ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 8ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ವೇದಿಕೆಯ ಉದ್ಘಾಟನೆ ಎ.10 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಸಂಜೆಯಿಂದ ಮಧ್ಯರಾತ್ರಿವರೆಗೆ ನಡೆಯಿತು.

ಸತೀಶ್ ಪಟ್ಲರವರು ಸಮಾಜದ ಆಸ್ತಿ-ಈಶ್ವರ್ ಭಟ್ ಪಂಜಿಗುಡ್ಡೆ:
ಕಾರ್ಯಕ್ರಮವನ್ನು ಚೆಂಡೆ ಹೊಡೆಯುವ ಮೂಲಕ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆರವರು ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಜಾತ್ರೋತ್ಸವದ ಅಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನವನ್ನು ಪ್ರಸ್ತುತಪಡಿಸುತ್ತಿರುವುದು ಶ್ಲಾಘನೀಯ. ಯಕ್ಷಗಾನವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಜೊತೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ರವರು ಇದನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಪಟ್ಲ ಫೌಂಡೇಶನ್ ಅನ್ನು ಹುಟ್ಟುಹಾಕಿ ಬಡ ಕಲಾವಿದರ ಕಣ್ಣೀರೊರೆಸುವ ಕೈಂಕರ್ಯವನ್ನು ಮಾಡುತ್ತಿರುವ ಸತೀಶ್ ಪಟ್ಲರವರು ಸಮಾಜದ ಆಸ್ತಿಯಾಗಿದ್ದಾರೆ. ಪ್ರಸ್ತುತ ಜಾತ್ರೋತ್ಸವದಲ್ಲಿ ಸುಮಾರು ಎಂಭತ್ತು ಸಾಂಸ್ಕೃತಿಕ ತಂಡ ಸೇವಾರೂಪದಲ್ಲಿ ಕಾರ್ಯಕ್ರಮ ನೀಡುತ್ತಿದ್ದು ಎಲ್ಲರನ್ನೂ ಶ್ರೀ ಮಹಾಲಿಂಗೇಶ್ವರ ದೇವರು ಆಶೀರ್ವದಿಸಲಿ ಎಂದರು.

ಪಟ್ಲ ಫೌಂಡೇಶನ್ ಉದ್ದೇಶ ಚಾರಿಟಿ, ಮನರಂಜನೆ-ಪಟ್ಲ ಸತೀಶ್ ಶೆಟ್ಟಿ:
ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಪಟ್ಲ ಫೌಂಡೇಶನ್ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಚಾರಿಟಿ ಮತ್ತು ಮನರಂಜನೆ. ಕಳೆದ ಹತ್ತು ವರ್ಷಗಳಲ್ಲಿ ಯಕ್ಷಗಾನ ರಂಗದ ಅಶಕ್ತ ಕಲಾವಿದರಿಗೆ 61 ಮನೆಗಳನ್ನು ನಿರ್ಮಿಸುವ ಯೋಜನೆಯಿದ್ದು ಇದೀಗ 36 ಮನೆಗಳನ್ನು ಹಸ್ತಾಂತರ ಮಾಡುತ್ತಿದ್ದೇವೆ ಜೊತೆಗೆ ಮೂರು ಸಾವಿರ ಕಲಾವಿದರಿಗೆ ತನ್ನ ಕುಟುಂಬದ ಜೀವನಕ್ಕಾಗಿ ಇನ್ಸೂರೆನ್ಸ್ ಭರಿಸುತ್ತಿದೆ. ಪುತ್ತೂರಿನ ಪಟ್ಲ ಫೌಂಡೇಶನ್ ನಮಗೆ ನೈತಿಕ ಬೆಂಬಲ ನೀಡುತ್ತಿದೆ ಮಾತ್ರವಲ್ಲ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
9 ವರ್ಷದಲ್ಲಿ ಅಶಕ್ತ ಕಲಾವಿದರ ನೆರವಿಗೆ ರೂ.30ಕೋಟಿ ವ್ಯಯ-ಸೀತಾರಾಮ್ ಶೆಟ್ಟಿ ಸವಣೂರು:
ಅಧ್ಯಕ್ಷತೆಯನ್ನು ವಹಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಗೌರವಾಧ್ಯಕ್ಷ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ, ಪಟ್ಲ ಫೌಂಡೇಶನ್ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಕಳೆದ ಒಂಭತ್ತು ವರ್ಷದಲ್ಲಿ ಅಶಕ್ತ ಕಲಾವಿದರ ನೆರವಿಗೆ ರೂ.೩೦ ಕೋಟಿ ಪಟ್ಲ ಫೌಂಡೇಶನ್ ವಿನಿಯೋಗಿಸಿದೆ ಆ ಮೂಲಕ ಕಲಾವಿದರ ಕುಟುಂಬವನ್ನು ಮೇಲಕ್ಕೆತ್ತುವ ಕೆಲಸದೊಂದಿಗೆ ಉಪಕಾರ ಸ್ಮರಣೆ ಪಟ್ಲ ಫೌಂಡೇಶನ್ ಮಾಡುತ್ತಿರುವುದು ಮೆಚ್ಚಬೇಕಾದ್ದು ಎಂದರು.
