ಪುತ್ತೂರು ಜಾತ್ರೆ : ಎ.16, 17ರಂದು ವಾಹನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ

0

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಎ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಆಗಮನದ ದಿನ ಮತ್ತು ಎ.17ರಂದು ಬ್ರಹ್ಮರಥೋತ್ಸವದಂದು ಸಂಜೆ 4.00 ಗಂಟೆಯಿಂದ ಪುತ್ತೂರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.


ಸಾರಿಗೆ ಬಸ್, ಆಟೋ ರಿಕ್ಷಾ ಸಂಚಾರ ಮಾರ್ಗದ ಬದಲಾವಣೆ ಮತ್ತು ಭಕ್ತಾದಿಗಳ ವಾಹನ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪುತ್ತೂರು ಉಪವಿಭಾಗದ ಪೊಲೀಸ್ ಉಪ ಅಧಿಕ್ಷಕರ ಕೋರಿಕೆಯಂತೆ ಪುತ್ತೂರು ಸಹಾಯಕ ಕಮೀಷನರ್‌ರವರು ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ.


ಎ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು ಬಪ್ಪಳಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ-275 ತಲುಪಿ ಹೆದ್ದಾರಿ ದಾಟಿ ಹೋಗುವ ಸಮಯದಲ್ಲಿ ಸುಮಾರು 1 ಗಂಟೆ ಕಾಲ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಆಗಲಿದ್ದು ಆ ಸಮಯದಲ್ಲಿ ಸಂಪ್ಯ ಕಡೆಯಿಂದ ಮಂಗಳೂರು, ಕಬಕ ಕಡೆಗೆ ಹೋಗುವ ವಾಹನಗಳು ಅಶ್ವಿನಿ ಜಂಕ್ಷನ್-ದರ್ಬೆ ಜಂಕ್ಷನ್-ಬೆದ್ರಾಳ-ಸಾಲ್ಮರ-ಪಡೀಲ್ ಮೂಲಕ ಸಂಚರಿಸುವುದು. ಮಂಗಳೂರು-ವಿಟ್ಲ-ಕಬಕ ಕಡೆಯಿಂದ ಬರುವ ವಾಹನಗಳು ಲಿನೆಟ್ ಜಂಕ್ಷನ್-ಬೊಳುವಾರು ಜಂಕ್ಷನ್-ಪಡೀಲ್-ಕೊಟೇಚಾ ಹಾಲ್ ಕ್ರಾಸ್-ಸಾಲ್ಮರ-ಎಪಿಎಂಸಿ-ದರ್ಬೆ-ಅಶ್ವಿನಿ ಜಂಕ್ಷನ್ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.


ಎ.16, 17ಕ್ಕೆ ಸಂಜೆ 4ರಿಂದ ಬಸ್ ಸಂಚಾರ ಮಾರ್ಗ ಬದಲಾವಣೆ:
ಎ.16 ಮತ್ತು 17ರಂದು ಸಂಜೆ 4 ಗಂಟೆಯ ನಂತರ ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಸಾರಿಗೆ ಬಸ್‌ಗಳು ಎಂ.ಟಿ.ರಸ್ತೆಯ ರಸ್ತೆಯ ಮೂಲಕ ತೆರಳಿ ಮುಂದೆ ಎಡಕ್ಕೆ ತಿರುಗಿ ಪರ್ಲಡ್ಕ ಬೈಪಾಸ್ ಮೂಲಕ ತೆರಳಬೇಕು. ಕಬಕ, ಮಂಗಳೂರು ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಲಿನೆಟ್ ಜಂಕ್ಷನ್-ಬೊಳ್ವಾರು-ಪಡೀಲ್-ಕೊಟೆಚಾ ಹಾಲ್ ಕ್ರಾಸ್-ಸಾಲ್ಮರ, ಎಂಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಬರಬೇಕು. ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಕೋಟೆಚಾ ಸಾಲ್ಮರ-ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಬರಬೇಕು. ಸುಳ್ಯ-ಸಂಪ್ಯ-ಮಡಿಕೇರಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಅಶ್ವಿನಿ ಜಂಕ್ಷನ್-ದರ್ಬೆ-ಅರುಣಾ ಥಿಯೇಟರ್ ಮೂಲಕ ಬಸ್ ನಿಲ್ದಾಣಕ್ಕೆ ಬರಬೇಕೆಂದು ಸೂಚಿಸಲಾಗಿದೆ.


