ಪಟ್ಟೆ ವಿದ್ಯಾ ಸಂಸ್ಥೆಗಳಲ್ಲಿ ʼಆಕಾಶಕ್ಕೆ ಏಣಿʼ ಬೇಸಿಗೆ ಶಿಬಿರ ಉದ್ಘಾಟನೆ

0

ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ- ಪುಷ್ಪಲತಾ ದೇವಕಜೆ

ಬಡಗನ್ನೂರು: ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ, ಪ್ರತಿಭಾ ಪ್ರೌಢ ಶಾಲೆ ಪಟ್ಟೆ, ಹಾಗೂ ಮಾತೃ ಸಂಸ್ಥೆ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ಆಶ್ರಯದಲ್ಲಿ 5ರಿಂದ 10ನೇ ತರಗತಿ ಮಕ್ಕಳಿಗೆ ʼಆಕಾಶಕ್ಕೆ ಏಣಿ’ ಬೇಸಿಗೆ ಶಿಬಿರವು ಏ.8ರಂದು  ಪಟ್ಟೆ ಶಾಲಾ ಆವರಣದಲ್ಲಿ ನಡೆಯಿತು. ವಿದ್ಠಾ ಸಂಸ್ಲೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ ಪ್ರಾಸ್ತಾವಿಕ ಮಾತನಾಡಿ ಮಕ್ಕಳು ತಮ್ಮ ಎರಡು ರಜಾ ಸಮಯದಲ್ಲಿ ಮುಂದಿನ ವಿದ್ಯಾಭ್ಯಾಸ ಅಡಿಪಾಯ ದೊರೆಕಿಸುವ ನಿಟ್ಟಿನಲ್ಲಿ ಅನಂತ ಅವಕಾಶ ಕಲ್ಪಿಸಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಕ್ಕಳಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಏರೋಬಿಕ್ಸ್, ಚಿತ್ರಕಲೆ, ಕ್ರಾಫ್ಟ್, ವೇದಗಣಿತ, ಮನರಂಜನಾ ಆಟಗಳು, ಸಂಗೀತ ಹಾಗೂ ನೃತ್ಯ. ಇತ್ಯಾದಿ ವಿಷಯಗಳಿಗೆ ಪ್ರತ್ಯೇಕ ನುರಿತ ತಜ್ಞರಿಂದ ತರಬೇತಿ ನೀಡಿ ವ್ಯಕ್ತಿತ್ವ ವಿಕಾಸ ಪಡಿಸುವ ದೃಷ್ಟಿಯಲ್ಲಿ  ಪ್ರಪ್ರಥಮ ಬಾರಿ ಕಾರ್ಯಕ್ರಮ ಅಯೋಜನೆ ಮಾಡಿಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.

ಕಾರ್ಯಕ್ರಮವನ್ನು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ದೀಪ ಪ್ರಜ್ವಲನೆಗೊಳಿಸಿ ಮಾತನಾಡಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಪ್ರಕಟಪಡಿಸಿದಾಗ ಮಕ್ಕಳ ವ್ಯಕ್ತಿತ್ವ ವಿಕಾಸನ ಗೊಳ್ಳುತ್ತದೆ. ಮಕ್ಕಳಿಗೆ ಆಸ್ತಿಯನ್ನುಮಾಡದೆ ಮಕ್ಕಳು ದೇಶದ ಸಂಪತ್ತು ಎನ್ನುವ ದೃಷ್ಟಿಯಲ್ಲಿ ಕಲಿಕೆಗೆ ಪೂರಕವಾಗಿ ಆಕಾಶಕ್ಕೆ ಏಣಿ ಬೇಸಿಗೆ ಶಿಬಿರವನ್ನು ಆಯೋಜನೆ ಬಗ್ಗೆ ಸಂತಸ ಸೂಚಿಸಿದ ಅವರು ಮಾತೃ ಸಂಸ್ಥೆ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ರವರಿಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿದ್ದ  ಬಡಗನ್ನೂರು ಗ್ರಾ. ಪಂ ಸದಸ್ಯರಾದ ದಮಯಂತಿ ಕೆಮನಡ್ಕ, ಹಾಗೂ ಲಿಂಗಪ್ಪ ಗೌಡ ಮೋಡಿಕೆ ಸಂದಭೋಚಿತ ಮಾತನಾಡಿ ಶುಭ ಹಾರೖೆಸಿದರು.

ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಇತ್ತೀಚಿನ  ಸಮಯದಲ್ಲಿ ಸಾಮಾನ್ಯವಾಗಿ ಎಲ್ಲಾ ಭಾಗಗಳೋ ಬೇಸಿಗೆ ಶಿಬಿರ ನಡೆಯುತ್ತಿದೆ. ಆದರೆ ನಮ್ಮಲ್ಲಿ ಒಂದು ವಿಭಿನ್ನ ರೀತಿಯಲ್ಲಿ 3 ದಿವಸಗಳ ಕಾಲ ಅಯೋಜಿಸಲಾಗಿದೆ. ಅನಂತ ಗುರಿಯನ್ನು ಇಟ್ಟುಕೊಂಡು ನಡೆಯುವುದೇ ಆಕಾಶಕ್ಕೆ ಏಣಿ ಆಗಿದೆ. ಎಲ್ಲರೂ ಈ ಶಿಬಿರದ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉತ್ತಮ ರೀತಿಯಲ್ಲಿ ಗುರಿ ಸಾಧಿಸುವಂತಾಗಲಿ ಎಂದು ಹೇಳಿ ಶುಭ ಹಾರೖೆಸಿದರು.

ವೇದಿಕೆಯಲ್ಲಿ ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ಬಿ ಹಾಗೂ ಶ್ರೀಕೃಷ್ಣ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಉಪಸ್ಥಿತರಿದ್ದರು.

ಪ್ರೌಢ ಶಾಲಾ ಗಣಿತ ಶಿಕ್ಷಕಿ ಪ್ರೀತಿ ಕುಮಾರಿ ಸ್ವಾಗತಿಸಿ, ಹಿಂದಿ ಶಿಕ್ಷಕಿ ವಂದಿಸಿದರು ಸಹ ಶಿಕ್ಷಕಿ ಭವಿತಾ ಕಾರ್ಯಕ್ರಮ ನಿರೂಪಿಸಿದರು. ಉಭಯ ಶಿಕ್ಷಣ ಸಂಸ್ಥೆಯ ಶಿಕ್ಷಕ ವೖಂದದವರು ಸಹಕರಿಸಿದರು.

ಸಭಾಕಾರ್ಯಕ್ರಮದ ಬಳಿಕ ಯೋಗ ಶಿಕ್ಷಕಿ ಅಖಿಲರವರಿಂದ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here