ಅಧ್ಯಕ್ಷ ಪರಮೇಶ್ವರ ಅನಿಲ, ಉಪಾಧ್ಯಕ್ಷೆ ಯಶೋಧ ನೇರೋಳ್ತಡ್ಕ
ಕಾಣಿಯೂರು: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ ಡಿ ಎಂ ಸಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ತಾರನಾಥ ಇಡ್ಯಡ್ಕ ಇವರ ನೇತೃತ್ವದಲ್ಲಿ ನಡೆಯಿತು.
ಎಸ್. ಡಿ.ಎಂ.ಸಿ ಅಧ್ಯಕ್ಷರಾಗಿ ಪರಮೇಶ್ವರ ಅನಿಲ, ಉಪಾಧ್ಯಕ್ಷರಾಗಿ ಯಶೋಧ ನೇರೊಳ್ತಡ್ಕ ಅವರು ಪುನರಾಯ್ಕೆಯಾದರು. ಸದಸ್ಯರಾಗಿ ಮೋಹಿನಿ, ಗೀತಾ ಅಜಿರಂಗಳ, ಗೌರಿ ಮಾದೋಡಿ, ಹನೀಫ್ ಕೂಡುರಸ್ತೆ, ಯಶಕಲಾ ಮುಗರಂಜ, ಸುಮಿತ್ರಾ ಬಂಡಾಜೆ, ವಸಂತಿ ಅಜಿರಂಗಳ, ಆಶಾ ಕಟ್ಟತ್ತಾರು, ಪವಿತ್ರ ಕೆ, ಚಂದ್ರಶೇಖರ ಬೈತಡ್ಕ, ಸೀತಾರಾಮ ಮಿತ್ತಮೂಲೆ, ದಿನೇಶ್ ಅನ್ಯಾಡಿ, ರಮೇಶ್ ಮಾದೋಡಿ, ಚಂದ್ರಶೇಖರ ಮಲೆಕೆರ್ಚಿ, ರಮೇಶ್ ಕಟ್ಟತ್ತಾರು, ಬೆಳಿಯಪ್ಪ ಗೌಡ ಏಳುವೆ ಆಯ್ಕೆಯಾದರು.
ಪದನಿಮಿತ್ತ ಸದಸ್ಯರಾಗಿ ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಗೌಡ ಮುಗರಂಜ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಬಾಲಕೃಷ್ಣ ಕೆ, ಆರೋಗ್ಯ ಸಹಾಯಕಿ ಉಷಾಲತಾ, ಶಿಕ್ಷಕರ ಪ್ರತಿನಿಧಿಯಾಗಿ ದೇವಕಿ ಪಿ ಮತ್ತು ವಿದ್ಯಾರ್ಥಿ ಪ್ರತಿನಿಧಿಯಾಗಿ ಗೌತಮ್ ಆಯ್ಕೆಯಾದರು.