ಆಟೋರಿಕ್ಷಾ ಸಂಚಾರ ಮಾರ್ಗದಲ್ಲಿ ಬದಲಾವಣೆ:
ನೆಹರೂನಗರ, ಬೊಳುವಾರು ಕಡೆಯಿಂದ ಬರುವ ಆಟೋರಿಕ್ಷಾಗಳು ಮಯೂರ ಇನ್‌ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ, ಉರ್ಲಾಂಡಿ ಕ್ರಾಸ್ ಮೂಲಕ ವಾಪಸ್ಸು ಸಂಚರಿಸುವುದು. ದರ್ಬೆ ಕಡೆಯಿಂದ ಬರುವ ಆಟೋರಿಕ್ಷಾಗಳು ಎಪಿಎಂಸಿ ರಸ್ತೆಯ ಮುಖಾಂತರ ನೆಲ್ಲಿಕಟ್ಟೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಿಂದ ಗಾಂಧಿಕಟ್ಟೆ ಕಡೆಗೆ ಬಂದು ಪ್ರಯಾಣಿಕರನ್ನು ಇಳಿಸಿ, ವಾಪಾಸು ಮುಖ್ಯರಸ್ತೆಯಾಗಿ ದರ್ಬೆ ಕಡೆಗೆ ಸಂಚರಿಸುವುದು. ಪರ್ಲಡ್ಕ-ಬಪ್ಪಳಿಗೆ ಕಡೆಯಿಂದ ಬರುವ ಆಟೋರಿಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ ವಾಪಾಸು ಸಂಚರಿಸುವುದು ಎಂದು ಸೂಚಿಸಲಾಗಿದೆ.

ವಾಹನ ಪಾರ್ಕಿಂಗ್ ಸ್ಥಳದ ವಿವರ
ಉಪ್ಪಿನಂಗಡಿ, ಕೋಡಿಂಬಾಡಿ, ಬನ್ನೂರುನಿಂದ ಬರುವ ವಾಹನಗಳು ಎಪಿಎಂಸಿ ಆವರಣ, ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ ಮೈದಾನ. ಬಂಟರ ಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ, ಸುಳ್ಯ, ಬೆಟ್ಟಂಪಾಡಿ, ಪಾಣಾಜೆ, ಪರ್ಲಡ್ಕ, ಪುರುಷರಕಟ್ಟೆಯಿಂದ ಬರುವ ವಾಹನಗಳು ತೆಂಕಿಲ ಗೌಡ ಸಮುದಾಯ ಭವನ, ತೆಂಕಿಲ ವಿವೇಕಾನಂದ ಶಾಲಾ ಮೈದಾನ, ಕಿಲ್ಲೆ ಮೈದಾನ, ತೆಂಕಿಲ ಗೌಡ ಸಮುದಾಯ ಭವನದ ಎದುರುಗಡೆ ಇರುವ ಖಾಲಿ ಜಾಗದಲ್ಲಿ ಹಾಗೂ ವಿಟ್ಲ, ಕಬಕ, ನೆಹರೂನಗರದಿಂದ ಬರುವ ವಾಹನ ಜೈನಭವನದ ಪಾರ್ಕಿಂಗ್ ಜಾಗ, ಅಸ್ಮಿಲಾಡ್ಜ್ ಬಳಿ ಇರುವ ಖಾಲಿ ಜಾಗ, ತೆಂಕಿಲ ದರ್ಶನ್ ಹಾಲ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕ್ ಮಾಡಬೇಕು ಎಂದು ಸೂಚಿಸಲಾಗಿದೆ
.

LEAVE A REPLY

Please enter your comment!
Please enter your name here