ಪಟ್ಲ ಸತೀಶ್ ಶೆಟ್ಟಿಯವರ ಕಂಠವನ್ನು ಆಸ್ವಾದಿಸದವರು ಯಾರೂ ಇಲ್ಲ-ರವೀಂದ್ರ ಶೆಟ್ಟಿ ನುಳಿಯಾಲು:
ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಉಪಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಪಟ್ಲ ಫೌಂಡೇಶನ್ ಮುಖ್ಯಸ್ಥ ಸತೀಶ್ ಶೆಟ್ಟಿರವರಿಗೆ ಪುತ್ತೂರಿನ ಕಾರ್ಯಕಾರಿ ಸಮಿತಿ ಮಾತ್ರವಲ್ಲ ಇಂದಿಲ್ಲಿ ಸೇರಿದ ಅಭಿಮಾನಿಗಳ ಗಡಣವೇ ಪಟ್ಲ ಫೌಂಡೇಶನ್‌ರವರ ಅಭಿಮಾನಿಗಳಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ನಾವಡ ಸೇರಿದಂತೆ ಹಲವರು ಯಕ್ಷಗಾನ ರಂಗವನ್ನು ಆಳಿದ್ದರು. ಇಂದು ಪಟ್ಲ ಸತೀಶ್ ಶೆಟ್ಟಿಯವರು ಅವರ ಕಂಠವನ್ನು ಆಸ್ವಾದಿಸದವರು ಯಾರೂ ಇಲ್ಲ ಎಂದರು.
ಸಮಿತಿ ಸದಸ್ಯರಿಗೆ ಅಭಿನಂದನೆ:
ಕಾರ್ಯಕ್ರಮದ ಯಶಸ್ವಿಯಲ್ಲಿ ಸಹಕರಿಸಿದ ಪುತ್ತೂರು ತಾಲೂಕು ಘಟಕದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಅಧ್ಯಕ್ಷ ಕರುಣಾಕರ್ ರೈ ದೇರ್ಲ, ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ಉಪಾಧ್ಯಕ್ಷರಾದ ಡಾ.ಅಶೋಕ್ ಪಡಿವಾಳ್, ನುಳಿಯಾಲು ರವೀಂದ್ರ ಶೆಟ್ಟಿ, ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ರೈ ಬಿ, ಪ್ರಧಾನ ಸಂಚಾಲಕ ಪ್ರಶಾಂತ್ ರೈ ಮುಂಡಾಳಗುತ್ತು, ಕೋಶಾಧಿಕಾರಿ ಪ್ರೊ|ದತ್ತಾತ್ರೇಯ ರಾವ್, ಸದಸ್ಯರುಗಳಾದ ಎಂ.ಜಿ ರೈ, ರಾಕೇಶ್ ರೈ ಕೆಡೆಂಜಿ, ಎಂ.ಆರ್ ಜಯಕುಮಾರ್ ರೈ ಮಿತ್ರಂಪಾಡಿ, ಡಾ.ರಾಜೇಶ್ ಬೆಜ್ಜಂಗಳ, ಗಣೇಶ್ ರೈ ಡಿಂಬ್ರಿ, ಸುಬ್ಬಪ್ಪ ಕೈಕಂಬ, ಎಂ.ಸಂಕಪ್ಪ ರೈ, ಉದಯ ವೆಂಕಟೇಶ್ ಭಟ್, ಶ್ರೀಮತಿ ಅನ್ನಪೂರ್ಣ ಎಸ್.ಕೆ ರಾವ್, ಶ್ರೀಮತಿ ವಿದ್ಯಾಶ್ರೀ ಪಡುಮಲೆ, ಶ್ರೀಮತಿ ಭಾರತಿ ರೈ ಅರಿಯಡ್ಕ, ಗೌರವ ಸಲಹೆಗಾರರಾದ ಕೆ.ಎಚ್ ದಾಸಪ್ಪ ರೈ, ಚಂದ್ರಹಾಸ ರೈ ತುಂಬೆಕೋಡಿ, ಎ.ಜೆ ರೈರವರುಗಳಿಗೆ ಪಟ್ಲ ಸತೀಶ್ ಶೆಟ್ಟಿರವರು ಹೂ ನೀಡಿ ಅಭಿನಂದಿಸಿದರು.
