ಕೆಮ್ಮಾಯಿ ಕೃಷ್ಣನಗರ ಸ.ಉ.ಹಿ.ಪ್ರಾ. ಶಾಲಾ ಸಮುದಾಯದತ್ತ ಕಾರ್ಯಕ್ರಮ

0

LKG ಮತ್ತು UKG ತರಗತಿಗಳಿಗೆ ದಾಖಲಾತಿ ಆರಂಭ

ಪುತ್ತೂರು: ಸ. ಉ. ಹಿ ಪ್ರಾ .ಶಾ ಕೆಮ್ಮಾಯಿ ಕೃಷ್ಣನಗರ ಇಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಹಂತದ ಸಮುದಾಯದತ್ತ ಶಾಲಾ ಕಾರ್ಯಕ್ರಮ ಎಸ್ ಡಿ ಎಂಸಿ ಅಧ್ಯಕ್ಷ ರವಿಯವರ ಅಧ್ಯಕ್ಷತೆಯಲ್ಲಿ ಏ 8ರಂದು ಜರಗಿತು.

ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಇಲ್ಲಿನ ಸಹಶಿಕ್ಷಕಾದ ಪ್ರಶಾಂತ್ ಇವರು ಮಾರ್ಗದರ್ಶನ ಶಿಕ್ಷಕರಾಗಿ ಭಾಗವಹಿಸಿ ಪೋಷಕರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಹ ಶಿಕ್ಷಕಿ ಶೃತಿ ನಲಿಕಲಿಯ ಬಗ್ಗೆ ಹಾಗೂ ರಜಾಕಾಲದಲ್ಲಿ ಮಕ್ಕಳು ಹೇಗೆ ಸಮಯವನ್ನು ಹೇಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದುದೆಂದು ಪೋಷಕರಿಗೆ ಚಟುವಟಿಕೆಗಳ ಮಾಹಿತಿ ನೀಡಿದರು. ದೈ.ಶಿ.ಶಿಕ್ಷಕಿ ಕುಸುಮಾವತಿ ಎಂ ಇವರು ಶಾಲೆಯಲ್ಲಿ ನಡೆಯುವ ಮೌಲ್ಯಮಾಪನಗಳ ಬಗ್ಗೆ ಮಾಹಿತಿ ನೀಡಿದರು.


LKG , UKG ತರಗತಿಗಳ ಆರಂಭ
ಸಭೆಯಲ್ಲಿ LKG ಮತ್ತು UKG ತರಗತಿಗಳನ್ನು ನೂತನವಾಗಿ ಶಾಲೆಯಲ್ಲಿ ಆರಂಭಿಸುವ ಮಾಹಿತಿಯನ್ನು ನೀಡಿ ದಾಖಲಾತಿಯನ್ನು ಆರಂಭಿಸಲಾಯಿತು. ಸಭೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷ ರಾದ ರಹಮತ್ , ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.

ಮುಖ್ಯ ಗುರು ಮರಿಯಮ್ಮ ಪಿ ಎಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಶಿಕ್ಷಕಿ ನಾಗವೇಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯಾದ ಶೇಷಮ್ಮ ಎಂ ವಂದಿಸಿದರು. ಅತಿಥಿ ಶಿಕ್ಷಕಿಯರಾದ ಯಶಸ್ವಿನಿ, ರಕ್ಷಾ ಹಾಗೂ ಗೌರವ ಶಿಕ್ಷಕಿ ಅಕ್ಷಯಾ ಸಹಕರಿಸಿದರು.

LEAVE A REPLY

Please enter your comment!
Please enter your name here