ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ಇದರ ಸಮುದಾಯ ಅಭಿವೃದ್ಧಿ ವಿಭಾಗದಿಂದ ಕುಮಾರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯೋಗ ಕೇಂದ್ರಕ್ಕೆ ಟೈಲ್ಸ್ ಮತ್ತು ಕಿಟಕಿ ಅಳವಡಿಸುವ ಬಗ್ಗೆ ರೂ 25000/- ಹಣ ಮಂಜೂರಾಗಿದ್ದು, ಮಂಜೂರಾತಿಯ ಆದೇಶ ಪತ್ರವನ್ನು ಕ್ಷೇತದ ವತಿಯಿಂದ ಕಡಬ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕೆ ಸವಣೂರು, ಯೋಜನೆಯ ಕಡಬ ತಾಲೂಕಿನ ಯೋಜನಾಧಿಕಾರಿ ಮೇದಪ್ಪ ನಾವೂರು ರವರು ಶಾಲಾ ಮುಖ್ಯಗುರು ಸಂತೋಷ್ ಎನ್.ಟಿ ರವರಿಗೆ ಹಸ್ತಾಂತರ ಮಾಡಿದರು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಗಂಗಾಧರ ಕನ್ಯಾಮಂಗಲ, ಗ್ರಾ.ಪಂ ಸದಸ್ಯೆ ಯಶೋಧ ನೂಜಾಜೆ, ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ. ಡಿ,ಅಮಿತಾ ದೇವಶ್ಯ ,ಕಾವ್ಯ ಕೊಂಬಕೆರೆ
ಎಸ್.ಡಿ.ಎಂ.ಸಿ. ಸದಸ್ಯರಾದ ರಮೇಶ, ಅಕ್ಕು, ಅತಿಥಿ ಶಿಕ್ಷಕರಾದ ಶ್ಯಾಮ್, ಕಾವ್ಯಶ್ರೀ, ಅಡುಗೆ ಸಿಬ್ಬಂದಿ ಸೇಸಮ್ಮ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.