*ಮೇ 28 ರಿಂದ 30: ನೂತನ ಮಂದಿರ ಲೋಕಾರ್ಪಣೆ ಹಾಗೂ ದೇವರ ಛಾಯಾಬಿಂಬ ಪ್ರತಿಷ್ಟಾ ಮಹೋತ್ಸವ
ಧಾರ್ಮಿಕ ಶಿಕ್ಷಣ ಸಮಿತಿ ರಚನೆ
ಶೃಂಗೇರಿ ಪೀಠದ ಅನುಗ್ರಹದೊಂದಿಗೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕಾರ್ಯದಲ್ಲಿ ನಿರತರಾಗಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ರಾವ್ ನಟ್ಟೋಜ ರವರು ವಿನಾಯನಗರ ಮಂದಿರದಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಚಾಲನೆ ನೀಡಿ ಮಾತನಾಡಿ ‘ಪ್ರತಿ ಮನೆ ಮನೆಯಲ್ಲಿ ಧರ್ಮಜಾಗೃತಿ ಪ್ರತೀ ಗ್ರಾಮದ ಮಂದಿರ, ದೇವಸ್ಥಾನಗಳಲ್ಲಿ ಧರ್ಮಶಿಕ್ಷಣವಾಗಬೇಕು. ಹಿಂದುಗಳಲ್ಲಿ ನಿಜವಾದ ಧರ್ಮದ ಅರಿವು ಕೊರತೆಯಿದೆ. ಅದಕ್ಕಾಗಿ ಶೃಂಗೇರಿ ಪೀಠ ಧರ್ಮಶಿಕ್ಷಣದತ್ತ ಮುಖಮಾಡಿದೆ. ಪ್ರತೀ ಹಿಂದು ಮನೆಗೆ ಶೃಂಗೇರಿ ಪೀಠ ಧರ್ಮಶಿಕ್ಷಣವನ್ನು ತಲುಪಿಸುತ್ತಿದೆ. ಈ ಭಾಗದಲ್ಲಿಯೂ ವಾರದಲ್ಲಿ ಒಂದು ದಿನ ಧರ್ಮ ಶಿಕ್ಷಣಕ್ಕೆ ನಮ್ಮ ಮಕ್ಕಳನ್ನು ಕಳುಹಿಸಬೇಕು. ಪುತ್ತೂರಿನ ಶಾಸಕರು ಧರ್ಮ ಶಿಕ್ಷಣಕ್ಕೆ ಬೆಂಬಲ ಸೂಚಿಸಿದ್ದಾರೆ. ಇದಕ್ಕೆ ಪಕ್ಷಬೇಧವಿಲ್ಲ. ಮುಂದಿನ ಜನಾಂಗಕ್ಕೆ ಧರ್ಮಶಿಕ್ಷಣ ಕೊಡುವುದೇ ನಿಜವಾದ ಧರ್ಮರಕ್ಷಣೆ. ಈ ನಿಟ್ಟಿನಲ್ಲಿ ಪುತ್ತೂರು ರಾಜ್ಯಕ್ಕೆ ಮಾದರಿ ಮಾಡಲಿದ್ದೇವೆ’ ಎಂದರು.
ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ನವೀಕೃತ ಮಂದಿರದ ಲೋಕಾರ್ಪಣೆ ಮತ್ತು ಶ್ರೀ ದೇವರ ಛಾಯಾ ಬಿಂಬ ಪ್ರತಿಷ್ಠಾ ಮಹೋತ್ಸವ ಮೇ 28 ರಿಂದ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಶ್ರೀ ದೇವರ ಛಾಯಾಬಿಂಬಕ್ಕೆ ಭಕ್ತರಿಂದ ಬೆಳ್ಳಿ ಸಮರ್ಪಣೆ ಕಾರ್ಯಕ್ರಮ ಏ. 10 ರಂದು ಜರಗಿತು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬೈಲಾಡಿಯವರು ಮಾತನಾಡಿ ‘ಭಜನೆಯಿಂದ ವಿಭಜನೆಯಿಲ್ಲ’ ಎಂಬ ಮಾತಿನಂತೆ ಈ ಭಾಗದಲ್ಲಿ ಭಜನೆಯ ಮೂಲಕ ದೇವರ ಮಂದಿರ ಉನ್ನತಿಯತ್ತ ಸಾಗಲಿ. ಈ ಭಾಗದ ಜನರಿಗೆ ನೆಮ್ಮದಿಯ ತಾಣವಾಗಲಿ’ ಎಂದರು.



ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ವಿ.ಆರ್. ಇನ್ನೋವೇಟಿವ್ ಸೊಲ್ಯುಷನ್ ನ ನಿರ್ದೇಶಕ ಎಂ.ಡಿ. ವೆಂಕಟೇಶ್ ರವರು ಮಾತನಾಡಿ ದೇವರನ್ನು ಒಲಿಸಿಕೊಳ್ಳುವುದು ಭಕ್ತಿ ಮತ್ತು ಪ್ರೀತಿ. ನಮ್ಮಲ್ಲಿರುವ ಭಾವನೆಗಳೇ ದೇವರ ನಿಜವಾದ ಪೂಜೆ. ವಾಟ್ಸಾಪ್, ಫೇಸ್ಬುಕ್ ಉಪಯೋಗಿಸಿದಂತೆ ದಿನಂಪ್ರತಿ ದೇವರಲ್ಲಿ ಮಾತನಾಡಲು ಸಮಯ ಮೀಸಲಿರಿಸಬೇಕು. ದೇವರ ಮೇಲೆ ಸಂಪೂರ್ಣ ನಂಬಿಕೆ, ಶರಣಾಗತಿ ಇದ್ದರೆ ಮಾತ್ರ ದೇವರಿಂದ ಪ್ರತಿಫಲ ಸಿಗಲು ಸಾಧ್ಯ. ಬೆಳ್ಳಿ ಸಮರ್ಪಣೆಗೆ ಚಾಲನೆ ನೀಡಿದ ಪಾಣಾಜೆ ವಿವೇಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸುನೀತಿ ನಾಗರಾಜನ್ ತಲೆಪ್ಪಾಡಿ ರವರು ಮಾತನಾಡಿ ‘ಈ ಭಜನಾ ಮಂದಿರದ ಮೂಲಕ ನಾವೆಲ್ಲಾ ಒಂದೇ ಮನಸ್ಕರ ರೀತಿಯಲ್ಲಿ ಕೈ ಜೋಡಿಸಿ ಮಂದಿರ ಅಭಿವೃದ್ದಿ ಗೆ ಶ್ರಮಿಸುವ ಶಕ್ತಿ ದೇವರು ನೀಡಲಿ’ ಎಂದರು.
ಮುಖ್ಯ ಅತಿಥಿಗಳಾಗಿದ್ದ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ ರವರು ಮಾತನಾಡಿ, ಏಕ ಮನಸ್ಸಿನಿಂದ ಸೇರುವ ಕ್ಷೇತ್ರ ಭಜನಾ ಮಂದಿರ. ವ್ಯಕ್ತಿ ಸ್ವತಃ ದೇವರಾದಾಗ ಮಾತ್ರ ಸಮಾಜ ಉತ್ತಮವಾಗಿ ನಡೆಯಬಲ್ಲುದು. ನಮ್ಮ ಮನೆ ಸರಿಯಾದ ರೀತಿಯಲ್ಲಿ ನಿರ್ಮಾಣವಾಗವೇಕು. ನಮ್ಮ ಸಮಾಜ ನಮ್ಮ ಜೊತೆ ಇರಬೇಕು ಎಂಬ ಭಾವನೆ ನಮ್ಮಲ್ಲಿರಬೇಕು. ದೇವರಿಗೆ ಬೆಳ್ಳಿ ಸಮರ್ಪಣೆಗೆ ಪ್ರತೀ ಮನೆಯಿಂದ ದುಡಿದು ತಿನ್ನುವವವರೂ ಬೆಳ್ಳಿ ಸಮರ್ಪಿಸುತ್ತಿರುವುದು ನಿಜವಾದ ದೇವತಾ ಕಾರ್ಯ. ಅದಕ್ಕಾಗಿ ನಾನು ಈ ಭಾಗದವರನ್ನು ಅಭಿನಂದಿಸುತ್ತೇನೆ’ ಎಂದರು.
ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ರವರು ಮಾತನಾಡಿ ‘ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿ ಕಲಿಸಿ, ಸಂಘಟನೆ ಮೂಲಕ ಸಮಾಜ ನಿರ್ಮಾಣದಲ್ಲಿ ನಾವೇ ಜವಾಬ್ದಾರಿ ನಿರ್ವಹಿಸಬೇಕಾಗಿದೆ’ ಎಂದರು. ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ ರವರು ಮಾತನಾಡಿ ‘ಈ ಭಜನಾ ಮಂದಿರ ನಿರ್ಮಾಣವಾಗಬೇಕಾದರೆ ಅದಕ್ಕೆ ಹೋರಾಡಿದ ಅನೇಕ ಜನರ ಶ್ರಮವನ್ನು ಸ್ಮರಿಸಬೇಕಾಗುತ್ತದೆ. ಹಿಂದು ಸಮಾಜ ಉಳಿಸ ಬೆಳೆಸಬೇಕಾದರೆ ಹಿರಿಯರು ಕುಳಿತು ಚಿಂತಿಸಬೇಕಾದ ಅನಿವಾರ್ಯತೆ ಇದೆ. ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕ ರಾಧಾಕೃಷ್ಣ ರೈ ಪಟ್ಟೆ ಯವರು ಮಾತನಾಡಿ ಇಲ್ಲಿನ ಸ್ವಯಂಸೇವಕರ ಕಾರ್ಯವನ್ನು ಶ್ಲಾಘಿಸಿದರು. ಅನೂತ್ತಮ್ ಚಾಕಲೇಟ್ ಸಂಸ್ಥಾಪಕಿ ಸ್ವಾತಿ ಬಾಲಸುಬ್ರಹ್ಮಣ್ಯಂ ರವರು ಮಾತನಾಡಿ ‘ಭಜನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಇದಕ್ಕೆ ಸಂಘಟನಾ ಶಕ್ತಿಯಿದೆ’ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಕಾಶ್ ಬೋರ್ಕರ್ ಕತ್ತಲೆಕಾನ, ಶಂಕರನಾರಾಯಣ ರಾವ್ ಪಾರ, ರಾಘವ ಪೂಜಾರಿ ಮರತ್ತಮೂಲೆ, ಪಾಣಾಜೆ ಪ್ರಾ.ಕೃ.ಪ.ಸಹಕಾರ ಸಂಘದ ಸಿಇಒ ಹರೀಶ್ ಕುಮಾರ್, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರ ಸಂಘದ ಉಪಾಧ್ಯಕ್ಷ ಹರೀಶ್ ಗೌಡ ಗುಮ್ಮಟೆಗದ್ದೆ, ದ.ಕ. ಜಿಲ್ಲಾ ಜೇನು ವ್ಯವಸಾಯಗಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮನಮೋಹನ ಅರಂಭ್ಯ ಭಾಗವಹಿಸಿದರು. ವೇದಿಕೆಯಲ್ಲಿ ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಶ್ರೀಕುಮಾರ್ ಭಟ್ ಅಡ್ಯೆತ್ತಿಮಾರ್, ಸುರೇಂದ್ರ ಕಕ್ಕೂರು, ಗಣೇಶ್ ಪಂಬೆಜಾಲು, ದಿನೇಶ್ ಪಂಬೆಜಾಲು ಉಪಸ್ಥಿತರಿದ್ದರು.
