ಬೆಳಂದೂರು ಗ್ರಾ.ಪಂ. ನೂತನ ಕಟ್ಟಡ ಲೋಕಾರ್ಪಣೆ

0

ಕಾಣಿಯೂರು: ಗ್ರಾಮದ ಬೆಳವಣಿಗೆಯಲ್ಲಿ ಸ್ಥಳೀಯ ಆಡಳಿತದ ಪಾತ್ರ ಅಪಾರ. ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸ್ಥಳೀಯ ಆಡಳಿತ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. ಜನತೆಯ ಆಶೋತ್ತರಗಳನ್ನು ಏಕಾಕಲಕ್ಕೆ ಈಡೇರಿಸುವ ನಿಟ್ಟಿನಲ್ಲಿ ಗ್ರಾ.ಪಂ. ಪ್ರಮುಖ ಪಾತ್ರ ವಹಿಸುತ್ತಿದ್ದು, ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಜವಾಬ್ದಾರಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಸುಳ್ಯ ವಿಧಾನಸಬಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಏ.11ರಂದು ಬೆಳಂದೂರು ಗ್ರಾಮ ಪಂಚಾಯತ್ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.


ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ನೀಡುವ ಮುಖಾಂತರ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್‌ನ ಒಬ್ಬ ಪ್ರಜೆಯಾಗಿ ಗ್ರಾಮವನ್ನು ನಡೆಸುವಂತಹ ಉನ್ನತ ನಾಯಕನಾಗಿ ಬೆಳೆಸಬೇಕು. ನಮ್ಮ ಗ್ರಾಮ ನಮ್ಮ ಅಭಿವೃದ್ದಿ. ಅದಕ್ಕಾಗಿ ನಾವೆಲ್ಲ ಸಂಘಟಿತರಾಗಿ ಗ್ರಾಮದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯತ್ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗಾಗಿ ಮುಂಚೂಣಿಯಲ್ಲಿ ಇರುವ ಒಂದು ಕಾರ್ಯಾಲಯ. ಕೇಂದ್ರ ಮತ್ತು ರಾಜ್ಯ ಸರಕಾರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಗ್ರಾ.ಪಂ.ಪ್ರಮುಖ ಪಾತ್ರ ವಹಿಸುತ್ತದೆ. ಆ ಮುಖಾಂತರ ಗ್ರಾಮದ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಜನಪ್ರತಿನಿಧಿಗಳು ಮಾಡುತ್ತಾರೆ. ಜನರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ. ಸಮಸ್ಯೆಗಳಿಗೆ ಪಾರದರ್ಶಕವಾಗಿ ಸ್ಪಂದಿಸುವ ಕೆಲಸ ಮಾಡಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದವರು ಅಡಿಕೆ ಎಲೆ ಚುಕ್ಕೆ ರೋಗ, ಅಡಿಕೆ ಹಳದಿ ರೋಗದಿಂದ ಬಾಧಿಸುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಉಡುಪಿ ಮತ್ತು ದ.ಕ ಜಿಲ್ಲೆಗಳ ಪೈಕಿ ಪುತ್ತೂರು, ಸುಳ್ಯ ಭಾಗದಲ್ಲಿ ಅತೀ ಹೆಚ್ಚು ಈ ರೋಗ ಕಾಣಿಸಿದ್ದು, ಈ ಬಗ್ಗೆ ಕೃಷಿ ಸಚಿವರ ಜೊತೆ ಮಾತನಾಡಿದ್ದೇನೆ. ಸಚಿವರು ಬರುತ್ತೇನೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಪರಿಹಾರವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.


ಗ್ರಾ.ಪಂ, ನೂತನ ಕಟ್ಟಡ ಲೋಕಾರ್ಪಣೆ ಮೂಲಕ ಬೇಡಿಕೆ ಈಡೇರಿದೆ- ತೇಜಾಕ್ಷಿ ಕೊಡಂಗೆ
ಗ್ರಾ.ಪಂ. ಧ್ವಜಸ್ಥಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಬೆಳಂದೂರು ಗ್ರಾ.ಪಂ.ಅಧ್ಯಕ್ಷೆ ತೇಜಾಕ್ಷಿ ಬಿ. ಕೊಡಂಗೆ ಅವರು ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣ ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ಸುಸಜ್ಜಿತ ಕಟ್ಟಡ ನಿರ್ಮಾಣಗೊಂದು ಲೋಕಾರ್ಪಣೆಯಾಗುವ ಮೂಲಕ ಬೇಡಿಕೆ ಈಡೇರಿದೆ. ಎಲ್ಲರ ಸಹಕಾರದಿಂದ ನೂತನ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ. ಗ್ರಾಮದ ಸರ್ವಾಂಗೀಣ ಅಭಿವೃದ್ದಿಯಲ್ಲಿ ಗ್ರಾಮದ ಎಲ್ಲ ಜನತೆಯ ಸಹಕಾರ ಅಗತ್ಯ ಎಂದರು.

