ಪರಿವಾರ ಬಂಟರ ಸಂಘದ ಪುತ್ತೂರು ವಲಯ, ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಾ.30ರಂದು ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಿ ಘೋಷಣೆ ಮಾಡಲಾಯಿತು.
ಪುತ್ತೂರು ವಲಯದ ಗೌರವಾಧ್ಯಕ್ಷರಾಗಿ ಸುಧಾಕರ್ ಕೆ.ಪಿ., ಅಧ್ಯಕ್ಷರಾಗಿ ಪಾದೆ ಸರ್ವೇಶ್ ನಾೖಕ್, ಉಪಾಧ್ಯಕ್ಷರಾಗಿ ಶಿವಾನಂದ ನಾೖಕ್ ನಂದಿಲ, ಕಾರ್ಯದರ್ಶಿಯಾಗಿ ಕವನ್ ನಾೖಕ್ ದರ್ಬೆ, ಜತೆ ಕಾರ್ಯದರ್ಶಿಯಾಗಿ ಗಣೇಶ್ ನಾೖಕ್ ನೆಲ್ಲಿಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ವಿಕ್ರಮ್ ನಾೖಕ್ ರವರನ್ನು ಆಯ್ಕೆ ಮಾಡಲಾಯಿತು.
ಮಹಿಳಾ ವೇದಿಕೆಯ ನೂತನ ಅಧ್ಯಕ್ಷರಾಗಿ ಸುಪ್ರಭಾ ತೆಂಕಿಲ, ಉಪಾಧ್ಯಕ್ಷರಾಗಿ ಮಮತ, ಕಾರ್ಯದರ್ಶಿಯಾಗಿ ಸ್ಮಿತಾ ನಾೖಕ್, ಜತೆ ಕಾರ್ಯದರ್ಶಿಯಾಗಿ ಲೀಲಾವತಿ, ಕೋಶಾಧಿಕಾರಿಯಾಗಿ ರೇಶ್ಮಾ ನಾೖಕ್, ಯುವ ವೇದಿಕೆಯ ಅಧ್ಯಕ್ಷರಾಗಿ ನೀರೋಷ್, ಉಪಾಧ್ಯಕ್ಷರಾಗಿ ಮಿತೇಶ್ ನಾೖಕ್, ಕಾರ್ಯದರ್ಶಿಯಾಗಿ ವೀಕ್ಷಿತ್ ಕಲ್ಲಿಮಾರ್, ಜತೆಕಾರ್ಯದರ್ಶಿಯಾಗಿ ದಯಾರಾಜ್, ಕೋಶಾಧಿಕಾರಿಯಾಗಿ ಗಗನ್ ನಾೖಕ್‌ರವರನ್ನು ಆಯ್ಕೆ ಮಾಡಲಾಯಿತು. ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿ ಕಾರ್ಯಕಾರಿಣಿ ಸದಸ್ಯ ಉಮೇಶ್ ನಾೖಕ್ ಪಿಲಿಕಲ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.