ಕು. ನಿಯತ ಪ್ರಾರ್ಥಿಸಿದರು. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಭಜನಾ ಮಂದಿರದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕರವರು, ಶ್ರೀ ದೇವರ ದಿವ್ಯ ಶಕ್ತಿ ಇಲ್ಲಿ ವೃದ್ಧಿಸಲ್ಪಟ್ಟಿದೆ. 17 ಲಕ್ಷ ರೂ. ವೆಚ್ಚದಲ್ಲಿ ಕೆಲಸ ಕಾಮಗಾರಿಗಳು ನಡೆದಿವೆ. ಊರ ಪರವೂರ ಭಕ್ತರ ಸಹಕಾರದಿಂದ ಇಲ್ಲಿಯವರೆಗಿನ ಕಾರ್ಯಗಳು ಸುಸೂತ್ರವಾಗಿ ನೆರವೇರಿವೆ. 257 ಮನೆಗಳ ಸಹಭಾಗಿತ್ವದಲ್ಲಿ ಛಾಯಾ ಬಿಂಬಕ್ಕೆ ಬೆಳ್ಳಿ ಸಮರ್ಪಣೆ ಪ್ರತೀ ವಾರ ಭಜನಾ ಸಂಕೀರ್ತನೆ, ನಗರ ಭಜನೆ, ಚೈತನ್ಯ ಹಸ್ತ, ನವರಾತ್ರಿ, ಕೃಷಿ ಮಾಹಿತಿ, ಇನ್ನಿತರ ಅನೇಕ ಕಾರ್ಯ ಚಟುವಟಿಕೆಗಳ ಮೂಲಕ ಮಂದಿರ ಸಮಾಜಮುಖಿ ಕಾರ್ಯಗಳು ನಡೆಯುತ್ತಿರುವುದು ಬಹಳ ಸಂತೋಷದ ವಿಚಾರ ಎಂದರು.
ಗೀತಾ ಗೋಪಣ್ಣ ಗೌಡ, ಗಣೇಶ್ ಪಂಬೆಜಾಲು, ಸುರೇಂದ್ರ ಕಕ್ಕೂರು, ಲಿಂಗಪ್ಪ ಗೌಡ ಕಕ್ಕೂರು, ಶ್ರೀನಿವಾಸ ಕುಲಾಲ್ ಉಡ್ಡಂಗಳ, ಪ್ರೇಮಲತಾ ಜೆ. ರೈ, ಸತ್ಯನಾರಾಯಣ ಮಣಿಯಾಣಿ ತಲಪ್ಪಾಡಿ, ಸಾಂತಪ್ಪ ಗೌಡ ಪಂಬೆಜಾಲು, ಪುರಂದರ ನಾಯರಡ್ಕ, ಕೃಷ್ಣಪ್ಪ ಕುಲಾಲ್, ಜಯರಾಮ ಗಾಂಭೀರ್ಯ ಮಡ್ಯಂಪಾಡಿ, ಪಾರ್ವತಿ ಲಿಂಗಪ್ಪ ಗೌಡ ಅತಿಥಿ ಅಭ್ಯಾಗತರನ್ನು ಶಾಲು ಸ್ಮರಣಿಕೆಯೊಂದಿಗೆ ಸ್ವಾಗತಿಸಿದರು. ಪುನರ್ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕಕ್ಕೂರು ವಂದಿಸಿದರು. ಶಿವಪ್ರಸಾದ್ ತಲಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂದಿರ, ಶ್ರೀ ಸಿದ್ಧಿವಿನಾಯಕ ಸೇವಾ ಟ್ರಸ್ಟ್ ಹಾಗೂ ಪುನರ್ ನಿರ್ಮಾಣ ಸಮಿತಿ ಪದಾಧಿಕಾರಿಗಳು ಸಹಕರಿಸಿದರು. ಕಾರ್ಯಕ್ರಮದ ಬಳಿಕ ಪ್ರತಿಷ್ಟಾ ಮಹೋತ್ಸವದ ಉಪಸಮಿತಿಗಳನ್ನು ರಚಿಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.