ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಕಾರು ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಎ.6 ರಂದು ನಡೆದಿದ್ದು, ಡಿಕ್ಕಿಯ ರಭಸಕ್ಕೆ ಗೂಡ್ಸ್ ಟೆಂಪೋ ಪಕ್ಕದ ಕಬ್ಬಿನ ಹಾಲಿನ ಅಂಗಡಿಗೆ ನುಗ್ಗಿದೆ.

ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಿಂದ ಬರುತ್ತಿದ್ದ ಕಾರು ಮತ್ತು ಬಸ್ ನಿಲ್ಧಾಣದ ರಸ್ತೆಯಿಂದ ಬರುತ್ತಿದ್ದ ಮೊಟ್ಟೆ ಸಾಗಾಟದ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಗೂಡ್ಸ್ ಟೆಂಪೋ ಪಕ್ಕದ ನಗರಸಭೆ ಪಾರ್ಕ್ ಬಳಿಯ ಕಬ್ಬಿನ ಹಾಲಿನ ಅಂಗಡಿಗೆ ನುಗ್ಗಿದೆ. ಅಪಘಾತದಿಂದ ಎರಡೂ ವಾಹನಗಳಿಗೆ ಮತ್ತು ಅಂಗಡಿಗೆ ಹಾನಿಯಾಗಿದೆ.