ಚೌಕಿ ಪೂಜೆ/ದೇವರ ಪ್ರಸಾದ:
ಕಾರ್ಯಕ್ರಮದ ಮೊದಲಿಗೆ ಚೌಕಿ ಪೂಜೆ ನೆರವೇರಲ್ಪಟ್ಟಿತು. ಸಭಾ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿರವರಿಗೆ ದೇವಸ್ಥಾನದ ಜಾತ್ರಾ ಮಹೋತ್ಸವದ ವತಿಯಿಂದ ಶಾಲು ಹೊದಿಸಿ, ದೇವರ ಪ್ರಸಾದನ್ನು ದೇವಸ್ಥಾನದ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆರವರು ನೀಡಿದರು.
ಚಂದ್ರಹಾಸ ರೈ ತುಂಬೆಕೋಡಿ ಪ್ರಾರ್ಥಿಸಿದರು. ಶ್ರೀ ,ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ.ಶೆಟ್ಟಿ, ಈಶ್ವರ್ ಬೆಡೇಕರ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ ರೈ ದೇರ್ಲರವರು ಸ್ವಾಗತಿಸಿ, ಕೋಶಾಧಿಕಾರಿ ಪ್ರೊ|ದತ್ತಾತ್ರೇಯ ರಾವ್ ವಂದಿಸಿದರು. ಪ್ರಧಾನ ಸಂಚಾಲಕ ಪ್ರಶಾಂತ್ ರೈ ಮುಂಡಾಳಗುತ್ತು ಕಾರ್ಯಕ್ರಮ ನಿರೂಪಿಸಿದರು.
ದಶಮ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ:
ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ದಶಮ ಸಂಭ್ರಮದ ರಾಷ್ಟ್ರೀಯ ಕಲಾ ಸಮ್ಮೇಳನ ಜೂ.೧ ರಂದು ಮಂಗಳೂರಿನ ಆಡ್ಯಾರ್ ಗಾರ್ಡನ್‌ನಲ್ಲಿ ಜರಗಲಿದ್ದು, ಈ ಕಾರ್ಯಕ್ರಮದಲ್ಲಿ ಫೌಂಡೇಶನ್‌ನ ಮಹಾದಾನಿಗಳು, ಪ್ರಶಸ್ತಿ ಪುರಸ್ಕೃತರು, ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಪ್ರಯುಕ್ತ ಈ ದಶಮ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿನ ಅತಿಥಿ ಗಣ್ಯರು ಬಿಡುಗಡೆಗೊಳಿಸಿದರು.
ರೂ.೧ ಲಕ್ಷ ದೇಣಿಗೆ:
ಯಕ್ಷಧ್ರುವ ಪಟ್ಲ ಫೌಂಡೇಶನ್ ಮಾತೃ ಘಟಕವು ಈಗಾಗಲೇ ಅಶಕ್ತ ಕಲಾವಿದರ ಬಾಳಿಗೆ ನೆರವಿನ ಹಸ್ತವನ್ನು ಚಾಚುತ್ತಿದ್ದು, ಸಂಸ್ಥೆಯು ರೂ.೧೫ ಕೋಟಿಯ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದಕ್ಕಾಗಿ ಫೌಂಡೇಶನ್ ವತಿಯಿಂದ ಅಶಕ್ತ ಕಲಾವಿದರಿಗೆ ಸುಮಾರು ೨೦ ಮನೆಯನ್ನು ನಿರ್ಮಾಣ ಮಾಡಲಿದ್ದು ಇದಕ್ಕಾಗಿ ಯಕ್ಷಧ್ರುವ ಅಭಿಮಾನಿ ಪ್ರೊ|ಎಂ.ಎಲ್ ಸಾಮಗರವರು ತನ್ನ ಅರ್ಧ(ರೂ.೨ ಕೋಟಿ ಬೆಲೆ) ಎಕರೆ ಭೂಮಿಯನ್ನು ಈಗಾಗಲೇ ಯಕ್ಷಧ್ರುವ ಪಟ್ಲ ಫೌಂಡೇಶನ್‌ಗೆ ಹಸ್ತಾಂತರಿಸಿರುತ್ತಾರೆ. ಇದೇ ಎ.೧೯ ರಂದು ಭೂಮಿ ಪೂಜೆ ನಡೆಯಲಿದ್ದು, ಪಟ್ಲ ಫೌಂಡೇಶನ್‌ನ ಈ ಯಶಸ್ವಿ ಯೋಜನೆಗೆ ಪುತ್ತೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕವು ರೂ.ಒಂದು ಲಕ್ಷದ ಚೆಕ್ ಅನ್ನು ಪಟ್ಲ ಸತೀಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ದಕ್ಷಾಧ್ವರ ಗಿರಿಜಾ ಕಲ್ಯಾಣ ಯಕ್ಷಗಾನ..
