ಆಲಂಕಾರು:ಆಲಂಕಾರು ಗ್ರಾಮದ ಕಮ್ಮಿತ್ತಿಲು ಶ್ರೀ ನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನದಲ್ಲಿ ಎ.5,6 ರಂದು ನೇಮೋತ್ಸವ ನಡೆಯಲಿದೆ.
ಎ.5 ರಂದು ರಾತ್ರಿ ದೈವಗಳ ಭಂಡಾರ ಹಿಡಿದು ಗರಡಿ ಇಳಿದು ನೇಮೋತ್ಸವ, ರಾತ್ರಿ 11:00 ಕ್ಕೆ ಮೊಗೇರ್ಕಳ ದೈವಗಳು ಮೀಸೆ ಧರಿಸುವುದು, ರಾತ್ರಿ 1:00 ಗಂಟೆಗೆ ತನ್ನಿಮಾನಿಗ ಗರಡಿ ಇಳಿದು ನೇಮೋತ್ಸವ, ರಾತ್ರಿ 4:00 ರಿಂದ ದೈವಗಳ ಪ್ರಸಾರ ವಿತರಣೆ ನಡೆಯಲಿದೆ.
ಎ.6 ರಂದು ಬೆಳಿಗ್ಗೆ 8:00 ರಿಂದ ಕೊರಗಜ್ಜ ದೈವದ ನೇಮೋತ್ಸವ, ಮದ್ಯಾಹ್ನ 12:00 ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳಾದ ತಾವೆಲ್ಲರೂ ಅಗಮಿಸಿ ದೈವಗಳ ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗುವಂತೆ ನೇಮೊತ್ಸವ ಸಮಿತಿಯ ಅಧ್ಯಕ್ಷರು,ಪದಾಧಿಕಾರಿಗಳು, ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.