ಕಾಲನಿ ನಿವಾಸಿಗಳ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇವೆ- ಶಾಸಕ ಅಶೋಕ್ ರೈ
ಪುತ್ತೂರು; ಬಡವರಲ್ಲಿ ದೊಡ್ಡ ವಾಹನ ಇಲ್ಲದೇ ಇರಬಹುದು ಆದರೆ ಅವರು ಮನೆಗೆ ತೆರಳುವ ರಸ್ತೆ ಚೆನ್ನಾಗಿರಬೇಕು, ಇದಕ್ಕಾಗಿ ಕಾಲನಿಗಳ ರಸ್ತೆಯನ್ನು ಅಭಿವೃದ್ದಿ ಮಾಡುತ್ತಿದ್ದೇವೆ, ಭಕ್ತಕೋಡಿ- ಪಾಲೆತ್ತಗುರಿ ಕಾಲನಿ ರಸ್ತೆಗೆ ಕಾಂಕ್ರೀಟ್ ಹಾಕುವ ಮೂಲಕ ಕಾಲನಿ ನಿವಾಸಿಗಳ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಸರ್ವೆ ಗ್ರಾಮದ ಭಕ್ತಕೋಡಿ ಪಾಲೆತ್ತಗುರಿ ರಸ್ತೆಗೆ 25 ಲಕ್ಷ ರೂ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಉಳ್ಳವರು ರಾಜಕೀಯ ಪ್ರಭಾವ ಬಳಸಿ ತಮ್ಮ ಏರಿಯಾದ ರಸ್ತೆಗಳನ್ನು ಕಾಂಕ್ರೀಟ್ ಮಾಡಿಸುತ್ತಾರೆ, ನನ್ನ ಕ್ಷೇತ್ರದ ಎಲ್ಲಾ ರಸ್ತೆಗಳು ಅಭಿವೃದ್ದಿಯಾಗಬೇಕೆಂಬುದು ನನ್ನ ಕನಸಾಗಿದೆ, ಆದರೆ ಇದರ ಜೊತೆಗೆ ಬಡವರು ಮನೆಗೆ ತೆರಳುವ ರಸ್ತೆಯೂ ಅಭಿವೃದ್ದಿಯಾಗಬೇಕು .ಪುತ್ತೂರು ವಿಧಾನಸಭಾ ಕ್ಷೇತ್ರದ ಬಹುತೇಕ ಕಾಲನಿಗಳ ರಸ್ತೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಒಂದೋಂದೇ ಕಾಮಗಾರಿಗಳು ನಡೆಯುತ್ತಿದೆ ಎಂದು ಹೇಳಿದರು.
ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಆಸರೆಯಾಗಿದೆ, ಅದೆಷ್ಟೋ ಕುಟುಂಬಗಳು ಇಂದು ನೆಮ್ಮದಿಯ ಜೀವನ ನಡೆಸುತ್ತಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಬಡವರ ಪರವಾಗಿದೆ, ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಗ್ರಾಮಸ್ಥರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಬೊಗಳೆ ಬಿಟ್ಟದ್ದು ಮಾತ್ರ
ಕೆಲವರು ಅಧಿಕಾರಿದಲ್ಲಿದ್ದಾಗ ಅದು ಮಾಡುತ್ತೇನೆ ಇದು ಮಾಡುತ್ತೇನೆ ಎಂದು ಬೊಗಳೆ ಬಿಟ್ಟದ್ದು ಮಾತ್ರ. ಗ್ರಾಮೀಣ ಕಟ್ಟಕಡೇಯ ವ್ಯಕ್ತಿಗಳು ಸಂಚರಿಸುವ ರಸ್ತೆಯನ್ನು ಕಡೆಗಣಿಸಿದ್ದಾರೆ. ಅಭಿವೃದ್ದಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂಬುದು ಸಾಭೀತಾಗಿದೆ. ಪ್ರತೀ ಬಾರಿ ಚುನಾವಣೆ ಬಂದಾಗ ಧರ್ಮದ ಹೆಸರಿನಲ್ಲಿ ಕಚ್ಚಾಡಿ ಅಧಿಕಾರ ಪಡೆಯುವ ರಾಜಕೀಯ ಪಕ್ಷಗಳು ಚುನಾವಣೆಯ ಬಳಿಕ ಎಲ್ಲವನ್ನೂ ಮರೆತುಬಿಡುತ್ತಾರೆ. ಇಂತವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದ ಶಾಸಕರು ನಾವು ಪ್ರತೀಯೊಬ್ಬರು ಅಣ್ಣ ತಮ್ಮಂದಿರಂತೆ ಬಾಳಿ ಬದುಕಿದರೆ ಮಾತ್ರ ದೇಶ ವಿಶ್ವಗುರುವಾಗಲು ಸಾಧ್ಯ. ಧರ್ಮ ಧರ್ಮಗಳ ನಡುವಿನ ಕಚ್ಚಾಟಕ್ಕೆ ನಾವು ಎಂದೂ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರಕಾರ ಜನರ ಸರಕಾರ: ಕೆ ಪಿ ಆಳ್ವ
ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ, 65 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಜನತೆಗೆ ಎಂದೂ ಕಷ್ಟವನ್ನು ನೀಡಿರಲಿಲ್ಲ, ಆದರೆ ಕಳೆದ 10 ವರ್ಷಗಳಿಂದ ದೇಶದಲ್ಲಿ ಜನ ನೆಮ್ಮದಿಯಾಗಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ನಿತ್ಯ ಬಳಕೆ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿರುವ ಕೇಂದ್ರದ ಬಿಜೆಪಿ ಸರಕಾರ ಜನರ ಹೊಟ್ಟೆಗೆ ಬಡಿಯುವ ಕೆಲಸವನ್ನು ಮಾಡುತ್ತಿದೆ. ಪೆಟ್ರೋಲ್, ಡಿಸೆಲ್, ಅಡುಗೆ ಅನಿಲದ ಬೆಲೆಯನ್ನು ಏರಿಕೆ ಮಾಡುವ ಮೂಲಕ ಗೃಹಿಣಿಯರ ಶಾಪಕ್ಕೆ ತುತ್ತಾಗಿದೆ ಎಂದು ಹೇಳಿದ ಆಳ್ವರವರು ಜನ ನೆಮ್ಮದಿಯಿಂದ ಬಾಳಿ ಬದುಕಬೇಕಾದರೆ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಬೇಕು ಎಂದು ಹೇಳಿದರು.
