ಭಕ್ತಿ ಗೀತೆಯ ಮೂಲಕ ತನ್ನ ಪ್ರತಿಭೆಯನ್ನು ಮಹಾಲಿಂಗೇಶ್ವರನಿಗೆ ಅರ್ಪಣೆ: ಸೂರ್ಯನಾರಾಯಣ ಬಿ ವಿ
ಪುತ್ತೂರು: ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಪ್ರಯುಕ್ತ ನಟರಾಜ ವೇದಿಕೆಯಲ್ಲಿ ನಡೆದ ಸುಸ್ವರ ಮ್ಯೂಸಿಕ್ಸ್ ಅವರ ಭಕ್ತಿ ಗಾನ ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ದೇವರ ಕುರಿತಾದ ಧ್ವನಿಸುರುಳಿ ʼಪುತ್ತೂರ ಮುತ್ತು ಶ್ರೀ ಮಹಾಲಿಂಗೇಶ್ವರ” ವನ್ನು ಬಿಡುಗಡೆ ಗೊಳಿಸಿದ ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿ ಸೂರ್ಯನಾರಾಯಣ ಬಿ ವಿ ಅವರು ಮಾತನಾಡಿ ಚಂದ್ರಶೇಖರ್ ಮಂಗಳೂರು ಅವರು ಒಬ್ಬ ವಿಜ್ಞಾನ ವಿದ್ಯಾರ್ಥಿ ಆಗಿದ್ದರು ಕೂಡಾ ಸಂಗೀತದಲ್ಲಿನ ಒಲವಿನಿಂದ ಇಂದು ಒಬ್ಬ ಅತ್ಯುತ್ತಮ ಗಾಯಕ ಹಾಗೂ ಸಂಗೀತ ನಿರ್ದೇಶಕನಾಗಿ ಬೆಳೆದಿದ್ದಾರೆ. ಈ ಮಹಾಲಿಂಗೇಶ್ವರ ಮಣ್ಣಿನಲ್ಲಿಯೇ ತನ್ನ ಸಂಗೀತ ಸಾಧನೆಯಲ್ಲಿ ಆರಂಭಿಸಿ ಇಂದು ಶ್ರೀ ದೇವರಿಗೆ ತನ್ನ ಸಾಧನೆಯನ್ನು ಸಂಗೀತದ ಮೂಲಕ ಅರ್ಪಿಸಿದ್ದಾರೆ ಅವರಿಗೆ ಶುಭವಾಗಲಿ,ಹಾಗೂ ಸಾಹಿತ್ಯ ರಚಿಸಿದ ಜನಾರ್ಧನ ದುರ್ಗ ಅವರಿಗೂ ಶುಭವಾಗಲಿ” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಗೀತ ಗುರುಗಳಾದ ಚಂದ್ರಶೇಖರ್ ಹೆಗ್ಡೆ ಮಾತನಾಡಿ, ಸಂಗೀತ ಎಲ್ಲರಿಗೂ ಇಷ್ಟವಾಗುವಂತದ್ದು, ಇಂದು ತನ್ನ ಶಿಷ್ಯನ ದೊಡ್ಡ ಸಾಧನೆಯು ಸಂತೋಷವನ್ನು ಕೊಟ್ಟಿದ್ದು, ಗುರುಗಳನ್ನು ನೆನಪಲ್ಲಿ ಇಟ್ಟುಕೊಂಡಿದ್ದಾರೆ ಮುಂದೆಯೂ ಅವರಿಂದ ಇನ್ನಷ್ಟು ಸಾಧನೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ಡಾ.ರಾಜೇಶ್ ಬೆಜ್ಜಂಗಳ ಉಪಸ್ಥಿತರಿದ್ದು ಶುಭ ಹಾರೈಸಿದರು. ಸಾಹಿತ್ಯ ರಚಿಸಿದ ಜನಾರ್ದನ ದುರ್ಗ ಅವರು, ಹರಿಣಿ ಪುತ್ತೂರಾಯ, ಶೃತಿ ವಿಸ್ಮಿತ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.