ಪುತ್ತೂರು: ನೀರಾವರಿ ಇಲಾಖೆಯ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ಒಟ್ಟು 10 ಮಂದಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಕೊಳವೆ ಬಾವಿ ಮಂಜೂರುಗೊಂಡಿದೆ.ಕೊಳವೆ ಬಾವಿ ಕೊರೆಯುದಕ್ಕೋಸ್ಕರ ತಲಾ 5 ಲಕ್ಷ ರೂ ಅನುದಾನ ಮಂಜೂರಾಗಿದೆ. ಕಳೆದ ಕೆಲದಿನಗಳ ಹಿಂದೆ 73 ಮಂದಿ ಎಸ್ ಸಿ ಹಾಗೂ ಎಸ್ ಟಿ ಕೃಷಿಕ ಫಲಾನುಭವಿಗಳಿಗೆ ಕೊಳವೆ ಬಾವಿ ಮಂಜೂರಾಗಿತ್ತು.
ಮುಂಡೂರು ಗ್ರಾಮದ ಪಜಿಮಣ್ಣು ನಿವಾಸಿ ಸೇಸಪ್ಪ ನಾಯ್ಕ, ಬಂಟ್ವಾಳ ತಾಲೂಕು ಕೇಪು ಗ್ರಾಮದ ಬಡೆಕೋಡಿ ನಿವಾಸಿ ಮಹಾಬಲ ನಾಯ್ಕ, ಪೆರ್ನೆ ಗ್ರಾಮದ ರಾಮನಾಯ್ಕ, ಬಡಗನ್ನೂರು ಗ್ರಾಮದ ಚಂದುಕೂಡ್ಲು ಮನೆ ಅಣ್ಣು ನಾಯ್ಕ, ಬಂಟ್ವಾಳ ಪುಣಚ ಗ್ರಾಮದ ಬಾಲೆಕುಮೇರಿ ವೆಂಕಪ್ಪ ನಾಯ್ಕ, ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಕಕ್ಕೂರು ನಿವಾಸಿ ಸುರೇಂದ್ರ ಕೆ,ನಿಡ್ಪಳ್ಳಿ ಗ್ರಾಮದ ಹರೀಶ್, ನಿಡ್ಪಳ್ಳಿ ಗ್ರಾಮದ ಕೊಮಾರ್, ಬೆಟ್ಟಂಪಾಡಿ ಗ್ರಾಮದ ಸಂಜೀವ ಗುಂಡ್ಯಡ್ಕ ಮತ್ತು ನಿಡ್ಪಳ್ಳಿ ಗ್ರಾಮದ ಮಾಯಿಲರವರಿಗೆ ಕೊಳವೆ ಬಾವಿ ಮಂಜೂರು ಆಗಿರುತ್ತದೆ. ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಶಿಫಾರಸ್ಸಿನಂತೆ ಈ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ.
ರಾಜ್ಯದ ಕಾಂಗ್ರೆಸ್ ಸರಕಾರ ದಲಿತರ ಪರವಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 82 ಮಂದಿ ದಲಿತ ಸಮುದಾಯದ ಫಲಾನುಭವಿಗಳಿಗೆ ಕೊಳವೆ ಬಾವಿ ಮಂಜೂರಾಗಿದೆ. ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಸರಕರದ ಸೌಲಭ್ಯ ದೊರೆಯಬೇಕೆಂಬುದೇ ನನ್ನ ಆಶಯವಾಗಿದೆ. ಕೆಲದಿನಗಳ ಹಿಂದೆ ದೇಶೀ ಕರುಗಳನ್ನು ವಿತರಣೆ ಮಾಡಲಾಗಿದೆ. ಈ ಹಿಂದೆ ಇದೆಲ್ಲವೂ ಸದ್ದಿಲ್ಲದೆ ವಿತರಣೆಯಾಗುತ್ತಿತ್ತು, ಸಿಕ್ಕಿದವನಿಗೇ ಸಿಗುತ್ತಿತ್ತು , ಈಗ ಅರ್ಹರಿಗೆ ಸಿಗುವ ವ್ಯವಸ್ಥೆ ಮಾಡಲಾಗಿದೆ. ಮುಂದೆಯೂ ಅರ್ಹ ಫಲಾನುಭವಿಗಳಿಗೆ ಸರಕಾರದ ಸವಲತ್ತು ದೊರೆಯಲಿದೆ.
ಅಶೋಕ್ ರೈ ಶಾಸಕರು ಪುತ್ತೂರು