ವಿಟ್ಲ: ಮಾಣಿಲ ಗ್ರಾಮದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ದೌರ್ಜನ್ಯ ವೆಸಗಿದ ಪ್ರಕರಣದ ಆರೋಪಿ ಮಹೇಶ್ ಭಟ್‌ಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮಹೇಶ್ ಭಟ್ ವಿರುದ್ಧ ಪೊಕ್ಸೋ ಕಾಯಿದೆಯಡಿ ಮತ್ತು ಎಸ್.ಸಿ., ಎಸ್.ಟಿ. ಕಾಯಿದೆಯಡಿ ವಿಟ್ಲ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ, ಆರೋಪಿ ಮಹೇಶ್ ಭಟ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಸ್.ಟಿ.ಎಸ್.ಸಿ. -೧ (ಪೊಕ್ಸೋ ನ್ಯಾಯಾಲಯ) ಪುರಸ್ಕರಿಸಿ ನೀರಿಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.
ಸದ್ರಿ ಆದೇಶ ಮಾಡುವ ಮೊದಲು ವಿಶೇಷ ಸರ್ಕಾರಿ ಅಭಿಯೋಜಕರು, ಅರ್ಜಿದಾರ ಪರ ವಕೀಲರು ಮತ್ತು ಫಿರ‍್ಯಾದಿದಾರರನ್ನು ಮತ್ತು ಸಂತ್ರಸ್ತೆಯ ತಂದೆ ತಾಯಿಯನ್ನು ನ್ಯಾಯಾಽಶರು ವಿಚಾರಣೆಯನ್ನು ಮಾಡಿದ್ದರು. ಆರೋಪಿ ಮಹೇಶ್ ಭಟ್ ಅವರ ಪರವಾಗಿ ನ್ಯಾಯವಾಽಗಳಾದ ಕೊಮ್ಮೆ ರಾಜೇಶ್ ಕೆ.ಜಿ., ಸಾದತ್ ಅನ್ವರ್.ಪಿ.ಎಂ.. ಮತ್ತು ಬಾಯಾರು ಅಬ್ದುಲ್ ಅಜೀಜ್ ಎಂ.. ವಾದಿಸಿದ್ದರು