ಪುತ್ತೂರು: ಏಳು ವರ್ಷಗಳ ಹಿಂದೆ ಕೂಲಿ ಕಾರ್ಮಿಕರೋರ್ವರಿಗೆ ಏಳು ಮಂದಿಯ ತಂಡ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.
ಬನ್ನೂರು ಮೊಹಮ್ಮದ್ ಕಾಂಪೌಂಡ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಜ ಯಾನೆ ಅಮಾನುಲ್ಲಾ ಎಂಬವರು ಪರ್ಲಡ್ಕ ದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು ೧೯-೩-೨೦೧೮ ರಂದು ರಾತ್ರಿ ಕೆಲಸ ಮುಗಿಸಿ ಬನ್ನೂರಿನ ತನ್ನ ನಿವಾಸಕ್ಕೆ ಬಂದಾಗ ಮನೆಯ ಕಂಪೌಂಡ್‌ನಲ್ಲಿ ವಾಸವಾಗಿರುವ ರವಿ, ಸುರೇಶ್, ಜಮೀಲಾ, ಶೈಲಜಾ,ಫರ್ಝನಾ,ಜಯಮ್ಮ, ಸಂಗೀತ ಎಂಬವರು ಅಕ್ರಮ ಕೂಟ ಸೇರಿಕೊಂಡು, ನೀನು ಮೊಬೈಲ್‌ನಲ್ಲಿ ಭಾರೀ ವಿಡಿಯೋ ಚಿತ್ರ ತೋರಿಸುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ರಾಡ್, ಮರದ ಸೊಂಟೆ,ಚಪ್ಪಲಿ ಕೈಗಳಿಂದ ಹಲ್ಲೆ ನಡೆಸಿರುವುದಾಗಿ, ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಾಜ ಯಾನೇ ಅಮಾನುಲ್ಲಾರವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು ಪೊಲೀಸರು ಆರೋಪಿಗಳ ವಿರುದ್ಧ ಸೆಕ್ಷನ್ ೧೪೩, ೧೪೭ ,೧೪೮ ,೫೦೪ ,೩೫೫ ,೩೨೩, ೩೨೬ ೧೪೭ ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪುತ್ತೂರು ಪ್ರಿನ್ಸಿಪಾಲ್ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ ಆರೋಪಿಗಳ ಪರವಾಗಿ ನ್ಯಾಯವಾದಿ ರಮ್ಲತ್ ಎಂ ಶಾಂತಿನಗರ ವಾದಿಸಿದ್ದರು.