ಉಪ್ಪಿನಂಗಡಿ: ಇಲ್ಲಿನ ವನಭೋಜನದ ಶ್ರೀ ವೀರಾಂಜನೇಯ ದೇವರಿಗೆ ಹನುಮ ಜಯಂತಿ ಅಂಗವಾಗಿ ಮುಂಜಾನೆ ಸೀಯಾಳ ಅಭಿಷೇಕ ಮಧ್ಯಾಹ್ನ ವಿಶೇಷ ಅಲಂಕಾರದೊಂದಿಗೆ ಮಹಾಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮೊಕ್ತೇಸರರಾದ ಯು. ನಾಗರಾಜ ಭಟ್, ಕೆ. ಅನಂತರಾಯ ಕಿಣಿ, ಡಾ.ಯಂ. ರತ್ನಾಕರ ಶೆಣೈ ಪ್ರಮುಖರಾದ ಪಣಕಜೆ ಕೃಷ್ಣಪ್ರಸಾದ್ ಶೆಣೈ, ವ್ಯವಸ್ಥಾಪಕ ಕೆ. ಮಂಜುನಾಥ ನಾಯಕ್ ಮತಿತ್ತರರು ಉಪಸ್ಥಿತರಿದ್ದರು. ಅರ್ಚಕ ಸಂದೀಪ್ ಭಟ್ ಪೂಜಾ ವಿಧಿ ವಿಧಾನವನ್ನು ಕೊಟ್ಟರು.