ಪಟ್ಲ ಸತೀಶ್ ಶೆಟ್ಟಿರವರ ನೇತೃತ್ವದಲ್ಲಿ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗಜ ಕ್ಷೇತ್ರ ಪಾವಂಜೆ ಇವರಿಂದ ಜನಪ್ರಿಯ ಕನ್ನಡ ಪ್ರಸಂಗ ‘ದಕ್ಷಾಧ್ವರ ಗಿರಿಜಾ ಕಲ್ಯಾಣ” (ಪೌರಾಣಿಕ ಪುಣ್ಯ ಕಥಾನಕ)ವನ್ನು ಪ್ರದರ್ಶಿಸಲಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪ್ರಫುಲ್ಲಚಂದ್ರ ನೆಲ್ಯಾಡಿ, ಭರತ್ ರಾಜ್ ವಿ.ಶೆಟ್ಟಿ ಸಿದ್ಧಕಟ್ಟೆ, ಸಂಗೀತ ಮನ್ವಿತ್ ಇರಾ, ಚಂಡೆ, ಮದ್ದಳೆಯಲ್ಲಿ ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು, ಕೌಶಿಕ್ ರಾವ್ ಪುತ್ತಿಗೆ, ಚಕ್ರತಾಳದಲ್ಲಿ ಪೂರ್ಣೇಶ್ ಆಚಾರ್ಯ, ಮುಮ್ಮೇಳದಲ್ಲಿ ಸ್ತ್ರೀ ಪಾತ್ರದಾರಿಗಳಾಗಿ ಅಕ್ಷಯ್ ಕುಮಾರ್ ಮಾರ್ನಾಡ್, ರಾಜೇಶ್ ನಿಟ್ಟೆ, ಯೋಗಿಶ್ ಕಡಬ, ವಿಶ್ವಾಸ್ ಕಾವೂರು, ವಿದೂಷಕರಾಗಿ ಹಾಸ್ಯರತ್ನ ಬಾಲಕೃಷ್ಣ ಮಣಿಯಾಣಿ ಮವಾರು, ಹಾಸ್ಯಪಟು ಸಂದೇಶ್ ಮಂದಾರ, ಬಣ್ಣ ಮನೀಷ್ ಪಾಟಾಳಿ ಎಡನೀರು, ಮಧುರಾಜ್ ಪೆರ್ಮುದೆ, ಮನ್ವಿತ್ ನಿಡ್ಡೋಡಿ, ಪ್ರಧಾನ ಪಾತ್ರಧಾರಿಗಳಾಗಿ ಬಿ.ರಾಧಾಕೃಷ್ಣ ನಾವಡ ಮಧೂರು, ಸಂತೋಷ್ ಕುಮಾರ್, ಮೋಹನ್ ಬೆಳ್ಳಿಪ್ಪಾಡಿ, ಲೋಕೇಶ್ ಮುಚ್ಚೂರು, ದಿವಾಕರ ಕಾಣಿಯೂರು, ಸುಬ್ರಾಯ ಹೊಳ್ಳ ಕಾಸರಗೋಡು, ದಿವಾಣ ಶಿವಶಂಕರ್ ಭಟ್, ರಾಕೇಶ್ ರೈ ಅಡ್ಡ, ರಂಜಿತ್ ಗೋಳಿಯಡ್ಕ-ಮಲ್ಲ, ಸುಹಾಸ್ ಪಂಜಿಕಲ್ಲು, ರಮೇಶ್ ಪಟ್ರಮೆ, ಮಧುರಾಜ್ ಪೆರ್ಮುದೆ, ಮನ್ವಿತ್ ನಿಗ್ಗೋಡಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಡಿ.ಮಾಧವ ಬಂಗೇರ ಕೊಳತ್ತಮಜಲು, ಲಕ್ಷ್ಮಣ್ ಪೆರ್ಮುದೆ, ಭುವನ್ ಮೂಡುಜೆಪ್ಪು, ಸೋಹನ್ ರಾಮಕುಂಜರವರು ಭಾಗವಹಿಸಿದರು.