ಮಂಜಲ್ಪಡ್ಪುವಿನಲ್ಲಿ ‘ಝರೊ ಟೈಲ್ ಝೋನ್’ ಮಳಿಗೆ ಶುಭಾರಂಭ

0

ಪುತ್ತೂರು: ಇಲ್ಲಿನ ಮಂಜಲ್ಪಡ್ಪು ಮಂಜಲ್ಪಡ್ಪು ಭಾರತ್ ಪೆಟ್ರೋಲಿಯಂ ಬಳಿಯ ಎಸ್.ಆರ್ ಕಾಂಪ್ಲೆಕ್ಸ್‌ನಲ್ಲಿ ಝರೊ ಟೈಲ್ ಝೋನ್ ಎ.3ರಂದು ಶುಭಾರಂಭಗೊಂಡಿತು. ಅಸಯ್ಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ದುವಾ ನಡೆಸಿ ಶುಭಹಾರೈಸಿದರು.

ಕಾಲ ಬದಲಾವಣೆ ಆದಾಗ ವಿನ್ಯಾಸಗಳು ಬದಲಾಗುತ್ತದೆ-ಮುಸ್ತಫಾ ಸುಳ್ಯ:
ಅತಿಥಿಯಾಗಿದ್ದ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ ಮಾತನಾಡಿ ಆಧುನಿಕ ಯುಗದಲ್ಲಿ ಶೋರೂಮ್‌ಗಳು ಗ್ರಾಹಕರ ಬೇಡಿಕೆ ಪೂರೈಕೆಯನ್ನು ನಿವಾರಿಸುತ್ತದೆ. ಹೊಸ ಹೊಸ ವಿನ್ಯಾಸಗಳ ಐಟಂಗಳನ್ನು ಮನೆಗೆ ತರುವ ಸಂಭ್ರಮ ಗ್ರಾಹಕರಿಗೆ ಇರುತ್ತದೆ. ಈ ಹಿನ್ನಲೆಯಲ್ಲಿ ಟೈಲ್ಸ್ ಸ್ಯಾನಿಟರಿ ಶೋರೂಮ್ ಆಕರ್ಷಕವಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ರೂಪುಗೊಂಡಿದೆ. ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿಗೆ ಇಂತಹ ಶೋರೂಮ್‌ನ ಅವಶ್ಯಕತೆ ಇದೆ. ಶತಮಾನ ಬದಲಾವಣೆ ಆದಾಗ ವಿನ್ಯಾಸಗಳು ಬದಲಾಗುತ್ತದೆ ಎಂದ ಅವರು ಸಂಸ್ಥಯನ್ನು ಅಲ್ಲಾಹು ಅನುಗ್ರಹಿಸಲಿ ಎಂದರು.

ಉದ್ಯಮ ಗ್ರಾಹಕರಿಗೆ ತಲುಪಲು ಸೋಷಿಯಲ್ ಮೀಡಿಯಾದ ಅಗತ್ಯವಿದೆ-ಅಬ್ದುಲ್ ಲತೀಫ್:
ಎಸ್‌ಡಿಪಿಐ ರಾಜ್ಯ ನಾಯಕ ಅಬ್ದುಲ್ ಲತೀಫ್ ಮಾತನಾಡಿ ಪುತ್ತೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಂದು ಆರಂಭಗೊಂಡಿರುವಂತಹ ಸಂಸ್ಥೆಗಳು ಪುತ್ತೂರಿಗೆ ಅಗತ್ಯವಿದೆ. ವ್ಯಾಪಾರದಲ್ಲಿ ಪೈಪೋಟಿ ಇರುವ ಈ ಕಾಲದಲ್ಲಿ ತಾಂತ್ರಿಕತೆ ಇಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ಉದ್ಯಮ ಎಂಬುದು ಜಗತ್ತಿನಲ್ಲಿ ನಂಬರ್ ವನ್ ಕ್ಷೇತ್ರವಾಗಿದೆ. ಉದ್ಯಮಗಳು ಜನರಿಗೆ ತಲುಪಬೇಕಾದರೆ ಇಂದು ಸೋಷಿಯಲ್ ಮೀಡಿಯಾದ ಅಗತ್ಯತೆ ಇದೆ. ಉದ್ಯಮಿಗಳು ಇದನ್ನು ಬಳಸಿಕೊಂಡು ಯಶಸ್ವಿಯಾಗಬೇಕು. ಉದ್ಯಮದಿಂದ ಗ್ರಾಮ, ತಾಲೂಕು, ದೇಶ ಅಭಿವೃದ್ಧಿಯಾಗುತ್ತದೆ ಎಂದ ಅವರು ಸಂಸ್ಥೆ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.

