ಮಣಿಕ್ಕರ ಫ್ರೌಢ ಶಾಲಾ ಶಿಕ್ಷಕಿ ಉಮಾವತಿಯವರಿಗೆ ಬೀಳ್ಕೊಡುಗೆ ಸಮಾರಂಭ

0

ಪುತ್ತೂರು: ಸರ್ಕಾರಿ ಪ್ರೌಢಶಾಲೆ ಮಣಿಕ್ಕರ ಇಲ್ಲಿ ಗಣಿತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಮಾವತಿ ಎಲ್ ಇವರು ಪದೋನ್ನತಿಗೊಂಡು ಸರ್ವೆ ಪ್ರೌಢಶಾಲೆಗೆ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡಿರುತ್ತಾರೆ. ಇವರನ್ನು ಎಸ್ ಡಿ ಎಂ ಸಿ ಪೋಷಕರು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪರವಾಗಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮತ್ತೊಮ್ಮೆ ಗುರು-ಶಿಷ್ಯರ ಸಮಾಗಮಕ್ಕೆ ಅವಕಾಶ ಮಾಡಿದಂತಾಯಿತು. ಇದೇ ಸಂದರ್ಭದಲ್ಲಿ ಈ ಶೈಕ್ಷಣಿಕ ವರ್ಷದ ಇನ್ಸ್ಪೇರ್ ಅವಾರ್ಡ್ ಗೆ ಆಯ್ಕೆಯಾದ ಶೇಕ್ ಮಹಮ್ಮದ್ ಇರ್ಹಮ್ ವಿದ್ಯಾರ್ಥಿಯನ್ನು ಗೌರವಿಸುವುದರೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು. ಶಾಲಾ ಮುಖ್ಯ ಶಿಕ್ಷಕಿ ನಳಿನಿ ಕೆ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here