ಕೊಟ್ಟಮಾತನ್ನು ಉಳಿಸಿಕೊಂಡ ಶಾಸಕರು: ಕಮಲೇಶ್
ಕಳೆದ ಚುನಾವಣೆಯ ಸಂದರ್ಬದಲ್ಲಿ ಭಕ್ತಕೋಡಿ-ಪಾಲೆತ್ತಗುರಿ ಕಾಲನಿ ರಸ್ತೆಯನ್ನು ಅಬಿವೃದ್ದಿ ಮಾಡುವುದಾಗಿ ಶಾಸಕ ಅಶೋಕ್ ರೈ ಅವರು ಮಾತು ಕೊಟ್ಟಿದ್ದರು ಇಂದು ರಸ್ತೆಗೆ 25 ಲಕ್ಷ ರೂ ಅನುದಾನ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕಮಲೇಶ್ ಸರ್ವೆದೊಳಗುತ್ತು ಹೇಳಿದರು. ಬೇಡಿಕೆ ಈಡೇರಿಸಿದ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸರ್ವೆ ವಲಯ ಉಸ್ತುವಾರಿ ರವೀಂದ್ರ ರೈ ನೆಕ್ಕಿಲು, ಸಾಮಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷರಾದ ಸುಪ್ರಿತ್ ಕಣ್ಣಾರಾಯ, ಬೂತ್ ಅಧ್ಯಕ್ಷರುಗಳಾದ ಅಶೋಕ್ ಎಸ್ ಡಿ, ಹಮೀದ್ ನೇರೋಳ್ತಡ್ಕ, ಹನೀಫ್ ಕಲ್ಪನೆ, ಗ್ರಪಂ ಸದಸ್ಯರಾದ ಮಹಮ್ಮದಾಲಿ ನೇರೋಳ್ತಡ್ಕ, ರಸಿಕ ರೈ ಮೇಗಿನಗುತ್ತು, ತಾಪಂ ಮಾಜಿ ಸದಸ್ಯ ಸುಮತಿ ಪರಂಟೋಳು, ಗ್ರಾಪಂ ಮಾಜಿ ಸದಸ್ಯ ರಾಮಚಂದ್ರ ಸೊರಕೆ, ಯತೀಶ್ ರೈ ಮೇಗಿನಗುತ್ತು, ಎಸ್ ಎಂ ಶರೀಫ್, ಗಣೇಶ್ ನೇರೋಳ್ತಡ್ಕ, ವಲಯ ಪದಾಧಿಕಾರಿಗಳಾದ ತಾಜು ರಫೀಕ್, ಅಝಿಝ್ ರೆಮಜಲಾಡಿ, ಮಜೀದ್ ಬಾಳಯ, ಚಂದ್ರಾವತಿ ಭಕ್ತಕೋಡಿ, ಹರೀಶ್ ಅಲೆಕ್ಕಿ, ಹಂಝ ಕೂಡುರಸ್ತೆ, ಶಶಿಧರ್ ಎಸ್ ಡಿ, ಕಿರಣ್ ಎಸ್ ಡಿ, ಉಮೇಶ್ ಎಸ್ ಡಿ, ಗುರುರಾಜ್ ಪಟ್ಟೆಮಜಲು, ಗೌತಮ್ ಪಟ್ಟೆಮಜಲು, ಪ್ರಮುಖರಾದ ಜಿ ಕೆ ಪ್ರಸನ್ನ, ಸುಬ್ರಹ್ಮಣ್ಯ ಕಡಂಬಾರು , ಅರುಣ್ ಕಲ್ಲಮ, ಗ್ರಾಮಸ್ಥರಾದ ಹರೀಶ್ ಪಾಲೆತ್ತಗುರಿ, ಭಟ್ಯ, ಕೊರಗಪ್ಪ, ಚೋಮ, ರಾಮ, ಜೊಹರಾ, ವಿಶ್ವನಾಥ , ಶಂಕರ, ಸುಮತಿ, ಯಾದವ, ದೀಫಿಕಾ, ಅಕ್ಷಯ್, ಶ್ರೇಯಸ್ ಭಕ್ತಕೋಡಿ, ಪುನೀತ್ , ಬಾಲಚಂದ್ರ, ನಿಧೀಶ್, ಪ್ರಶಾಂತ್, ಮನೀಶ್, ಸಚಿನ್, ನರಿಮೊಗರು ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ, ಆರ್ಯಾಪು ವಲಯ ಅಧ್ಯಕ್ಷರಾದ ಗಿರೀಶ್, ಲೀಲಾವತಿ, ಪ್ರೇಮ, ವೇದಾವತಿ, ಗಿರಿಜ, ಕಂಚು, ಬಾಗಿ, ಭಾಗೀರಥಿ, ನಳಿನಿ ಉಪಸ್ಥಿತರಿದ್ದರು. ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕಮಲೇಶ್ ಸರ್ವೆದೊಳಗುತ್ತು ಸ್ವಾಗತಿಸಿ, ವಂದಿಸಿದರು.