ಗ್ರಾಮ ಸಹಾಯಕರ ಹುದ್ದೆಗೆ ಗ್ರಾಮದವರನ್ನೇ ಆಯ್ಕೆ ಮಾಡುವಂತೆ ತಹಶೀಲ್ದಾರ್‌ಗೆ ಬರೆಯಲು ನಿರ್ಣಯ
ಪೆರಾಬೆ: ಕುಂತೂರು ಗ್ರಾಮದ ಗ್ರಾಮ ಸಹಾಯಕರ ಹುದ್ದೆಗೆ ಕುಂತೂರು ಗ್ರಾಮದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುವಂತೆ ತಹಶೀಲ್ದಾರ್‌ಗೆ ಬರೆಯಲು ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ಎ.8ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕುಂತೂರು ಮತ್ತು ಪೆರಾಬೆ ಗ್ರಾಮದ ಗ್ರಾಮಕರಣಿಕರು ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯ ಇರುವಂತೆ ಕ್ರಮ ಕೈಗೊಳ್ಳುವಂತೆಯೂ ತಹಶೀಲ್ದಾರರಿಗೆ ಪತ್ರ ಬರೆದು ನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಬಿ.ಕೆ.ಕುಮಾರ, ಸದಾನಂದ ಕುಂಟ್ಯಾನ, ಸುಶೀಲ, ಫಯಾಝ್ ಸಿ.ಎಂ., ಮೋಹಿನಿ, ಮಮತ, ಕಾವೇರಿ, ಲೀಲಾವತಿ, ಮೇನ್ಸಿ ಸಾಜನ್, ಮೋಹನ್‌ದಾಸ್ ರೈ, ಚಂದ್ರಶೇಖರ ರೈ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಲಿನಿ ಬಿ.ಕೆ.ಸ್ವಾಗತಿಸಿ, ವರದಿ, ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.