ಗ್ರಾ.ಪಂ.ಕಟ್ಟಡ ಸುಸಜ್ಜಿತ, ಮಾದರಿಯಾಗಿ ನಿರ್ಮಾಣಗೊಂಡಿದೆ- ನವೀನ್ ಭಂಡಾರಿ
ಅರಿವು ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ನವೀನ್ ಭಂಡಾರಿ ಎಚ್, ನರೇಗಾ ಯೋಜನೆ ಸಾಮಾನ್ಯ ಜನರಿಗೆ ಕೊಡುವಂತಹ ಕೂಲಿ ಯೋಜನೆ. ಇವತ್ತು ಎಲ್ಲಾ ಗ್ರಾ.ಪಂ. ಸುಸಜ್ಜಿತವಾಗಿ ಇರಲು ಕಾರಣ ಮುಖ್ಯವಾಗಿ ನರೇಗಾ ಯೋಜನೆ. ಅದನ್ನು ಒಂದು ಸಮುದಾಯ ಆಸ್ತಿಯನ್ನಾಗಿ ಅತ್ಯಂತ ಪಾರದರ್ಶಕವಾಗಿ ಆಡಳಿತ ಸೌಧ ನಿರ್ಮಾಣ ಮಾಡಬೇಕಾದರೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಇಚ್ಚಾಶಕ್ತಿ ಕಾರಣ. ಆಗ ಮಾತ್ರ ಸುಸಜ್ಜಿತ ಕಟ್ಟಡ ನಿಮಾಣ ಸಾಧ್ಯ. ಈ ನಿಟ್ಟಿನಲ್ಲಿ ಬೆಳಂದೂರಿನ ಗ್ರಾ.ಪಂ.ಕಟ್ಟಡ ಮಾದರಿಯಾಗಿ ನಿರ್ಮಾಣಗೊಂಡಿದೆ ಎಂದರು.

ಜನರ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಗ್ರಾ.ಪಂ. ಪ್ರಮುಖ ಪಾತ್ರ ವಹಿಸುತ್ತದೆ- ತಾರನಾಥ ಕಾಯರ್ಗ
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಮಾತನಾಡಿ, ಜನರ ಮೂಲಭೂತ ಸೌಕರ್ಯಗಳಿಗೆ, ಮೂಲಭೂತ ಸಮಸ್ಯೆಗಳನ್ನು ನಿವಾರಿಸಿ, ಗ್ರಾಮದ ಅಭಿವೃದ್ದಿಯಲ್ಲಿ ಗ್ರಾ.ಪಂ.ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆರ್ಥಿಕ ಸಮಸ್ಯೆಯನ್ನು ನೀಗಿಸಿದರೆ, ಗ್ರಾಮ ಪಂಚಾಯತ್ ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತದೆ ಎಂದರು.

ಸೇವಾ ಮನೋಭಾವದೊಂದಿಗೆ ಕೆಲಸ ನಿರ್ವಹಿಸಿದರೆ ಯೋಜನೆ ಅನುಷ್ಟಾನ ಸಾಧ್ಯ- ಭರತ್
ಪಂಚಾಯತ್ ರಾಜ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಭರತ್ ಮಾತನಾಡಿ, ನರೇಗಾ ಯೋಜನೆ ಮತ್ತು ಇತರ ಅನುದಾನದಲ್ಲಿ ಇಷ್ಟೊಂದು ಸುಸಜ್ಜಿತ ಕಟ್ಟಡ ನಿರ್ಮಾಣ ಅನುಷ್ಟಾನ ಆಗುವುದು ಹೆಮ್ಮೆಯ ವಿಚಾರ. ಗ್ರಾ.ಪಂ. ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ನಾಣ್ಯದ ಎರಡು ಮುಖಗಳಿದ್ದಂತೆ. ಒಗ್ಗಟ್ಟಿನಲ್ಲಿ, ಸೇವಾ ಮನೋಭಾವದೊಂದಿಗೆ ಕೆಲಸ ನಿರ್ವಹಿಸಿದರೆ ಯಾವುದೇ ಯೋಜನೆಗಳು ಅನುಷ್ಟಾನಗೊಳಿಸಲು ಸಾಧ್ಯವಿದೆ ಎಂದರು.

