ನೆಲ್ಯಾಡಿ: ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ ವತಿಯಿಂದ ಮಾ.23ರಂದು ಶಿವಮೊಗ್ಗದಲ್ಲಿ ನಡೆದ ಹ್ಯಾಂಡ್ ಬಾಲ್ ಸಬ್ ಜೂನಿಯರ್ ಬಾಲಕರ ರಾಜ್ಯ ತಂಡಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ರಶ್ಮಿತ್ ಹಾಗೂ ಸಿಂಚನ್ರವರು 39ನೇ ರಾಷ್ಟ್ರೀಯ ಹ್ಯಾಂಡ್ ಬಾಲ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಮುಖ್ಯ ಶಿಕ್ಷಕ ರಮೇಶ್ ಮಯ್ಯ ತಿಳಿಸಿದ್ದಾರೆ.
ಈ ಕ್ರೀಡಾ ಕೂಟವು ಏ.8ರಿಂದ 12 ರವರೆಗೆ ಒರಿಸ್ಸಾ ರಾಜ್ಯದ ಕಿಯೋಂಜರ್ನಲ್ಲಿ ನಡೆಯಲಿದೆ. ಆಯ್ಕೆಯಾದ ವಿದ್ಯಾರ್ಥಿಗಳು ಭದ್ರಾವತಿಯಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ. ರಾಜ್ಯ ತಂಡಕ್ಕೆ ಆಯ್ಕೆಯಾಗಿರುವ ರಶ್ಮಿತ್ ಶಿವಾರು ನಿವಾಸಿ ಚಂದ್ರಶೇಖರ ಹಾಗೂ ನಳಿನಿ ದಂಪತಿ ಪುತ್ರ. ಇನ್ನೋರ್ವ ವಿದ್ಯಾರ್ಥಿ ಸಿಂಚನ್ ವಳಾಲು ಕೆಳಗಿನ ಮನೆ ತಿಮ್ಮಪ್ಪ ಗೌಡ ಹಾಗೂ ದಮಯಂತಿ ದಂಪತಿ ಪುತ್ರ. ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಶಿಕ್ಷಕ ರಕ್ಷಕ ಸಂಘದದವರು ಶುಭ ಹಾರೈಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಹ್ಯಾಂಡ್ಬಾಲ್ ಕ್ರೀಡಾಕೂಟ: ಕಾಂಚನ ಪ್ರೌಢಶಾಲೆಯ ರಶ್ಮಿತ್, ಸಿಂಚನ್ ರಾಷ್ಟ್ರಮಟ್ಟಕ್ಕೆ ಆಯ್ಕೆ