ಪುತ್ತೂರು: ಬಲ್ನಾಡು ವಲಯದ ಬಲ್ನಾಡು ಗ್ರಾಮ ಪಂಚಾಯತ್ ನ ಬೆಳಿಯೂರುಕಟ್ಟೆ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಮಂಜೂರಾದ ರೂ 2,50,000 ಮೊತ್ತದ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿಯರಾದ ಶಶಿಧರ್ ರವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಪರಮೇಶ್ವರಿ ಭಟ್,ಜನಜಾಗೃತಿ ತಾಲ್ಲೂಕು ಕೋಶಾಧಿಕಾರಿಗಳಾದ ಎ ಎಮ್ ಪ್ರವೀಣ್ ಚಂದ್ರ ಆಳ್ವ, ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ,ವಲಯಧ್ಯಕ್ಷರಾದ ಸತೀಶ್ ಒಳಗುಡ್ಡೆ,ಒಕ್ಕೂಟದ ಅಧ್ಯಕ್ಷರಾದ ನಾಗೇಶ್,ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರು ಕಿರಣ್ ಕುಮಾರ್ ರೈ,ಮಾಜಿ ವಲಯಾಧ್ಯಕ್ಷರಾದ ಅಂಬ್ರೋಸ್ ಡಿ ಸೋಜ,ಶಾಂತಿದಾಮ ಅಭಿವೃದ್ಧಿ ಸಮಿತಿ ಸದಸ್ಯರು,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು,ಮೇಲ್ವಿಚಾರಕರು, ಸೇವಾಪ್ರತಿನಿಧಿ,ಗ್ರಾಮಸ್ಥರು ಉಪಸ್ಥಿತರಿದ್ದರು.