ಕುಮಾರಮಂಗಲ ಶಾಲೆಗೆ ವಿವಿಧ ಸಂಘ-ಸಂಸ್ಥೆಗಳಿಂದ ನೀಡಿದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ

0

ಪುತ್ತೂರು: ಕುಮಾರ ಮಂಗಲ ಶಾಲೆಯಲ್ಲಿ ಕೊಳವೆಬಾವಿಯನ್ನು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂದರಿ ಬಿ.ಎಸ್, ರವರು ಉದ್ಛಾಟಿಸಿ ಮಾತನಾಡಿ ಶಾಲೆಯ ಅಭಿವೃದ್ಧಿಗೆ ಗ್ರಾಪಂ ನಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಸರಕಾರಿ ಶಾಲೆಯನ್ನು ಉಳಿಸುವ ಪ್ರಯತ್ನವನ್ನು ಪೋಷಕರು,ಗ್ರಾಮಸ್ಥರು ಮಾಡಬೇಕು ಎಂದರು.


ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನೀಡಿದ ನೀರಿನ ಟ್ಯಾಂಕ್ ನ್ನು ಉದ್ಘಾಟನೆ ಮಾಡಿ ಮಾತನಾಡಿ ವಕೀಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಕೆ ಸವಣೂರು ರವರು ಹಿರಿಯ ವಿದ್ಯಾರ್ಥಿ, ಪೋಷಕರ,ಗ್ರಾಮ ಪಂಚಾಯತ್ ಹಾಗೂ ದಾನಿಗಳ ಶಿಕ್ಷಕರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿಯನ್ನು ಮಾಡುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಮುಖ್ಯ ಅತಿಥಿಗಳಾದ ಗ್ರಾಪಂ ಸದಸ್ಯರಾದ ಗಿರಿಶಂಕರ ಸುಲಾಯ ಮಾತನಾಡಿ ಸರಕಾರಿ ಶಾಲೆಗಳ ಬಗ್ಗೆ ನಾವು ವಿಶೇಷ ಒತ್ತನ್ನು ನೀಡಬೇಕು. ಪ್ರತಿಯೊಬ್ಬಪೊಷಕರು ತಮ್ಮ ಮಕ್ಕಳೊಂದಿಗೆ ಶಾಲೆಯ ಅಭಿವೃದ್ಧಿ ತೊಡಗಿಸಿಕೊಳ್ಳಬೇಕು ಎಂದರು.


ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಜಯಶ್ರೀ ಕುಚ್ಚೆಜಾಲು ಗ್ರಾಮ ಪಂಚಾಯತ್ ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ, ಯಶೋಧ ನೂಜಾಜೆ, ಬೆಂಚ್ ಡೆಸ್ಕ ಕೊಡುಗೆಯಾಗಿ ನೀಡಿ ಸವಣೂರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಸುಡಿಮೂಳ್ಳು, ವಿದ್ಯಾರ್ಥಿ ಸಂಘದಿಂದ ನೀಡಿದಂತಹ ಕೊಡುಗೆಯಾದ ನೀರಿನ ಟ್ಯಾಂಕ್ ನ್ನು ಉದ್ಘಾಟನೆಯನ್ನು ಮಾಡಿದರು ಮತ್ತು ದಾನಿಗಳಾದ ಸುರೇಶ ರೈ ಸೂಡಿ ಮುಳ್ಳು, ಹಿರಿಯ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಉಮೇಶ್ ಬೇರಿಕೆ ಕುಮಾರ ಮಂಗಲ,ಎಸ್ ಡಿ ಎಂ ಸಿಯ ಅಧ್ಯಕ್ಷ ಎಸ್. ಹೇಮಲತಾ ಕುಮಾರಮಂಗಲ, ಉಪಾಧ್ಯಕ್ಷರಾದ ಗಂಗಾಧರಕನ್ಯಾಮಂಗಲ ಎಸ್‌.ಡಿ.ಎಂ.ಸಿ.ಯ ಸದಸ್ಯರಾದ ಸುಂದರ. ಕೆ, ಕನ್ಯಾಮಂಗಲ,ರಮೇಶ್,ಕುಮಾರಮಂಗಲ ವೇದಾವತಿ,ಸುರೇಖಾ, ರೇಖಾ,ಸರಿತಾ, ಸ್ಮಿತಾ, ಜಯಂತಿ, ಮಮತ, ಶ್ಯಾಮಲಾ, ಜಗದೀಶ್, ಅಕ್ಕು, ಶಾಲೆಯ ಅತಿಥಿ ಶಿಕ್ಷಕರಾದ ಶ್ಯಾಮ್, ಕಾವ್ಯಶ್ರೀ, ರಾಜೇಶ್ವರಿ ಕನ್ಯಾಮಂಗಲ, ಅಂಗನವಾಡಿ ಶಿಕ್ಷಕಿ ಜಾನಕಿ, ಅಡುಗೆ ಸಿಬ್ಬಂದಿ ಸೇಸಮ್ಮ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಗುರುಗಳಾದ ಸಂತೋಷ್ ಎನ್ ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here