ಪುತ್ತೂರು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಮೌಲ್ಯಮಾಪನವು ಎ.15ರಿಂದ ಪ್ರಾರಂಭಗೊಂಡಿದೆ. ಪುತ್ತೂರು ತಾಲೂಕಿನ ವಿವಿಧ ಪ್ರೌಢ ಶಾಲೆಗಳಿಂದ 172 ಮಂದಿ ಶಿಕ್ಷಕರು ಮೌಲ್ಯ ಮಾಪನದಲ್ಲಿ ಭಾಗವಹಿಸಲಿದ್ದು ಶಿಕ್ಷಕರನ್ನು ಬೀಳ್ಕೊಡಲಾಯಿತು.
ಪ್ರತಿ ವಿಷಯವಾರು ಶಿಕ್ಷಕರಿಗೆ ತಲಾ ಒಂದು ಬಸ್ಸಿನಂತೆ ಒಟ್ಟು ಆರು ಬಸ್ ಗಳಲ್ಲಿ ಶಿಕ್ಷರಿಗೆ ಮಂಗಳೂರು ತೆರಳಲು ಸೌಲಭ್ಯ ಕಲ್ಪಿಸಲಾಗಿದೆ. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ 4 ಬಸ್ ಹಾಗೂ ಸಂತ ವಿಕ್ಟರಣ ಬಾಲಿಕ ಪ್ರೌಢ ಶಾಲೆಯ 2 ಬಸ್ ಗಳನ್ನು ಒದಗಿಸಿದ್ದರು.
ಮಾಯಿದೇ ದೇವುಸ್ ಶಾಲಾ ಬಳಿಯಿಂದ ಹೊರಟ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾರ್ಗದರ್ಶನದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಮೌಲ್ಯ ಮಾಪನದಲ್ಲಿ ಭಾಗವಹಿಸಲಿರುವ ಶಿಕ್ಷಕರನ್ನು ಶುಭಹಾರೈಸಿ,ಬೀಳ್ಕೊಡಲಾಯಿತು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ., ಸಂಘದ ಪದಾಧಿಕಾರಿಗಳಾದ ವಿನೋದ್ ಕುಮಾರ್ ಕೆ.ಎಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲ, ವಿಜಯಕುಮಾರ್, ಮಮತಾ ಕೆ. ಎಸ್, ವಿಶ್ವನಾಥ್, ಲಿಂಗಪ್ಪ, ನಾರಾಯಣ್, ರೀನಾ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ವಸಂತ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.