ಅಂಬೇಡ್ಕರ್ ರವರ ತತ್ವ ಸಿದ್ದಾಂತಗಳು ಅಜರಾಮರ -ಅಶ್ವಿನಿ
ಸಂಟ್ಯಾರ್: ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ (ರಿ)ಪುತ್ತೂರು ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ) ದರ್ಬೆ ಪುತ್ತೂರು ಇವುಗಳ ಸಹಯೋಗದಲ್ಲಿ ಸಂಟ್ಯಾರಿನ ಸರಸ್ವತಿಪುರಂ ನ ಸರಸ್ವತಿ ಸದನದಲ್ಲಿ ನಡೆಯುತ್ತಿರುವ ʼಅಭಿವ್ಯಕ್ತ-2025 ಮಕ್ಕಳ ಉಚಿತ ಬೇಸಿಗೆ ಶಿಬಿರʼದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕಿ ಕು.ಅಶ್ವಿನಿ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಅಂಬೇಡ್ಕರರ ತತ್ವ ಸಿದ್ದಾಂತಗಳು ಇಂದಿಗೂ ಅಜರಾಮರ ಎಂದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಶಂಕರನಾಯಕ್ ಆಜೇರು, ಸರಸ್ವತಿ ಸಹಕಾರಿ ಸಂಘದ ನಿರ್ದೇಶಕಿ ದೇವಕಿ ಸಂಟ್ಯಾರು, ಹಿರಿಯರಾದ ವಾಸುದೇವ ಕಾಮತ್ ಸಂಟ್ಯಾರು ಉಪಸ್ಥಿತರಿದ್ದು ,ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಶಿಬಿರ ಸಂಯೋಜಕಿ ಭವ್ಯ ಮರಿಕೆ ಕಾರ್ಯಕ್ರಮ ನಿರೂಪಿಸಿದರು. ಯಶೋಧ ಮರಿಕೆ ಸಹಕರಿಸಿದರು.