ಪುತ್ತೂರು: ಕ್ಯಾಂಪ್ಕೋ ಪುತ್ತೂರು ಶಾಖೆಯ ಸಕ್ರೀಯ ಸದಸ್ಯ ಕೆ.ಗೋಪಾಲಕೃಷ್ಣ ಜೋಯ್ಸಾ ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿಯಲ್ಲಿ 154870 ರೂ. ಧನಸಹಾಯ ನೀಡಿದರು.
ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೋಡ್ಗಿ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ ಸತ್ಯನಾರಾಯಣ, ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಅವರು ಶ್ರೀ ಗೋಪಾಲಕೃಷ್ಣ ಜೋಯ್ಸಾ ರವರ ಮಗ ಗಣೇಶ ಜೋಯ್ಸಾ ರವರಿಗೆ ಏ.11ರಂದು ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಕ್ಯಾಂಪ್ಕೋ ಪುತ್ತೂರು ಪ್ರಾಂತೀಯ ವ್ಯವಸ್ಥಾಪಕ ಪ್ರಕಾಶ್ ಕುಮಾರ್ ಶೆಟ್ಟಿ.ಎ., ಶಾಖಾ ಪ್ರಬಂಧಕ ಅಮರೇಶ್ ಪಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.