ಪುತ್ತೂರು: ರೈಗಳೆ… ನೀವು ದಸರಾಗೆ ಮೈಸೂರಲ್ಲಿ ಕಂಬಳ ಮಾಡ್ತೀರಾ ? ಬೆಂಗಳೂರಲ್ಲಿ ಮಾಡಿದ ಹಾಗೆ ನಮ್ಮ ಮೈಸೂರಲ್ಲೂ ಮಾಡ್ತೀರಾ ? ನಮ್ಮ ಪೂರ್ಣ ಸಹಕಾರ ಇದೆ ..ಹೆಂಗೆ? ಇದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮೊಬೈಲ್ ಕರೆ ಮಾಡಿ ವಿನಂತಿಸಿದ ಪರಿ.
ಮುಂದಿನ ದಸರಾ ವೇಳೆಗೆ ಮೈಸೂರಲ್ಲಿ ಕಂಬಳ ಮಾಡಿದ್ರೆ ಚೆನ್ನಾಗಿರುತ್ತದೆ, ನೀವು ಸೇರಿಕೊಂಡ್ರೆ ಕಂಬಳಕ್ಕೆ ಮೆರುಗು ಬರ್ತದೆ, ಹೇಗೆ ಮಾಡಬಹುದ ? ಎಂದು ಡಿಕೆಶಿ ಕೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕರು ಪ್ರಯತ್ನ ಮಾಡೋಣ, ಬೇರೆ ಬೇರೆ ಕಡೆಗಳಿಂದಲೂ ನಮ್ಮಲ್ಲಿಕಂಬಳ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ನಗುತ್ತಲೇ ಉತ್ತರಿಸಿದ ಶಾಸಕರು ಕಂಬಳ ಮಾಡುವುದಿಲ್ಲ ಎಂದು ಹೇಳದೆ ಉಪ ಮುಖ್ಯಮಂತ್ರಿಯವರಲ್ಲಿ ನೋಡುವ ಎಂಬ ಉತ್ತರವನ್ನಹ ನೀಡಿದ್ದಾರೆ. ಡಿಕೆಶಿ ಅಥವಾ ಸರಕಾರ ಒತ್ತಾಯ ಮಾಡಿದ್ದಲ್ಲಿ ಮುಂದಿನ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರಲ್ಲೂ ಕಂಬಳ ಕೋಣಗಳು ಸದ್ದು ಮಾಡಬಹುದು.
ಕರಾವಳಿಯ ಕಂಬಳಕ್ಕೆ ಇನ್ನು ಎಲ್ಲಿಲ್ಲದ ಬೇಡಿಕೆ ಬರುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