ಅನಾಥ ಮಹಿಳೆಯನ್ನು ಆಶ್ರಮಕ್ಕೆ ಸೇರಿಸಿದ ಸಮಾಜಸೇವಕರು

0

ಪುತ್ತೂರು: ಕಬಕ ಗ್ರಾಮ ಪಂಚಾಯತ್ ಮುರ ಎಂಬಲ್ಲಿ ವಾಸವಾಗಿರುವ ಸೀತಾ ಎಂಬವರು ಕಳೆದ ಏಳು ತಿಂಗಳಿಂದ ಅನಾರೋಗ್ಯದಿಂದಾಗಿ ಪುತ್ತೂರು ಸರಕಾರಿ ಆಸ್ಪತ್ರೆ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಜೊತೆ ಯಾರೂ ಇಲ್ಲದ ಕಾರಣ ಸಮಾಜ ಸೇವಕರಾದ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಉಮೇಶ್ ನಾಯಕ್ ಮತ್ತು ಎವಿಜಿ ಅಸೋಸಿಯೇಟ್ ಇದರ ಮಾಲಕ ಎವಿ ನಾರಾಯಣ ಪುತ್ತೂರು ಮತ್ತು ಮೋಹನ್ ಕಬಕರವರ ಸಹಕಾರದೊಂದಿಗೆ ಆಶ್ರಮಕ್ಕೆ ಸೇರಿಸಿದರು.

ಕಬಕ ಗ್ರಾಮ ಪಂಚಾಯತ್ ನ ಪಿಡಿಒ ಆಶಾ ಇ, ಗ್ರಾಮ ಪಂಚಾಯತಿ ಸಿಬ್ಬಂದಿ ಯೋಗಿತ, ವಿಕಲಚೇತನ ಪುನರ್ವಸತಿ ಕಾರ್ಯಕರ್ತೆ ಶೀಲಾವತಿ ಸಹಕರಿಸಿದರು.

LEAVE A REPLY

Please enter your comment!
Please enter your name here