ಯುವಕರು ವಿದ್ಯಾಭ್ಯಾಸ ಮಾಡಿ ಉದ್ಯಮದ ಕನಸು ಕಾಣಬೇಕು-ನೂರುದ್ದೀನ್ ಸಾಲ್ಮರ:
ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮಾತನಾಡಿ 1980ರ ದಶಕದಲ್ಲಿ ಯುವಕರು ಎಸ್‌ಎಸ್‌ಎಲ್‌ಸಿ ಮುಗಿಸಿ ಗಲ್ಫ್ ರಾಷ್ಟ್ರದತ್ತ ಉದ್ಯೋಗ ಅರಸಿ ಹೋಗುತ್ತಿದ್ದರು. ಇವತ್ತು ಯುವಕರು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದು ಹೆಮ್ಮೆಯ ವಿಷಯ. ಉದ್ಯಮದಿಂದ ನೂರಾರು ಮಂದಿಗೆ ಉದ್ಯೋಗ ನೀಡಿ ತಾನೂ ಬೆಳೆದು ಉನ್ನತ ಸ್ಥಾನಕ್ಕೇರುತ್ತಾರೆ. ಅಲ್ಲದೆ ಅವರ ಊರಿಗೂ ಹೆಸರು ಬರುತ್ತದೆ ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಐಟಂಗಳನ್ನು ಪಡೆಯುವ ಅವಕಾಶ ಇಲ್ಲಿದೆ. ಗ್ರಾಹಕರು ಸದುಪಯೋಗಪಡಿಸಿ ಎಂದು ಹೇಳಿ ಶುಭಹಾರೈಸಿದರು.

ಉದ್ಯಮಗಳು ಹೆಚ್ಚಾದಂತೆ ಸ್ಪರ್ಧಾತ್ಮಕ ದರದಲ್ಲಿ ಐಟಂ ಗ್ರಾಹಕರಿಗೆ ಲಭ್ಯ-ಅಬ್ದುಲ್ ಹಮೀದ್ ಸಾಲ್ಮರ:
ಎಸ್‌ಡಿಪಿಐ ಪುತ್ತೂರು ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಮಾತನಾಡಿ ಪುತ್ತೂರಿನ ಉದ್ಯಮ ಕ್ಷೇತ್ರಕ್ಕೆ ಟೈಲ್ಸ್, ಸ್ಯಾನಿಟರಿ ಶೋರೂಮ್ ಕಾಳಿಟ್ಟಿದೆ. ಹಲವಾರು ಉದ್ಯಮಗಳು ಬಂದಾಗ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ವಸ್ತುಗಳು ದೊರೆಯಲು ಸಾಧ್ಯವಿದೆ. ವಿದೇಶದಲ್ಲಿರುವ ಉನ್ನತ ಮಟ್ಟದ ಟೈಲ್ಸ್‌ಗಳು, ಸ್ಯಾನಿಟರಿಗಳು ಇಲ್ಲಿಯೇ ಲಭ್ಯವಿದೆ. ಗ್ರಾಹಕರು ದೊಡ್ಡ ನಗರಗಳಿಗೆ ಖರೀದಿಗೆ ಹೋಗಬೇಕಾಗಿಲ್ಲ. ಗ್ರಾಹಕರ ಬೇಡಿಕೆಯನ್ನು ಈ ಶೋರೂಮ್ ಪೂರೈಸಲಿದೆ ಎಂದರು.

ವಿವಿಧ ವಿನ್ಯಾಸದ ಟೈಲ್ಸ್, ಸ್ಯಾನಿಟರಿ ಅಳವಡಿಕೆ ಚಾಲ್ತಿಯಲ್ಲಿದೆ-ಅಬ್ದುಲ್ ರಹಿಮಾನ್ ಅಜಾದ್ ದರ್ಬೆ
ಅಬ್ದುಲ್ ರಹಿಮಾನ್ ಅಜಾದ್ ಹಾಜಿ ಮಾತನಾಡಿ ಪುತ್ತೂರು ತಾಲೂಕು ಕೇಂದ್ರ ವೇಗವಾಗಿ ಬೆಳೆಯುತ್ತಿದೆ. ಇಂದು ಪ್ರತಿಯೊಂದು ಮನೆಗೂ ವಿವಿಧ ವಿನ್ಯಾಸದ ಟೈಲ್ಸ್, ಸ್ಯಾನಿಟರಿ ಅಳವಡಿಕೆಗಳು ಚಾಲ್ತಿಯಲ್ಲಿದೆ. ಗ್ರಾಹಕರಿಗೆ ಬೇಕಾದ ವಿವಿಧ ವಿನ್ಯಾಸದ ಕಿಚನ್, ಬಾತ್‌ರೂಮ್‌ಗೆ ಬೇಕಾದ ಐಟಂಗಳು ಈ ಮಳಿಗೆಯಲ್ಲಿ ಸಿಗಲಿದೆ ಎಂದ ಅವರು ಉದ್ಯಮ ಯಶಸ್ವಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ಅನುಭವ, ಪ್ರಾಮಾಣಿಕತೆಯಿಂದ ಯಶಸ್ವಿ ಉದ್ಯಮಿಯಾಗಲು ಸಾಧ್ಯ-ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ:
ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ಗ್ರಾಮೀಣ ಪ್ರದೇಶವಾದ ಕುಂಬ್ರದಲ್ಲಿ ಉದ್ಯಮ ಮಾಡುತ್ತಿರುವ ಮುಸ್ತಫಾರವರು ಅದರಲ್ಲಿ ಯಶಸ್ಸು ಕಂಡಿದ್ದಾರೆ. ಇದೀಗ 2ನೇ ಸಂಸ್ಥೆಯನ್ನು ಪುತ್ತೂರಿನಲಿಆರಂಭಿಸಿದ್ದಾರೆ. ಅನುಭವ, ಪ್ರಾಮಾಣಿಕತೆ ಇದ್ದರೆ ಉದ್ಯಮ ಯಶಸ್ಸಾಗುತ್ತದೆ. ಪ್ರಾಮಾಣಿಕತೆಯಿಂದ ವ್ಯವಹರಿಸಿದರೆ ಗ್ರಾಹಕರು ಆಯ್ಕೆ ಮಾಡುತ್ತಾರೆ ಎಂದು ಹೇಳಿದ ಅವರು ಉದ್ಯಮದಲ್ಲಿ ಪ್ರಾಮಾಣಿಕತೆ ಅಳವಡಿಸಿ ಯಶಸ್ವಿಯಾಗಿ ಎಂದರು.

