲಡಾಖ್ ರಾಜ್ಯಗಳ ಕಲೆ, ಆಹಾರ- ವಿಹಾರ, ಜನಜೀವನ ಮುಂತಾದವುಗಳನ್ನು ಅಭ್ಯಸಿಸಿ, ಕರಾವಳಿ ಸಹೋದಯದ ಕಾರ್ಯಕ್ರಮಗಳಲ್ಲಿ ಪ್ರತಿಭಾ ಪ್ರದರ್ಶನ.
*ಸಿಬಿಎಸ್ಸಿ ಬೋರ್ಡ್ ನಡೆಸುವ “ಹೆರಿಟೇಜ್ ಇಂಡಿಯಾ ಕ್ವಿಜ್” ನಲ್ಲಿ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಸುವಿಕೆ. - ಕೇಂದ್ರ ಸರಕಾರವು ಕೊಡಮಾಡುವ INSPIRE ಅವಾರ್ಡ್ ಗಳಲ್ಲಿ ಈವರೆಗೆ ಸಂಸ್ಥೆಯ 8 ವಿದ್ಯಾರ್ಥಿಗಳಿಗೆ ಪದಕ.
- ಮೂರು ಮಂದಿ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ IRISನಲ್ಲಿ ಸಂಶೋಧನಾ ಅವಾರ್ಡ್.
- ವಿದ್ಯಾಭಾರತಿಯಿಂದ ಆಯೋಜಿಸಲ್ಪಟ್ಟ ವಿವಿಧ ಸ್ಪರ್ಧೆಗಳಲ್ಲಿ, ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ.
- ಪ್ರಸಿದ್ಧ ‘ದಿ ಹಿಂದೂ’ ಆಂಗ್ಲ ಪತ್ರಿಕೆಯವರಿಂದ ಆಯೋಜಿಸಲ್ಪಟ್ಟ ವಿಜ್ಞಾನ ಮೇಳದಲ್ಲಿ ಚಿನ್ನದ ಪದಕ
- ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಚಿನ್ನದ ಪದಕ.
- INSEFನ ಪ್ರಾದೇಶಿಕ ಹಾಗೂ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಭಾಗವಹಿಸುವಿಕೆ ಮತ್ತು ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಗಳಿಕೆ.
- ಕರಾಟೆ, ಈಜು, ತ್ರೋಬಾಲ್, ಚೆಸ್, ಮುಂತಾದ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟ, ರಾಜ್ಯಮಟ್ಟಗಳಲ್ಲಿ ಸಾಧನೆ.