ಉಪ್ಪಿನಂಗಡಿ: ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಫಾತಿಮತ್ ಅಲ್ಫಾ 554 (ಶೇ.92.33) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಈಕೆಯನ್ನು ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಸನ್ಮಾನಿಸಿದರು.
ಈಕೆ ಉಪ್ಪಿನಂಗಡಿ ನಿವಾಸಿ, ಸ್ಮಾರ್ಟ್ ಹೋಲಿಡೇಸ್ ಮಂಗಳೂರು ಇದರ ಮಾಲಕರಾದ ಅಬ್ದುಲ್ ಗಫೂರ್ ಅವರ ಪುತ್ರಿಯಾಗಿದ್ದು, ಉಪ್ಪಿನಂಗಡಿಯ ಅರಫಾ ವಿದ್ಯಾಕೇಂದ್ರದ ಹಳೆ ವಿದ್ಯಾರ್ಥಿನಿಯಾಗಿದ್ದಾಳೆ. ಪಿಯುಸಿಯನ್ನು ದೇರಳಕಟ್ಟೆಯ ಯೆನಪೋಯ ಪಿಯು ಕಾಲೇಜಿನಲ್ಲಿ ಪೂರೈಸಿದ್ದಾಳೆ.
ಸನ್ಮಾನದ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ನಝೀರ್ ಮಠ, ಅರಫಾ ವಿದ್ಯಾಕೇಂದ್ರದ ನಿರ್ದೇಶಕರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ದ್ವಿತೀಯ ಪಿಯುಸಿ ಪರೀಕ್ಷೆ: ವಿಜ್ಞಾನ ವಿಭಾಗದಲ್ಲಿ ಫಾತಿಮತ್ ಅಲ್ಫಾ(ಶೇ.92.33) ಅಂಕ-ಯು.ಟಿ. ಖಾದರ್ ಅವರಿಂದ ಸನ್ಮಾನ