ಸೈಯದ್‌ಮಲೆ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷ ಸುಲೈಮಾನ್ ಹಾಜಿ ಸಾಲ್ಮರ, ಕರೀಂ ದಾರಿಮಿ, ಪುತ್ತೂರು ಫೈವ್‌ಸ್ಟಾರ್ ಮಾಲಕ ಯುಸುಫ್ ಹಾಜಿ, ಮಧುರಾ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಝರೊ ಟೈಲ್ ಝೋನ್‌ನ ಆಡಳಿತ ಪಾಲುದಾರರಾದ ಮುಹಮ್ಮದ್ ವಾಕಿದ್ ಈಶ್ವರಮಂಗಲ ಹಾಗೂ ಅಹ್ಮದ್ ಮುಸ್ತಫ ಕುಂಬ್ರ ಅತಿಥಿಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶೋರೂಮ್ ಮ್ಯಾನೇಜರ್ ಮಹಮ್ಮದ್ ಶರೀಫ್ ಕಾರ್ಜಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಮಾಸ್ಟರ್ ಪ್ಲಾನರಿ ಮಾಲಕ ಎಸ್.ಕೆ ಆನಂದ್, ಅಬೂಬಕರ್ ಹಾಜಿ ಸಂಪ್ಯ, ಅಬ್ದುಲ್ ಸೋಂಪಾಡಿ, ಕಟ್ಟಡದ ಮಾಲಕ ಕಬೀರ್ ಸಾಲ್ಮರ, ಪುಡಾ ಸದಸ್ಯ ಅನ್ವರ್ ಖಾಸಿಂ, ಉದ್ಯಮಿ ಅಬ್ದುಲ್ ಸಮದ್ ಸೋಂಪಾಡಿ, ಶರೀಫ್ ಸಾಲ್ಮರ, ಕಮರುದ್ದೀನ್ ಸಾಲ್ಮರ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು.

ಅಂತರಾಷ್ಟ್ರೀಯ ಮಟ್ಟದ ಬ್ರಾಂಡೆಡ್ ಕಂಪೆನಿ ಉತ್ಪನ್ನಗಳ ಶೋರೂಮ್
‘ಝರೊ ಟೈಲ್ ಝೋನ್’ ಮಳಿಗೆಯ ಸಹಸಂಸ್ಥೆ ಮಂಜಲ್ಪಡ್ಪುನಲ್ಲಿ ಶುಭಾರಂಭಗೊಂಡಿದೆ. ನಮ್ಮಲ್ಲಿ ಬಾತ್ ಫಿಟ್ಟಿಂಗ್ಸ್, ಟೈಲ್ಸ್, ಬೇಸಿನ್ಸ್‌ಗಳು ಲಭ್ಯವಿದೆ. ಅಂತರಾಷ್ಟ್ರೀಯ ಮಟ್ಟದ ಬ್ರಾಂಡೆಡ್ ಕಂಪೆನಿಗಳ ಉತ್ಪನ್ನಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ದೊರೆಯುತ್ತದೆ ಗ್ರಾಹಕರು ಸಹಕರಿಸಿ ಪ್ರೋತ್ಸಾಹಿಸಬೇಕು.
ಮ್ಯಾನೇಜರ್
ಮಹಮ್ಮದ್ ಶರೀಫ್ ಕಾರ್ಜಾಲು

LEAVE A REPLY

Please enter your comment!
Please enter your name here