ಪುತ್ತೂರು : ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ಪಲಾರದಲ್ಲಿ ಮಹಾವೀರ ಜಯಂತಿಯ ಸಂದರ್ಭದಲ್ಲಿ ಏಪ್ರಿಲ್ 12ರಂದು ಮಧ್ಯಾಹ್ನ 12 ರಿಂದ 3ರವರೆಗೆ ಅನಿಯಮಿತ ಬಫೆಯನ್ನು ಆಯೋಜಿಸಲಾಗಿತ್ತು.
ಈ ಅನಿಯಮಿತ ಬಫೆಯಲ್ಲಿ ಸೂಪ್,ಸ್ಟಾರ್ಟರ್ ರೋಟಿ ಕರಿ ಸಲಾಡ್, ಜ್ಯೂಸ್, ಅನ್ನದ ಪದಾರ್ಥಗಳು, ಸಿಹಿ ತಿಂಡಿಗಳು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಪದಾರ್ಥಗಳನ್ನು ಒದಗಿಸಲಾಗಿತ್ತು. ಗಳಿಕೆಯ ಒಂದು ಭಾಗವನ್ನು ಭಾರತದಲ್ಲಿ ಹಸಿವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ದತ್ತಿ ಸಂಸ್ಥೆಯಾದ ಅಕ್ಷಯ ಪಾತ್ರೆ ಇದಕ್ಕೆ ದಾನ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಕಡಿಮೆ ದರದಲ್ಲಿ ದೊರೆಯುವ ಈ ಅವಕಾಶವನ್ನು ಜನತೆಯು ಸದುಪಯೋಗಪಡಿಸಿಕೊಂಡಿದ್ದಾರೆ ಹಾಗೂ ಉತ್ತಮ ರೀತಿಯಲ್ಲಿ ನಮಗೆ ಪ್ರೋತ್ಸಾಹವನ್ನು ನೀಡಿದ್ದಾರೆ. ತಮ್ಮ ಜನಸ್ಪಂದನೆಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಈ ಸಂದರ್ಭದಲ್ಲಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.