ಪುತ್ತೂರು: ಸವಣೂರು ತರವಾಡು ಕುಟುಂಬವಾದ ‘ಪಟ್ಟೆಕ್ಕಾರ್ಸ್’ ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಕುಟುಂಬ ಸಂಗಮ ಎ.10ರಂದು ನಡೆಯಿತು.
ಖಬರ್ ಝಿಯಾರತ್‌ನೊಂದಿಗೆ ಸಂಗಮಕ್ಕೆ ಚಾಲನೆ ನೀಡಲಾಯಿತು. ಚೇರ್‌ಮೆನ್ ಮಹಮೂದ್ ಹಾಜಿ ಮಾಡಾವು ಅಧ್ಯಕ್ಷತೆ ವಹಿಸಿದ್ದರು. ಮಗ್ರಿಬ್ ಬಳಿಕ ಅರಬಿ ಕುಂಞಿ ಸಾರೆಪುಣಿ ಅಧ್ಯಕ್ಷತೆಯಲ್ಲಿ ಮಜ್ಲಿಸುನ್ನೂರು ಆಲಾಪನೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಚಾಪಲ್ಲ ಮುದರ್ರಿಸ್ ಅಶ್ರಫ್ ಫಾಝಿಲ್ ಬಾಖವಿ ಮಾತನಾಡಿ ಪಟ್ಟೆಕಾರ್ಸ್ ತರವಾಡು ಧಾರ್ಮಿಕವಾಗಿ ಮುನ್ನಡೆಯುತ್ತಿದೆ ಎಂಬುವುದಕ್ಕೆ ಇಂತಹ ಸೌಹಾರ್ದಯುತವಾದ ಸಂಗಮ ಸಾಕ್ಷಿಯಾಗಿದ್ದು ನಮ್ಮ ಜಮಾಅತಿಗೆ ಅಭಿಮಾನದ ಕುಟುಂಬವಾಗಿದೆ ಎಂದು ಅವರು ಹೇಳಿದರು. ಮಾದಕತೆ ಬಗ್ಗೆ ಎಲ್ಲರೂ ಜಾಗರೂಕರಾಗಬೇಕಿದೆ ಎಂದರು.
ಮುಖ್ಯ ಪ್ರಭಾಷಣ ನಡೆಸಿದ ತ್ವಾಹಾ ಝೈನಿ ಪಮ್ಮಲೆಯವರು ಕುಟುಂಬ ಜೀವನದ ಶ್ರೇಷ್ಠತೆಯನ್ನು ವಿವರಿಸಿದರು.
ಅಬೂಬಕ್ಕರ್ ಸಹದಿ ಪಮ್ಮಲೆ, ಇಬ್ರಾಹಿಂ ಮಾಸ್ಟರ್ ಮಾಡಾವು, ಯೂಸುಫ್ ಹಾಜಿ ಬೇರಿಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟೆಕ್ಕಾರ್ಸ್ ಕುಟುಂಬದ ವಿವರಣೆಯನ್ನು ಮುಸ್ತಫ ಪಟ್ಟೆ ನೀಡಿದರು.
ಶಾಲೆ ಹಾಗೂ ಮದ್ರಸಗಳನ್ನು ಡಿಸ್ಟಿಂಕ್ಷನ್ ಅಂಕದೊಂದಿಗೆ ತೇರ್ಗಡೆಯಾದ ಹಾಗೂ ಸಿ.ಎ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮತ್ತು ಪ್ಯಾರಮೆಡಿಕಲ್ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ನೀಡಲಾಯಿತು. ರಿಯಾಝ್ ಫೈಝಿ ಪಟ್ಟೆ ಸ್ವಾಗತಿಸಿ ವಂದಿಸಿದರು.