
ಪುತ್ತೂರು: ಮೈಸೂರು ಚಲಿಸುತ್ತಿರುವ ರೈಲಿನಲ್ಲಿ ಯುವತಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ಚಿನ್ನ, ಮೊಬೈಲ್ , ಹಣ ದೋಚಿ ದರೋಡೆ ಮಾಡಿದ ಆರೋಪಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಮೈಸೂರು ನ್ಯಾಯಾಲಯದಿಂದ ತೀರ್ಪು ನೀಡಿದೆ.
ಯುವತಿ ದಿನಾಂಕ 29/08/2019 ರಂದು ಬದಿನಗುಪ್ಪೆಯಿಂದ ಮೈಸೂರಿಗೆ ಬರಲು ಚಾಮರಾಜನಗರ ಮೈಸೂರು ಪ್ಯಾಸೆಂಜರ್ ರೈಲಿನ ಲೇಡೀಸ್ ಭೋಗಿಯನ್ನು ಹತ್ತಿ ಕುಳಿತಿದ್ದು ರೈಲು ಗಾಡಿ ಕಡಕೋಳ ರೈಲು ನಿಲ್ದಾಣದಿಂದ ನಿಧಾನವಾಗಿ ಚಲಿಸುತ್ತಿರುವಾಗ ಆಫ್ ಸೈಡಿನಿಂದ ಆರೋಪಿಗಳು ರೈಲಿನ ಲೇಡೀಸ್ ಭೋಗಿಗೆ ಬಂದು ಯುವತಿಗೆ ಚಾಕು ತೋರಿಸಿ ,ನಿನ್ನ ಹತ್ತಿರ ಇರುವ ದುಡ್ಡು, ಮೊಬೈಲ್, ಕಿವಿಯೋಲೆ ಯನ್ನೂ ಬಿಚ್ಚಿ ಕೊಡು ಇಲ್ಲಾಂದರೆ ನಿನ್ನನ್ನು ಸಾಯಿಸುವುದಾಗಿ ಬೆದರಿಸಿ ಯುವತಿಯ ಕಡೆಯಿಂದ ಕಿವಿಯ ಬೆಂಡೋಲೆ, ಮೊಬೈಲ್, 32500/- ರೂಪಾಯಿ ನಗದನ್ನು ಬಲವಂತವಾಗಿ ಕಿತ್ತುಕೊಂಡು ದೋಚಿ ದರೋಡೆ ಮಾಡಿ ಪರಾರಿ ಆಗಿದ್ದರು. ಬಳಿಕ ಮೈಸೂರಿನ ರೈಲ್ವೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಆರೋಪಿ ಚಿನ್ನದ ಗುಡಿ ಹುಂಡಿ ಗ್ರಾಮ ನಂಜನ ಗೂಡಿನ ನಿವಾಸಿ ಶಿವರಾಜು ಶಿವ, ಕೃಷ್ಣ ಡಿಂಕು ಮತ್ತು ಮೈಸೂರಿನ ಇಲವಾಲ ನಿವಾಸಿ ಉಮೇಶ ಇವರಿಂದ ಸ್ವತ್ತು ಗಳನ್ನು ವಶಕ್ಕೆ ಪಡೆದು ಈ ಎರಡು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಆಗಿನ ರೈಲ್ವೇ ಪೊಲೀಸ್ ವೃತ್ತ ನಿರೀಕ್ಷಕ ಜಯಕುಮಾರ್ .ಯನ್ ಅವರು ಸಮಗ್ರ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಅಧಿಕ ಸಿ ಜೇ ಹಿರಿಯ ವಿಭಾಗ ಮತ್ತು ಸಿ ಜೆ ಯಂ ನ್ಯಾಯಾಲಯದ ನ್ಯಾಯಾಧೀಶ ಮಂಜುಳಾ ಅವರು ಆರೋಪಿಗಳ ವಿರುದ್ಧ ಹೊರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದನೇ ಆರೋಪಿ ನಂಜನ ಗೂಡಿನ ನಿವಾಸಿ ಶಿವರಾಜು ಶಿವ ಕೃಷ್ಣ ಡಿಂಕು ಇವನಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 3000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡ ತೆರಲು ತಪ್ಪಿದಲ್ಲಿ ಮತ್ತೇ ಒಂದು ತಿಂಗಳ ಜೈಲು ವಾಸ ಅನುಭವಿಸುವಂತೆ ತೀರ್ಪಿನಲ್ಲಿ ಹೇಳಲಾಗಿದೆ . ಈ ಪ್ರಕರಣದಲ್ಲಿ ನೊಂದ ಯುವತಿ ಪ್ರಮುಖ ಸಾಕ್ಷಿಯಾಗಿದ್ದು ಅವರು ಮತ್ತು ಪೊಲೀಸ್ ಅಧಿಕಾರಿಗಳ ಸಾಕ್ಷಿಯ ಆಧಾರದಲ್ಲಿ ಈ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಪುತ್ತೂರು ಅವರು ಸಾಕ್ಷಿಗಳ ವಿಚಾರಣೆ ನಡೆಸಿ ಸರಕಾರದ ಪರವಾಗಿ ಸಮರ್ಥ ವಾದ ಮಂಡಿಸಿದ್ದಾರೆ. ಜರ್ನಾದನ್ ಪುತ್ತೂರುರವರು ಈಗಾಗಲೇ ಸುಳ್ಯ ಹಾಗೂ ಮಂಗಳೂರಿನಲ್ಲಿ ಹಲವು ಪ್ರಕರಣಗಳಲ್ಲಿ ಸಮರ್ಥ ವಾದ ಮಂಡಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ.