ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದಲ್ಲಿ ಕಾರ್ಯಾಚರಿಸುತ್ತಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ೨೫ ವರ್ಷ ಪೂರೈಸಿದ ಸಂಭ್ರಮದಲ್ಲಿದೆ.
ಮಹಿಳೆಯರು ಶಿಕ್ಷಣ ಪಡೆಯುವುದು ಅಷ್ಟೊಂದು ಸೂಕ್ತವಲ್ಲ ಎಂಬ ಪರಿಸ್ಥಿತಿಯಲ್ಲಿದ್ದ ಆಗಿನ ಸಂದರ್ಭದಲ್ಲಿ ದೂರದೃಷ್ಟಿ ಚಿಂತನೆಯೊಂದಿಗೆ ನಾಯಕರ ವಿಭಾಗವೊಂದು ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ಇಟ್ಟ ದಿಟ್ಟ ಹೆಜ್ಜೆ ಇಂದು ಹೆಮ್ಮರವಾಗಿ ಸಮಾಜಕ್ಕೂ, ಸಮುದಾಯಕ್ಕೂ ಶೈಕ್ಷಣಿಕ ನೆರಳು ನೀಡುತ್ತಿದ್ದು ಇಂದು ರಾಜ್ಯದ ಮಾದರಿ ವಿದ್ಯಾಸಂಸ್ಥೆಯಾಗಿ ಹೆಸರು ಪಡೆದಿದೆ.
ಸಂಸ್ಥೆಯಲ್ಲಿ ಏನೇನಿದೆ:
ಪದವಿಪೂರ್ವ ವಿಭಾಗದಲ್ಲಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿವೆ. ಎಲ್ಲಾ ವಿಭಾಗಗಳಿಗೂ ದಾಖಲಾತಿಗಳು ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ಬಿಡುತ್ತದೆ. ಕಳೆದ ನಾಲ್ಕು ವರುಷಗಳ ಹಿಂದೆ ಆರಂಭಿಸಿದ ವಿಜ್ಞಾನ ವಿಭಾಗವಂತೂ ಬಹುಬೇಡಿಕೆಯೊಂದಿಗೆ ವೇಗವಾಗಿ ಅಡ್ಮಿಷನ್ ಫುಲ್ ಆಗುತ್ತಿದೆ.
ಮಾಹಿರಾ ಪದವಿ ವಿಭಾಗ:
ಕೇರಳ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಆರಂಭಗೊಂಡ ಅಲ್ ಮಾಹಿರಾ ಪದವಿ ಕೋರ್ಸ್ ಮಹಿಳೆಯರ ಪಾಲಿನ ಜ್ಞಾನ ದೀವಟಿಕೆಯಾಗಿದೆ. ಹೆಚ್ಚಿನ ಧಾರ್ಮಿಕ ವಿದ್ಯೆಯನ್ನು ಕರಗತ ಮಾಡಲು ವಿದ್ಯಾರ್ಥಿನಿಯರು ಈ ವಿಭಾಗಕ್ಕೆ ದಾಖಲಾಗುತ್ತಾರೆ. ಮೂರು ವರ್ಷಗಳ ಈ ಕೋರ್ಸ್ ಮಹಿಳೆಯ ಜೀವನದ ಎಲ್ಲಾ ಮಜಲುಗಳನ್ನೂ ಸ್ಪರ್ಶಿಸುತ್ತದೆ. ಟೀನೇಜ್, ಯುವತ್ವ, ಸಂಸಾರ, ಕುಟುಂಬ, ವೈವಾಹಿಕ, ಮಕ್ಕಳ ಪಾಲನೆ, ರಾಷ್ಟ್ರ ಪ್ರೇಮದ ಪಾಠ, ರಾಷ್ಟ್ರೀಯ ವಿಚಾರಗಳಲ್ಲಿ ಮಹಿಳೆಯರು ನೀಡಬೇಕಾದ ಕೊಡುಗೆ, ಮಕ್ಕಳನ್ನು ಭಾರತೀಯ ಸಂಸ್ಕೃತಿಯಡಿ ಒಗ್ಗೂಡಿಸಲು ಕೈಗೊಳ್ಳಬೇಕಾದ ವಿಚಾರಗಳು, ಸಮಾಜದಲ್ಲಿ ಹೊಂದಾಣಿಕೆಯಿಂದ ಬಾಳುವ ರೀತಿ ಮುಂತಾದ ಎಲ್ಲಾ ವಿಚಾರಗಳನ್ನೂ ಕುರಾನ್ ಹದೀಸ್ ಮೂಲಕ ಸಮಗ್ರವಾಗಿ ಕಲಿಸಿಕೊಡಲಾಗುತ್ತಿದೆ. ಇದರೊಂದಿಗೆ ಟೀಚರ್ಸ್ ಟ್ರೈನಿಂಗ್, ಕಂಪ್ಯೂಟರ್ ಅರಿವು, ಇಂಗ್ಲೀಷ್ ಮಾತಗಾರಿಕೆನ್ನೂ ನೀಡಲಾಗ್ತದೆ.
ಪದವಿ ವಿಭಾಗ:
ಪದವಿ ವಿಭಾಗವು ಮಂಗಳೂರು ಯೂನಿವರ್ಸಿಟಿ ಅಧೀನದಲ್ಲಿ ಬಿ.ಎ ಮತ್ತು ಬಿ.ಕಾಂ ವಿಭಾಗಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಪದವಿ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಜ್ಞಾನವನ್ನು ನೀಡುವ ನಿಟ್ಟಿನಲ್ಲಿ ವಿಶೇಷ ತರಗತಿಗಳನ್ನು, ಸೆಮಿನಾರ್‌ಗಳನ್ನು ನಡೆಸಲಾಗುತ್ತಿದೆ. ಪದವಿ ವಿಭಾಗಕ್ಕೂ ದಾಖಲಾತಿ ಮಾತ್ರ ಬೇಗನೇ ಫುಲ್ ಆಗುತ್ತದೆ. ಮುಂದೆ ಹಾಸ್ಪಿಟಾಲಿಟಿ, ಸೈಕಾಲಜಿ ತರಗತಿಗಳನ್ನೂ ನಡೆಸಲಾಗುತ್ತದೆ.
ಹಾಸ್ಟೆಲ್ ವಿಭಾಗ:
ದೂರದ ಊರಿನ ವಿದ್ಯಾರ್ಥಿನಿಯರ ಅನುಕೂಲತೆಗಾಗಿ ಇಲ್ಲಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಕೇರಳ ತಮಿಳುನಾಡಿನಿಂದ ವಿದ್ಯಾರ್ಥಿನಿಯರು ಇಲ್ಲಿ ದಾಖಲಾಗುತ್ತಾರೆ. ಜೀವನದ ಅಮೂಲ್ಯ ಪಾಠಗಳನ್ನು ಹಾಸ್ಟೆಲ್ ವ್ಯವಸ್ಥೆಯಲ್ಲಿ ಒಳಪಡಿಸಲಾಗಿದೆ. ಹಾಸ್ಟಲ್ ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್ ಕಲಿಕೆ, ಲೇಖನ, ಬರಹ ತರಬೇತಿ, ಭಾಷಣಾ ಕಲಿಕೆ, ಪಾಕಶಾಸ್ತ್ರ ಮುಂತಾದ ವಿಚಾರಗಳಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ನೀಡಲಾಗುತ್ತದೆ.
ವಿವಿಧ ಮಾರ್ಗಗಳಲ್ಲಿ ಬಸ್ ಸೌಕರ್ಯ:
ವಿದ್ಯಾರ್ಥಿನಿಯರ ಸುರಕ್ಷಿತ ಪ್ರಯಾಣದ ಭಾಗವಾಗಿ ವಿವಿದ ಮಾರ್ಗಗಳಲ್ಲಿ ಸಂಸ್ಥೆಯು ಬಸ್ ವ್ಯವಸ್ಥೆಯನ್ನು ಒದಗಿಸಿದೆ.
ಸದ್ಯಕ್ಕೆ ವಿಟ್ಲ, ಮಾಣಿ, ಉಪ್ಪಿನಂಗಡಿ, ಪಾಣಾಜೆ, ಕಾಣಿಯೂರು, ಈಶ್ವರಮಂಗಲ, ಸುಳ್ಯ, ಕಡಬ, ಬೆಳ್ಳಾರೆ ಮಾರ್ಗವಾಗಿ ಬಸ್ ಸಂಚಾರ ಇದೆ.
ವಿವಿಧ ಸೆಲ್‌ಗಳು, ಮೋಟಿವೇಶನ್:
ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ದಿ ಸಂಸ್ಥೆಯ ಗುರಿಯಾಗಿದ್ದು ದಾಖಲುಗೊಂಡ ವಿದ್ಯಾರ್ಥಿನಿಯ ಪ್ರತಿಭೆ, ಗುರಿ ಎಲ್ಲವನ್ನೂ ಗುರುತಿಸಲಾಗುತ್ತದೆ. ವಿದ್ಯಾರ್ಥಿನಿಯ ಮಾನಸಿಕ ದೌರ್ಭಲ್ಯತೆ, ಪೋಷಕರೊಂದಿಗೆ ಉತ್ತಮ ಸಂಬಂಧ ಇಲ್ಲದಿರುವುದು, ಒಡನಾಟದಲ್ಲಿ ಏರುಪೇರುಗಳು, ಆಗಾಗ ತರಗತಿ ರಜೆ ಮಾಡುವುದು, ಮುಂತಾದ ಎಲ್ಲವನ್ನೂ ನಿಭಾಯಿಸಲು ವಿವಿಧ ವಿಭಾಗಗಳು ಕಾರ್ಯಾಚರಿಸುತ್ತಿದೆ. ವಿವಿಧ ವಿಚಾರಗಳಲ್ಲಿ ನಿರಂತರ ಮೋಟಿವೇಶನ್ ಮತ್ತು ಸೆಮಿನಾರ್ ಗಳನ್ನು ಹಮ್ಮಿಕೊಲ್ಳಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಪಳಗಿದ ಚಿಂತಕರು, ಶೈಕ್ಷಣಿಕ ತಜ್ಞರು, ಬುದ್ದಿಜೀವಿಗಳು, ಸೈಕಾಲಜಿಸ್ಟ್‌ಗಳು ಮತ್ತು ಪ್ರತಿಭಾಶಾಲಿಗಳನ್ನು ಕರೆತಂದು ನಿರಂತರ ತರಬೇತಿ ಅಧ್ಯಯನ ನೀಡಲಾಗ್ತದೆ.
ಸ್ಪೋರ್ಟ್ಸ್, ವ್ಯಾಯಾಮ, ಶೈಕ್ಷಣಿಕ ಪ್ರವಾಸ:
ಆಟೋಟ ವಿಭಾಗದಲ್ಲೂ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ. ಮಾನಸಿಕ ಮತ್ತು ದೈಹಿಕ ಸುರಕ್ಷತೆಯ ಭಾಗವಾಗಿ ವ್ಯಾಯಾಮ, ಓಟ, ಕೊಕ್ಕೊ, ಸೆಟಲ್, ತ್ರೋಬಾಲ್, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವುದಲ್ಲದೇ ಬೌದ್ದಿಕ ವಿಕಸನದ ಭಾಗವಾಗಿ ಚೆಸ್‌ನಂತಹ ಇಂಡೋರ್ ಆಟಗಳಿಗೂ ಪ್ರಾಧಾನ್ಯತೆ ನೀಡಲಾಗುತ್ತದೆ. ಪ್ರತೀ ವರ್ಷ ಎಲ್ಲಾ ವಿಭಾಗಗಳಿಗೂ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಾಗುತ್ತದೆ. ಸುರಕ್ಷಿತ ವಾತಾವರಣದಲ್ಲಿ ಹೆಚ್ಚಿನ ನಿಗಾ ವಹಿಸಿ ನಡೆಸುವ ಈ ಪ್ರವಾಸ ವಿದ್ಯಾರ್ಥಿನಿಯರಿಗೆ ಹೊಸ ಹೊಸ ವಿಚಾರಗಳ ಕಲಿಯಲು ಸಾಧ್ಯವಾಗುತ್ತದೆ.
ಸುಸಜ್ಜಿತ ಸಯನ್ಸ್ ಲ್ಯಾಬ್, ರೆಡ್‌ಕ್ರಾಸ್ ಘಟಕ:
ವಿಜ್ಞಾನ ವಿದ್ಯಾರ್ಥಿನಿಯರ ಅಧ್ಯಯನಕ್ಕೆ ಸುಸಜ್ಜಿತ ವಿನೂತನ ಶೈಲಿಯ ಲ್ಯಾಬ್‌ನ್ನು ನಿರ್ಮಿಸಲಾಗಿದೆ. ಏಕಕಾಲಕ್ಕೆ ಬಹಳಷ್ಟು ವಿದ್ಯಾರ್ಥಿನಿಯರು ಹೊಂದಿಕೊಂಡು ಅಧ್ಯಯನ ಮಾಡಲು ಸ್ಥಳಾವಕಾಶ ಇಲ್ಲಿದೆ. ರೆಡ್ ಕ್ರಾಸ್ ಸಂಸ್ಥೆಯ ಘಟಕವನ್ನೂ ಇಲ್ಲಿ ಸ್ಥಾಪಿಸಲಾಗಿದ್ದು ಹಲವು ಅಧ್ಯಯನಾತ್ಮಕ ತರಗತಿಗಳು ಪರೀಕ್ಷೆಗಳನ್ನು ಮಾಡಲಾಗಿದೆ. ಮುಂದಿನ ಅಧ್ಯಯನ ವರ್ಷದಿಂದ ಸ್ಕೌಟ್, ರೇಂಜರ್ ಘಟಕವನ್ನೂ ಆರಂಭಿಸಲಾಗುವುದು. ಸೆಯನ್ಸ್ ಕ್ಲಬ್, ಕಾಮರ್ಸ್ ಹಬ್, ಆರ್ಟ್ಸ್ ಗ್ಯಾಲರಿಗಳು ಈ ವರ್ಷದಲ್ಲಿ ಕಾರ್ಯಾಚರಿಸುತ್ತಿದ್ದು ವಿದ್ಯಾರ್ಥಿನಿಯರ ಬೌದ್ದಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ.
ಎಲ್ಲರಿಗೂ ದಾಖಲಾತಿಗೆ ಅವಕಾಶ:
ಇದು ಕೇವಲ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮಾತ್ರ ಅಧ್ಯಯನಕ್ಕೆ ಸೀಮಿತಗೊಂಡು ಆರಂಭಿಸಿದ ಕ್ಯಾಂಪಸ್ ಅಲ್ಲ. ಮುಸ್ಲಿಮೇತರ ವಿದ್ಯಾರ್ಥಿನಿಯರೂ ಅವರ ಸಂಪ್ರದಾಯ ನಿಯಮದಂತೆ ಇಲ್ಲಿ ದಾಖಲಾತಿ ಪಡೆಯಬಹುದು. ಪಿ.ಯು.ಸಿ ಮತ್ತು ಪದವಿ ವಿಬಾಗಗಳಲ್ಲಿ ಇತರ ವಿದ್ಯಾರ್ಥಿನಿಯರಿಗೂ ಕಲಿಯುವ ಅವಕಾಶ ಮುಕ್ತವಾಗಿದೆ.
ಎಲ್ಲ ಸಮುದಾಯದ ಉಪನ್ಯಾಸಕಿಯರು:
ಇದು ಮುಸ್ಲಿಂ ಮ್ಯಾನೇಜ್ಮೆಂಟ್ ಸಂಸ್ಥೆಯಾದರೂ ಹೆಚ್ಚಿನ ಸಿಬ್ಬಂದಿಗಳು ಮುಸ್ಲಿಮೇತರರೇ ಆಗಿದ್ದಾರೆ. ಕಳೆದ ಇಪ್ಪತೈದು ವರ್ಷಗಳಿಂದಲೂ ಈ ರೀತಿಯ ಸಮಾನತೆಯನ್ನು ಇಲ್ಲಿ ಕಾಪಾಡಿಕೊಂಡು ಬರುವುದರ ಮೂಲಕ ಭಾರತದ ನೈಜ ಸಂಸ್ಕಾರವನ್ನು ಎತ್ತಿ ಹಿಡಿಯಲಾಗಿದೆ. ಎಲ್ಲಾ ಧರ್ಮಗಳ ಉಪನ್ಯಾಸಕಿಯರನ್ನು ನೇಮಿಸುವುದರ ಮೂಲಕ ಸಂಸ್ಥೆ ಹೆಚ್ಚಿನ ಘನತೆಯನ್ನು ಉಳಿಸಿಕೊಂಡಿದೆ.
ಅಲ್ ಖ್ವಾನಿತಾ ಕೋರ್ಸ್
ಮಹಿಳೆಯರ ಪಾಲಿಗೆ ಅಮೂಲ್ಯವಾದ ಒಂದು ವರ್ಷದ ಖ್ವಾನಿತಾ ಅಧ್ಯಯನ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಉಪಯುಕ್ತ ತರಗತಿಯಾಗಿದೆ. ಒಂದು ವರ್ಷದಲ್ಲಿ ಕುರಾನ್, ಹದೀಸ್‌ನ ನಿಗದಿತ ತರಗತಿಗಳು, ಸಾಂದರ್ಭಿಕ ವಿಚಾರಗಳ ಅಧ್ಯಯನಗಳು, ಮಯ್ಯಿತ್ ಪರಿಪಾಲನೆ, ಮಾಲೆ ಮೌಲೂದು, ದುವಾಗಳ ಪಠಣ ಅಧ್ಯಯನ, ದೈನಂದಿನ, ಗ್ರಹಿಣಿಯರಿಗೆ ಅಗತ್ಯವಾದ ದೈನಂದಿನ ವಿಚಾರ ಕಲೆಗಳು, ಸಂದರ್ಭೋಚಿತ ಘಟ್ಟಗಳನ್ನು ನಿಭಾಯಿಸುವ ಸ್ಪೆಷಲ್ ಟ್ರೈನಿಂಗ್ ಇದರಲ್ಲಿ ಅಡಕವಾಗಿದೆ. ಪ್ರಾಯಮಿತಿ ನಿಬಂಧನೆ ಇಲ್ಲದೆ ಎಲ್ಲಾ ವಯಸ್ಸಿನವರೂ ಇದರಲ್ಲಿ ದಾಖಲಾತಿ ಪಡೆಯಬಹುದಾಗಿದೆ. ಸರಳ ಶೈಲಿಯ ಕಲಿಕಾ ರೂಪ ಈ ಕೋರ್ಸ್‌ನ ವಿಶೇಷತೆಯಾಗಿದೆ. ವುಮೆನ್ಸ್ ಎಜ್ಯುಕೇಶನ್ ಬೋರ್ಡ್ ಇದರ ಸಿಲೆಬಸ್ ಅನುಷ್ಟಾನವಾಗಿ ಇದನ್ನು ಪ್ರಪ್ರಥಮವಾಗಿ ಕುಂಬ್ರ ಮರ್ಕಝುಲ್ ಹುದಾದಲ್ಲಿ ಪ್ರಾರಂಭ ಮಾಡಲಾಗುತ್ತಿದೆ. ಇದು ಒಂದು ವರುಷದ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ ಆಗಿರುತ್ತದೆ.
ಅಧ್ಯಯನ ವರ್ಷಕ್ಕೆ ಎರಡು ಹೊಸ ಕೋರ್ಸ್:
ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯ ನಿರ್ವಹಿಸುವ ಉದ್ದೇಶದಿಂದ ವಿದ್ಯಾರ್ಥಿನಿಯರ ಹೆಚ್ಚಿನ ಬೇಡಿಕೆಗೆ ಅನುಗುಣವಾಗಿ ಹೆಲ್ತ್ ಕ್ಯಾರ್ ಇನ್ಸ್ಟಿಟ್ಯೂಟ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್‌ಗಳನ್ನು ಮುಂದಿನ ಅಧ್ಯಯನ ವರ್ಷದಿಂದ ಆರಂಭಿಸಲು ಉದ್ದೇಶಿಸಲಾಗಿದ್ದು ಇಲ್ಲಿ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಡಿಪ್ಲಮಾ( ಆ.ಔ.ಖಿ.ಖಿ), ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ಡಿಪ್ಲೊಮಾ (ಆ.ಒ.ಐ.ಖಿ), ಅನಸ್ಥೇಶಿಯಾ ಟೆಕ್ನಾಲಜಿ ಡಿಪ್ಲೊಮಾ ವಿಭಾಗಗಳು ವ್ಯವಸ್ಥಿತವಾಗಿ ಕಾರ್ಯಾರಂಭಗೊಳ್ಳಲಿದೆ. ಅಲ್ಲದೆ ಹೆಲ್ತ್ ಕೇರ್ ವಿಭಾಗದಲ್ಲಿ ಹೆಚ್ಚಿನ ಕೋರ್ಸ್‌ಗಳನ್ನೂ ಆರಂಭ ಮಾಡಲಿದೆ.
ಈ ವಿಭಾಗದಲ್ಲಿ ಸೇರಲ್ಪಟ್ಟ ವಿದ್ಯಾರ್ಥಿನಿಯರಿಗೆ ಶರೀಅತ್ ತರಗತಿಗಳೂ ಲಭ್ಯವಿರುವುದಲ್ಲದೇ ಆರೋಗ್ಯ ಕ್ಷೇತ್ರದ ಬಹಳಷ್ಟು ಸುಜ್ಞಾನಗಳನ್ನು ಹಂತಹಂತವಾಗಿ ನೀಡಲ್ಪಡುತ್ತದೆ. ಈ ಕೋರ್ಸ್‌ನ ಪ್ರಾಥಮಿಕ ಸಿದ್ದತೆಗಳು ಪೂರ್ಣಗೊಂಡಿದ್ದು ಮುಂದಿನ ಶೈಕ್ಷಣಿಕ ಪದವಿ ಆರಂಭದ ಸಂದರ್ಭದಲ್ಲಿ ತರಗತಿಗಳು ಪ್ರಾರಂಭಿಸುವ ಸಲುವಾಗಿ ದಾಖಲಾತಿಗಳು ಪ್ರಗತಿಯಲ್ಲಿದೆ.
ಕಂಪ್ಯೂಟರ್ ಸೆಂಟರ್:
ಸಾರ್ವಜನಿಕ ಮಹಿಳೆಯರಿಗಾಗಿ ಕಂಪ್ಯೂಟರ್ ತರಗತಿ ಕೋರ್ಸ್ ನಡೆಸಲು ವ್ಯವಸ್ಥಿತವಾದ ಕಂಪ್ಯೂಟರ್ ಲ್ಯಾಬ್ ಕೆಲಸ ನಿರ್ಮಾಣ ಹಂತದಲ್ಲಿದ್ದು ಮುಂದೆ ವಿವಿಧ ಬಹುಪಯೋಗಿ ಕೋರ್ಸ್ ಗಳನ್ನು ಅತೀ ಕಡಿಮೆ ವೆಚ್ಚಕ್ಕೆ ನೀಡಲು ಆಡಳಿತ ಸಮಿತಿ ಚಿಂತಿಸುತ್ತಿದೆ.
ದಾಖಲಾತಿ ಆರಂಭ:
ಪದವಿ ವಿಭಾಗದ ಬಿ.ಎ, ಬಿಕಾಂ, ಶರೀಅತ್ ವಿಭಾಗದ ಅಲ್ ಮಾಹಿರಾ, ಅಲ್ ಖಾನಿತಾ, ಅಲೈಡ್ ಹೆಲ್ತ್ ಸಯನ್ಸ್‌ನ ಆಔಖಿಖಿ, ಆಔಖಿ, ಆಒಐಖಿ, ಪದವಿಪೂರ್ವ ವಿಭಾಗದ ಸಯನ್ಸ್, ಆರ್ಟ್ಸ್, ಕಾಮರ್ಸ್ ವಿಭಾಗಕ್ಕೆ ದಾಖಲಾತಿ ಪ್ರಗತಿಯಲ್ಲಿದೆ. ಹಾಸ್ಟೆಲ್ ಪ್ರವೇಶಾತಿಯೂ ತ್ವರಿತಗತಿಯಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಸಂಪರ್ಕಿಸಬಹುದು. ಮುಖ್ಯ ಕಚೇರಿ: 8147295883, ಎಲೈಡ್ ಹೆಲ್ತ್ ಸೈನ್ಸ್: 7259337228
ಪಿ.ಯು ವಿಭಾಗ: 7022281002, ಪದವಿ ವಿಭಾಗ: 7022281003, ಶರೀಅತ್ ವಿಭಾಗ: 702281004 ಕರೆ ಮಾಡಬಹುದಾಗಿದೆ.
ಯಶಸ್ಸಿನ ಪಥದಲ್ಲಿ ಸಂಸ್ಥೆ
ಒಟ್ಟಿನಲ್ಲಿ ವಿದ್ಯಾರ್ಥಿನಿಯರು ಕಲಿತು ಉನ್ನತ ವಿದ್ಯೆಯನ್ನು ಗಳಿಸಿ ಸಮಾಜದ ಭದ್ರ ಬುನಾದಿಗಳಾಗಬೇಕು. ಈಗಾಗಲೇ ಹಲವು ಸರಕಾರಿ, ಖಾಸಗಿ, ವಿದೇಶಗಳಲ್ಲಿ ಉನ್ನತ ಜಾಬ್‌ನಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿನಿಯರು ಕೆಲಸ ನಿರ್ವಹಿಸುತ್ತಿದ್ದಾರೆ. ಉತ್ತಮ ದೂರ ದೃಷ್ಟಿಯುಳ್ಳ ಆಡಳಿತ ಮಂಡಳಿಯು ಎಲ್ಲ ವಿಧದಲ್ಲೂ ಸಕ್ರೀಯವಾಗಿ ಕಾರ್ಯಾಚರಿಸುತ್ತಿದ್ದು ಮುಂದೆ ಹಲವು ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶದಲ್ಲಿದೆ ಎಂದು ಮೀಡಿಯಾ ಮರ್ಕಝ್ ಕುಂಬ್ರ ಪ್ರಕಟನೆಯಲ್ಲಿ ತಿಳಿಸಿದೆ.