ಗ್ರಾ.ಪಂ.ನ ಸವಲತ್ತುಗಳು ಮನೆ ಮನೆ ತಲುಪಬೇಕು- ಸಂದೇಶ್ ಕೆ.ಎನ್
ಕಡಬ ತಾ.ಪಂ,ನ ಸಹಾಯಕ ನಿರ್ದೇಶಕ ಸಂದೇಶ್ ಕೆ.ಎನ್ ಮಾತನಾಡಿ, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾ.ಪಂ.ನ ಪಾತ್ರ ಪ್ರಮುಖವಾಗಿರುತ್ತದೆ. ಗ್ರಾ.ಪಂ.ನ ಸವಲತ್ತುಗಳು ಮನೆ ಮನೆ ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು. ಗ್ರಾ.ಪಂ.ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಪಾರ್ವತಿ ಮರಕ್ಕಡ, ವಿಠಲ ಗೌಡ ಅಗಳಿ, ಉಮೇಶ್ವರಿ ಅಗಳಿ, ಜಯರಾಮ ಬೆಳಂದೂರು, ಮೋಹನ ಅಗಳಿ, ಕುಸುಮಾ ಅಂಕಜಾಲು, ತಾರಾ ಅನ್ಯಾಡಿ, ಹರಿಣಾಕ್ಷಿ ಬನಾರಿಯವರು ಅತಿಥಿಗಳಿಗೆ ಶಾಲು, ಹೂಗುಚ್ಛ ನೀಡಿ ಗೌರವಿಸಿದರು. ಗೌರಿ ಮಾದೋಡಿ, ಗೀತಾ ಕುವೆತ್ತೋಡಿ, ಹರೀಣಾಕ್ಷಿ ಬನಾರಿ ಸ್ಮರಣಿಕೆ ನೀಡಿ ಗೌರವಿಸಿದರು. ಪಿಡಿಓ ನಾರಾಯಣ.ಕೆ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಜಯಂತ ಅಬೀರ ಸ್ವಾಗತಿಸಿ, ಸದಸ್ಯ ಲೋಹಿತಾಕ್ಷ ಕೆಡೆಂಜಿಕಟ್ಟ ವಂದಿಸಿದರು. ಕಡಬ ತಾ.ಪಂ.ನ ಉದ್ಯೋಗ ಖಾತರಿ ಯೋಜನೆಯ ಸಂಯೋಜಕ ಭರತ್‌ರಾಜ್ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕ ಸಹಾಯಕರಾದ ಸುನಂದ, ಸಿಬ್ಬಂದಿಗಳಾದ ಮಮತಾ, ಗೀತಾ, ಹರ್ಷಿತ್, ಸಂತೋಷ್, ವಿಮಲ, ಪ್ರಶಾಂತಿ ಸಹಕರಿಸಿದರು.

ಸನ್ಮಾನ: ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಕಡಬ ತಾ.ಪಂ.ಕಾರ್ಯನಿರ್ವಹಕ ಅಧಿಕಾರಿ ನವೀನ್ ಭಂಡಾರಿ ಎಚ್, ನರೇಗಾ ಇಂಜೀನಿಯರ್‌ಗಳಾದ ಮೋಹಿತ್, ಮನೋಜ್ ಕುಮಾರ್, ಗುತ್ತಿಗೆದಾರ, ಪುತ್ತೂರು ಪದ್ಮಶ್ರೀ ಬಿಲ್ಡರ‍್ಸ್ ಮತ್ತು ಕನ್‌ಸ್ತ್ರಕ್ಷನ್‌ನ ಜಯಪ್ರಕಾಶ್ ಸಾಲಿಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್ ಕೆ. ಅವರನ್ನು ಸನ್ಮಾನಿಸಲಾಯಿತು.


