ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಪುತ್ತೂರು ಘಟಕದ ವತಿಯಿಂದ ಏ.16 ಮತ್ತು 17ರಂದು ಗ್ರಾಮೀಣ ಭಾಗಕ್ಕೆ ಹೆಚ್ಚುವರಿ ವಿಶೇಷ ಬಸ್ಗಳನ್ನು ಓಡಿಸಲಾಗುತ್ತದೆ ಎಂದು ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಅವರು ತಿಳಿಸಿದ್ದಾರೆ.
ಏ.16ರಂದು ಹಗಲು ಹೊತ್ತು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಪ್ರತೀ ರೂಟ್ಗಳಲ್ಲೂ ಹೆಚ್ಚುವರಿ ಬಸ್ ಓಡಿಸಲಾಗುವುದು.ಏ.17ರಂದು ಬ್ರಹ್ಮರಥೋತ್ಸವದ ಪ್ರಯುಕ್ತ ಹಗಲಿಡೀ ಪ್ರತೀ ಅರ್ಧ ಗಂಟೆಗೊಮ್ಮೆ ಎಲ್ಲ ರೂಟ್ಗಳಲ್ಲಿ ಬಸ್ ಓಡಿಸಲಾಗುವುದು. ಸಂಜೆ ಹೊತ್ತು ವಿಟ್ಲ, ಉಪ್ಪಿನಂಗಡಿ, ಕಾಣಿಯೂರು, ಬೆಳ್ಳಾರೆ, ಈಶ್ವರಮಂಗಲ ಸೇರಿದಂತೆ ಎಲ್ಲ ಗ್ರಾಮೀಣ ರೂಟ್ಗಳಿಗೆ ಹೋಗಿ ಹಾಲ್ಟ್ ಆಗುವ ಬಸ್ಗಳು ಅಲ್ಲಿಂದ ಮತ್ತೆ ಪುತ್ತೂರಿಗೆ ಜಾತ್ರೆಯ ಭಕ್ತರನ್ನು ಕರೆದುಕೊಂಡು ಬರಲಿದೆ. ರಾತ್ರಿ ರಥೋತ್ಸವ ಮುಗಿದ ಬಳಿಕ,ಬಂದ ಎಲ್ಲ ರೂಟ್ಗಳಿಗೆ ತೆರಳಿ ಹಾಲ್ಟ್ ಆಗಲಿವೆ. ಭಕ್ತರ ಅನುಕೂಲಕ್ಕೆ ತಕ್ಕಂತೆ ಪ್ರತೀ ವರ್ಷದಂತೆ ಈ ವರ್ಷವೂ ಬಸ್ ವ್ಯವಸ್ಥೆ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.