ಕಾಣಿಯೂರು: ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಕೊಡಿಯಾಲ ‘ಬಿ’ ಒಕ್ಕೂಟ ಇದರ ವತಿಯಿಂದ ಕೊಡಿಯಾಲ ಮೂವಪ್ಪೆ ಸ.ಕಿ.ಪ್ರಾ. ಶಾಲೆಯಲ್ಲಿ ಸುಳ್ಯ ಅಗ್ನಿಶಾಮಕ ದಳದವರಿಂದ ಬೆಂಕಿ ಅವಘಡಗಳ ಕುರಿತು ಅಗ್ನಿಶಾಮಕ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.
ಸುಳ್ಯ ಅಗ್ನಿಶಾಮಕ ದಳದ ಠಾಣಾಧಿಕಾರಿಗಳಾದ ಬಿ. ಸೋಮನಾಥ ಮತ್ತು ನಾಗರಾಜ ಪೂಜಾರಿ, ರಾಜೇಶ್ ದಾವಣಗೆರೆ ಹಾಗೂ ಸಿಬ್ಬಂದಿಗಳು ಅಗ್ನಿಶಮನ ಮತ್ತು ತುರ್ತು ಸಂದರ್ಭಗಳಲ್ಲಿ ಸಂಭವಿಸುವ ಗ್ಯಾಸ್ ಸ್ಫೋಟ ಮತ್ತು ನೀರಿಗೆ ಬಿದ್ದು ಅವಘಡ ಸಂಭವಿಸುವ ಸಂದರ್ಭದಲ್ಲಿ ವಹಿಸಿಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಪ್ರಸಾದ್ ಕಲ್ಪಡ, ಉಪಾಧ್ಯಾಕ್ಷರಾದ ಪೂರ್ಣಿಮಾ ಉಪಾಧ್ಯಾಯ ಕಲ್ಪಡ, ಸೇವಾಪ್ರತಿನಿಧಿ ಹರಿಣಿ, ಅಮರಪಡ್ನೂರು ಸೇವಾಪ್ರತಿನಿಧಿ ದಿವ್ಯಾ, ಬೆಳ್ಳಾರೆ ಒಕ್ಕೂಟದ ಸೇವಾಪ್ರತಿನಿಧಿ ಹರಿಣಾಕ್ಷಿ ಮತ್ತು ಒಕ್ಕೂಟದ ಪದಾಧಿಕಾರಿಗಳು, ಪ್ರಬಂಧಕರು, ಸಂಯೋಜಕರು, ಸದಸ್ಯರು ಉಪಸ್ಥಿತರಿದ್ದರು.