ಪುತ್ತೂರು: ಪುಣಚ ಗ್ರಾಮದ ಕೋಡಂದೂರು ಸದಾಶಿವ ಅಡ್ಯಂತಾಯ ಅವರ ಪುತ್ರ ಪ್ರೀತಿಪಾಲ್ ಅಡ್ಯಂತಾಯ (53ವ) ಎ.9ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ತಂದೆ, ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಇವರು ಉದ್ಯಮಿಯಾಗಿದ್ದು ಕೊಡುಗೈ ದಾನಿಯಾಗಿದ್ದರು.
ರಾಜಕೀಯ ಪಕ್ಷಗಳ ಹಲವು ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಪ್ರೀತಿಪಾಲ್ ಅವರು ಭೂಗತ ಲೋಕದಲ್ಲಿಯೂ ಗುರುತಿಸಿಕೊಂಡಿದ್ದರು.