ಪುತ್ತೂರು: “ಸ್ವಾತಂತ್ರೋತ್ತರ ಭಾರತದಲ್ಲಿ ಗಾಂಧಿ ತತ್ವಗಳ ಅನುಷ್ಠಾನದ ವಿಶ್ಲೇಷಣೆ ವಿಶೇಷವಾಗಿ ಪುತ್ತೂರಿಗೆ ಸಂಬಂಧಿಸಿದಂತೆ ಒಂದು ಅಧ್ಯಯನ” ಎಂಬ ವಿಷಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಕಿರಣಚಂದ್ರ ರೈ.ಬಿ. ಇವರು ಡಾ. ಆನಂದ ಗೌಡ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕಿರಣಚಂದ್ರ ರೈಯವರು ಕರ್ನೂರು ಬಂಟುಕಲ್ಲು ವೆಂಕಪ್ಪ ರೈ ಹಾಗೂ ಮಮ್ಮಕ್ಕೆ ರೈ ಅವರ ಪುತ್ರರಾಗಿದ್ದಾರೆ.ಇವರು ಪ್ರಸ್ತುತ ಬೆಟ್ಟಂಪಾಡಿ ಹಾಗೂ ವಿದ್ಯಾರಶ್ಮಿ ಪದವಿ ಕಾಲೇಜ್‌ನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.