ಪುತ್ತೂರು:ಪೇಟೆಯ ಮುಖ್ಯರಸ್ತೆಯಲ್ಲೇ ಟಿಪ್ಪರ್‌ನಲ್ಲಿ ತರ್ಪಾಲ್ ಮುಚ್ಚದೆ ರಾಜಾರೋಷವಾಗಿ ಮಣ್ಣು ಸಾಗಾಟ ಮಾಡುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಸಮಸ್ಯೆ ಎದುರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮೌನವಹಿಸಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಪುತ್ತೂರು ಮುಖ್ಯರಸ್ತೆಯ ಬಸ್ ನಿಲ್ದಾಣದ ಎದುರು ಭಾಗವಾಗಿ ಟಿಪ್ಪರ್‌ನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಈ ರೀತಿ ಅವೈಜ್ಞಾನಿಕವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ.ಟರ್ಪಾಲ್ ಮುಚ್ಚಿ ಕಲ್ಲು,ಮಣ್ಣು ಸಾಗಿಸಬೇಕೆಂಬ ನಿಯಮವಿದೆ.ಟರ್ಪಾಲ್ ಮುಚ್ಚದೆ ಮಣ್ಣು ಸಾಗಾಟ ಮಾಡುವ ಸಂದರ್ಭ ಟಿಪ್ಪರ್‌ನಿಂದ ಮಣ್ಣು ರಸ್ತೆಗೆ ಬೀಳುತ್ತಲೇ ಇರುತ್ತದೆ.ಇದರಿಂದ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಸಮಸ್ಯೆ ಎದುರಿಸುತ್ತಾರೆ.ಆದರೂ ಇಲಾಖೆಯವರು ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.