ಎ. 2 ರಿಂದ ಪುಣ್ಚಪ್ಪಾಡಿ ಶಾಲೆಯಲ್ಲಿ ಮಕ್ಕಳ ವಿಜ್ಞಾನಾತ್ಮಕ ರಂಗ ಶಿಬಿರ ಪುಣ್ಚ ಕುಂಚ

0

ಸವಣೂರು : ಚಿನ್ನದ ಟೋಪಿ ಬಣ್ಣದ ಹಾಡು ಕನಸಿನ ಕಲಿಕೆ ಬಣ್ಣದ ಬಣ್ಣ ಹೊಸ ಬಣ್ಣ ಹೀಗೆ ಕಳೆದ 5 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಮಕ್ಕಳ ರಂಗ ಶಿಬಿರಗಳನ್ನು ನಡೆಸುತ್ತಾ ಸರಕಾರಿ ಹಿರಿಯ ಪುಂಚಪಾಡಿ ಇದರ ಆರನೇ ವರ್ಷದ ಮಕ್ಕಳ ರಂಗ ಶಿಬಿರವು ಎ. 2ರಿಂದ ಎ.5ರ ತನಕ ವಿಜ್ಞಾನ ವಿಷಯದ ಮೇಲೆ ಪುಣ್ಚ ಕುಂಚ ಎಂಬ ಹೆಸರಲ್ಲಿ ನಡೆಯಲಿದೆ.


ಏಪ್ರಿಲ್ 2ರಂದು ಪೂರ್ವಾಹ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರೂ ಹಿರಿಯ ಜನಪದ ವಿದ್ವಾಂಸ ಕೆಕೆ ಪೇಜಾವರ ಮಂಗಳೂರು ಇವರು ಮೊದಲ ಮಾತುಗಳನ್ನ ಆಡಲಿದ್ದಾರೆ. ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂದರಿ ಬಿ.ಎಸ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ಕು‌‌ಚ್ಚೆಜಾಲು, ಗ್ರಾಮ ಪಂಚಾಯತ್ ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ,ಯಶೋಧ ನೂಜಾಜೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಹಾಗೂ ಸವಣೂರು ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ವೈ ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ವಿಜ್ಞಾನ ವಿಸ್ಮಯ ಗಣಿತ ತಾರ್ಕಿಕತೆ,ಕಸಿ ಕಟ್ಟುವುದು, ಚಾಪೆ ಬುಟ್ಟಿ ಹಣೆಯುವುದು, ಸಸಿ ಮಾಡುವುದು, ಕ್ರಿಯಾತ್ಮಕ ಚಿತ್ರಕಲೆ, ಪರಿಸರ ಹಾಡು, ಪರಿಸರ ಸಂರಕ್ಷಣೆಯ ಕುರಿತು ಮಕ್ಕಳಿಗೆ ಸ್ವಯಂ ಕಲಿಕೆಯ ಬಗ್ಗೆ ಪ್ರೇರಣೆ ನೀಡಲಾಗುವುದು.

ನಾಲ್ಕು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ವಿಜ್ಞಾನ ಕಲಿಕೋಪಕರಣ ವಿಷಯದ ಬಗ್ಗೆ ಶಿಕ್ಷಕರ ಕ್ಷೇಮ ನಿಧಿ ಬೆಂಗಳೂರು ಮತ್ತು ಡಿಎಸ್ಇಆರ್‌ಟಿ ಬೆಂಗಳೂರು ಇಲ್ಲಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕಾಂಚನ ಸುಬ್ರಮಣ್ಯ ಭಟ್, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಇದರ ಚಿತ್ರಕಲಾ ಶಿಕ್ಷಕರಾದ ಪ್ರಸನ್ನ ಐವರ್ನಾಡು, ಯುವ ರಂಗನಿರ್ದೇಶಕ ಕೃಷ್ಣಪ್ಪ ಬಂಬಿಲ, ಹಸ್ಮಿತ್ ನರ್ಸರಿ ಶಾಂತಿಗೋಡು ಇದರ ಮಾಲಕ ಪ್ರವೀಣ್ ಪೂಜಾರಿ ಪಾಣಂಬು, ಹಿರಿಯ ಜನಪದ ಕಲಾಕಾರ ಕುಂಞ ಓಡಂತರ್ಯ , ಉದಯೋನ್ಮುಖ ಗಾಯಕರಾದ ರಂಜಿತ್ ಪುಣ್ಚಪ್ಪಾಡಿ, ಅಖಿಲ ನೆಕ್ರಾಜೆ ಹಾಗೂ ತುಳು ಲಿಪಿ ಶಿಕ್ಷಕಿ ಚಿತ್ರಾಕ್ಷಿ ತೆಗ್ಗು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಏಪ್ರಿಲ್ ನಾಲ್ಕರಂದು ಶಿಬಿರದ ಮುಕ್ತಾಯ ಸಮಾರಂಭ ನಡೆಯಲಿದ್ದು, ಸವಣೂರು ಗ್ರಾಮ ಪಂಚಾಯತ್ ಸದಸ್ಯರೂ ಸವಣೂರು ಪದವಿಪೂರ್ವ ಕಾಲೇಜಿನ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆದ ಗಿರಿಶಂಕರ ಸುಲಾಯ ಮುಕ್ತಾಯದ ಮಾತುಗಳನ್ನಾಡಲಿದ್ದಾರೆ. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪಿ.ಡಿ. ಕೃಷ್ಣಕುಮಾರ್ ರೈ ದೇವಸ್ಯ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪಿ.ಡಿ.ಗಂಗಾಧರ ರೈ ನಿವೃತ್ತ ರೀಜನಲ್ ಬ್ಯಾಂಕ್ ಮ್ಯಾನೇಜರ್ ಕೃಷ್ಣ ರೈ ಪುಣ್ಚಪ್ಪಾಡಿ , ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರುಗಳಾದ ಸುರೇಶ್ ರೈ ಸೂಡಿಮುಳ್ಳು, ಹರೀಶ್ ಪಿ ತೋಟತಡ್ಕ ಇವರುಗಳು ಭಾಗವಹಿಸಲಿದ್ದಾರೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿಜಯ ಗೌಡ ಹಾಗೂ ಶಾಲಾ ಮುಖ್ಯ ಗುರು ರಶ್ಮಿತಾ ಜೈನ್ ನರಿಮೊಗರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here