ಮಾಜಿ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು, ಸಿಬ್ಬಂದಿಗಳಿಗೆ ಸನ್ಮಾನ:
ಬೆಳಂದೂರು ಗ್ರಾ.ಪಂ.ನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಬಿ.ಸುಗುಣ ಭಟ್, ನಾರಾಯಣ ಗೌಡ ಬೈತಡ್ಕ, ಕರುಣಾಕರ ಪೂಜಾರಿ ಪಟ್ಟೆ, ನಿರ್ಮಲ ಕೇಶವ ಅಮೈ, ನಝೀರ್ ದೇವಸ್ಯ, ಜಗನ್ನಾಥ ಕೆ.ಕೊಡಂಗೆ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಮ್ಮಣ್ಣಿ ಬರಮೇಲು, ನಿಟ್ಟೋಣಿ ಕೆಡೆಂಜಿ, ಚೆನ್ನಪ್ಪ ಗೌಡ ಅಗಳಿ, ಜನಾರ್ದನ ಗೌಡ ಕೂರ, ಜಯಂತಿ ಚಂದ್ರಶೇಖರ ದೋಳ, ವಿಮಲ ಕೂಂಕ್ಯ, ಹರೀಶ್ ಕೆರೆನಾರು ಇವರು ಸನ್ಮಾನಕ್ಕೆ ಪಾತ್ರರಾಗಿದ್ದು, ಈ ಪೈಕಿ ಅಗಲಿದವರ ಮನೆಯವರು ಸನ್ಮಾನವನ್ನು ಸ್ವೀಕರಿಸಿದರು. ಮಾಜಿ ಸದಸ್ಯರಾದ ಜನೇಶ್ ಭಟ್ ಬರೆಪ್ಪಾಡಿ, ಲಲಿತಾ ಮರಕ್ಕಡ, ಚಿನ್ನಮ್ಮ ಕೂಂಕ್ಯ, ಸೀತು ಬೊಟ್ಟತ್ತಾರು, ಬಿ.ಜನಾರ್ದನಯ್ಯ, ಕೃಷ್ಣಪ್ಪ ಅಜಿಲ, ರಾಧಾಕೃಷ್ಣ ಬಿ, ಜಾನಕಿ ನೂಜಿ, ಪಿ.ಬಿ.ಅಬ್ದುಲ್ ರಹಿಮಾನ್ ಬೈತಡ್ಕ, ವಿಶ್ವನಾಥ ಮಾರ್ಕಾಜೆ, ಚಂದ್ರಾವತಿ ಕಾರ್ಲಾಡಿ, ಶೇಖರ ಪ್ರಜಾರಿ ಅಬೀರ, ಸಂಪತ್‌ಕುಮಾರ್ ರೈ ಪಾತಾಜೆ, ಸವಿತಾ ಎಂ ಮರಕ್ಕಡ, ಜಾನಕಿ ಕುದ್ಮಾರು, ಸಂಜೀವ ಗೌಡ ಕೂರ, ನಾಗವೇಣಿ ಕೆಲೆಂಬೀರಿ, ಅಬ್ದುಲ ಕೆಲೆಂಬೀರಿ, ಶತ್ರುಂಜಯ ಆರಿಗ ಬೆಳಂದೂರುಗುತ್ತು, ಶ್ಯಾಮಲ ಸಜಂಕು, ಸುಧಾ ಎಂ ಮರಕ್ಕಡ, ತಿಮ್ಮಪ್ಪ ಗೌಡ ಮುಂಡಾಳ, ಮೇದಪ್ಪ ಗೌಡ ಕುವೆತ್ತೋಡಿ, ಜೋಗಿ ಬೊಟ್ಟತ್ತಾರು, ಸವಿತಾ ಮರಕ್ಕಡ, ಚಂದ್ರಶೇಖರ ಬೈತಡ್ಕ, ಜಾನಕಿ ಪಾಲೆತ್ತಡಿ, ಲಕ್ಷ್ಮೀಜಯರಾಮ ಬೆಳಂದೂರು, ಸರೋಜಿನಿ ಕಾರ್ಲಾಡಿ, ಚೆನ್ನಪ್ಪ ಗೌಡ ಕುವೆತ್ತೋಡಿ, ಜನಾರ್ದನ ಪೂಜಾರಿ ಕಡಮ್ಮಾಜೆ, ಕೇಶವ ಜೇಡರಕೇರಿ, ಗೌರಿ ಸಂಜೀವ ಕಾರ್ಲಾಡಿ, ರತ್ನಾವತಿ ಅಬೀರ, ಪಾರ್ವತಿ ಬೊಮ್ಮೋಡಿ, ಶೋಭಾ ಮರಕ್ಕಡ, ಶೋಭ ಕುದ್ಮಾರು, ಮೇದಪ್ಪ ಕೆಡೆಂಜಿ, ರುಕ್ಮೀಣಿ ಕಡಮ್ಮಾಜೆಯವರು ಸನ್ಮಾನಕ್ಕೆ ಪಾತ್ರರಾಗಿದ್ದು, ಈ ಪೈಕಿ ಅಗಲಿದವರ ಸದಸ್ಯರ ಮನೆಯವರು ಸನ್ಮಾನವನ್ನು ಸ್ವೀಕರಿಸಿದರು. ಪಂಚಾಯತ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ಮನ್ಮಥ ಅಜಿರಂಗಳ ಮತ್ತು ಸೌಮ್ಯ, ಮಲ್ಲಿಕಾರವನ್ನು ಸನ್ಮಾನಿಸಲಾಯಿತು.


ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರಿಗೆ ಸನ್ಮಾನ:
ಈ ಸಂದರ್ಭದಲ್ಲಿ ಪ್ರಸ್ತುತ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಸನ್ಮಾನಿಸಲಾಯಿತು. ಅಧ್ಯಕ್ಷರಾದ ತೇಜಾಕ್ಷಿ ಬಿ.ಕೊಡಂಗೆ, ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಪಾರ್ವತಿ ಮರಕ್ಕಡ, ವಿಠಲ ಗೌಡ ಅಗಳಿ, ಮೋಹನ ಅಗಳಿ, ಉಮೇಶ್ವರಿ ಅಗಳಿ, ಜಯರಾಮ ಬೆಳಂದೂರು, ಹರಿಣಾಕ್ಷಿ ಬನಾರಿ, ಗೌರಿ ಮಾದೋಡಿ, ಕುಸುಮಾ ಅಂಕಜಾಲು, ತಾರಾ ಅನ್ಯಾಡಿ, ಗೀತಾ ಕುವೆತ್ತೋಡಿ, ಪ್ರವೀಣ್ ಕುಮಾರ್ ಕೆರೆನಾರು, ರವಿಕುಮಾರ್ ಕೆಡೆಂಜಿ ಸನ್ಮಾನ ಸ್ವೀಕರಿಸಿದರು.

ಸಿಬ್ಬಂದಿ ವರ್ಗದವರಿಗೆ ಸನ್ಮಾನ:
ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾರಾಯಣ ಕೆ, ಲೆಕ್ಕ ಸಹಾಯಕರಾದ ಸುನಂದ ಎ, ಸಿಬ್ಬಂದಿಗಳಾದ ಮಮತಾ, ಗೀತಾ ಎಸ್, ಹರ್ಷಿತ್ ಕೂರ, ಸಂತೋಷ್, ವಿಮಲ, ಪ್ರಶಾಂತಿ ಅವರನ್ನು ಸನ್ಮಾನಿಸಲಾಯಿತು.

ಅಡಿಕೆ ಎಲೆ ಚುಕ್ಕೆ ರೋಗ, ಹಳದಿ ರೋಗ ಪರಿಹಾರಕ್ಕೆ ಪ್ರಯತ್ನ:
ಅಡಿಕೆ ಎಲೆ ಚುಕ್ಕೆ ರೋಗ ಮತ್ತು ಅಡಿಕೆ ಹಳದಿ ರೋಗದಿಂದ ಬಾಧಿಸುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಉಡುಪಿ ಮತ್ತು ದ.ಕ ಜಿಲ್ಲೆಗಳ ಪೈಕಿ ಪುತ್ತೂರು, ಸುಳ್ಯ ಭಾಗದಲ್ಲಿ ಅತೀ ಹೆಚ್ಚು ಈ ರೋಗ ಕಾಣಿಸಿಕೊಂಡಿದ್ದು, ಈ ಬಗ್ಗೆ ಕೃಷಿ ಸಚಿವರ ಜೊತೆ ಮಾತನಾಡಿದ್ದೇನೆ. ಸಚಿವರು ಬರುತ್ತೇನೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಪರಿಹಾರವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಕಿಶೋರ್ ಕುಮಾರ್ ಬೊಟ್ಯಾಡಿ
ಸದಸ್ಯರು, ವಿಧಾನ ಪರಿಷತ್ ಕರ್ನಾಟಕ

LEAVE A REPLY

Please enter your comment!
Please enter your name here